RBI Governor ಹುದ್ದೆ; ಶಕ್ತಿಕಾಂತ್ ದಾಸ್ ಮೂರು ವರ್ಷದ ಅವಧಿಗೆ ಮರು ನೇಮಕ!
Shaktikanta Das: ಎನ್ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ RBI ಗವರ್ನರ್ ಆಗಿ ನೇಮಕಗೊಂಡ ಮೊದಲ ವ್ಯಕ್ತಿ ಶಕ್ತಿಕಾಂತ ದಾಸ್ ಆಗಿದ್ದಾರೆ. ಈ ಮೊದಲಿದ್ದ ಗವರ್ನರ್ ಊರ್ಜಿತ್ ಪಟೇಲ್ರವರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಈ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು.
ನವ ದೆಹಲಿ (ಅಕ್ಟೋಬರ್ 29); ಶಕ್ತಿಕಾಂತ್ ದಾಸ್ (Shaktikanta Das) ಅವರನ್ನು RBI ಗವರ್ನರ್ ಆಗಿ ಮೂರು ವರ್ಷದ ಅವಧಿಗೆ ಕೇಂದ್ರ ಸರ್ಕಾರ ಮರುನೇಮಕ ಮಾಡಿದೆ. ಡಿಸೆಂಬರ್ 2024ರವರೆಗೆ ಅವರು ಅದೇ ಸ್ಥಾನದಲ್ಲಿ ಮುಂದುವರೆಯ ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾರವರನ್ನು (Amit Shah) ಒಳಗೊಂಡ ಕ್ಯಾಬಿನೆಟ್ (Central Cabinet) ಸಮಿತಿ ಗುರುವಾರ ಸಂಜೆ ತಿಳಿಸಿದೆ. ಶಕ್ತಿಕಾಂತ್ ದಾಸ್ರವರನ್ನು ಡಿಸೆಂಬರ್ 10, 2021ರಿಂದ ಡಿಸೆಂಬರ್ 10,2024ರವರೆಗೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಯಾವುದೇ ಮೊದಲ ಆದೇಶದವರೆಗೆ RBI ಗವರ್ನರ್ ಆಗಿ ನೇಮಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶಕ್ತಿಕಾಂತ ದಾಸ್ ಮರು ನೇಮಕ:
ಶಕ್ತಿಕಾಂತ ದಾಸ್ರವರು 2018ರ ಡಿಸೆಂಬರ್ನಲ್ಲಿ RBI ಗವರ್ನರ್ ಆಗಿ ನೇಮಕಗೊಂಡಿದ್ದರು. ಇದೇ ಡಿಸೆಂಬರ್ಗೆ ಅವರ ಅಧಿಕಾರವಧಿ ಮುಕ್ತಾಯವಾಗಲಿದ್ದ ಹಿನ್ನೆಲೆಯಲ್ಲಿ ಅವರನ್ನು ಮರುನೇಮಕ ಮಾಡಲಾಗಿದೆ. ಈ ಮೊದಲು ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಎನ್ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ RBI ಗವರ್ನರ್ ಆಗಿ ನೇಮಕಗೊಂಡ ಮೊದಲ ವ್ಯಕ್ತಿ ಶಕ್ತಿಕಾಂತ ದಾಸ್ ಆಗಿದ್ದಾರೆ. ಈ ಮೊದಲಿದ್ದ ಗವರ್ನರ್ ಊರ್ಜಿತ್ ಪಟೇಲ್ರವರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಈ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು.
2016ರಲ್ಲಿ ನೋಟುಗಳು ಅಮಾನ್ಯೀಕರಣದ ಸಂದರ್ಭದಲ್ಲಿ ಊರ್ಜಿತ್ ಪಟೇಲ್ ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಿಗೆ ಊರ್ಜಿತ್ ಪಟೇಲ್ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಆ ಕೆಲಸದಿಂದ ವಜಾ ಮಾಡಿ ಶಕ್ತಿಕಾಂತ ದಾಸ್ ರನ್ನು ನೇಮಕ ಮಾಡಲಾಗಿತ್ತು. ಅದಕ್ಕೂ ಮೊದಲು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಸಹ ಮೋದಿ ಸರ್ಕಾರದ ನೋಟು ಅಮಾನ್ಯೀಕರಣ ಸೇರಿ ಹಲವು ಕ್ರಮಗಳನ್ನು ವಿರೋಧಿಸಿದ್ದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ