• Home
  • »
  • News
  • »
  • national-international
  • »
  • Fastag: ಟೋಲ್‌ ಗಳಲ್ಲಿ ಟ್ರಾಫಿಕ್ ಜಾಮ್ ತಡೆಯಲು ಫಾಸ್ಟ್‌ ಟ್ಯಾಗ್‌ ಬದಲಿಗೆ ANPR ವ್ಯವಸ್ಥೆ

Fastag: ಟೋಲ್‌ ಗಳಲ್ಲಿ ಟ್ರಾಫಿಕ್ ಜಾಮ್ ತಡೆಯಲು ಫಾಸ್ಟ್‌ ಟ್ಯಾಗ್‌ ಬದಲಿಗೆ ANPR ವ್ಯವಸ್ಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೋಲ್ ಸಂಗ್ರಹಕ್ಕಾಗಿ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾಗಳು ಎಂಬ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿದೆ.

  • Trending Desk
  • 4-MIN READ
  • Last Updated :
  • Share this:

Automatic Number Plate Reader: ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ವ್ಯವಸ್ಥೆಯಾಗಿರುವ ಫಾಸ್ಟ್‌ ಟ್ಯಾಗ್‌ (Fastag) ಬಂದ ಮೇಲೆ ಜನರಿಗೆ ಸಾಕಷ್ಟು ಅನುಕೂಲವಾಗಿತ್ತು. ಅದರಲ್ಲೂ ಮುಖ್ಯವಾಗಿ ಕ್ಯಾಶ್‌ (Cash Transaction) ಕೊಡೋದು, ಚಿಲ್ಲರೆ ಇಲ್ಲ ಅನ್ನುವಂಥ ಕಿರಿಕಿರಿ ಗಳಿಂದ ಮುಕ್ತಿ ಸಿಕ್ಕಿತ್ತು. ಆದ್ರೆ ಬಹುತೇಕರು ಫಾಸ್ಟ್‌ ಟ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೇಲೆ ಟೋಲ್‌ ಗೇಟ್‌ ಗಳಲ್ಲಿ (Toll Gate) ಜಾಮ್‌ ಕಾಮನ್‌ ಆಗಿತ್ತು. ಹಾಗಾಗಿ ಇದಕ್ಕೆ ಬದಲಿ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೌದು, ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೇಂದ್ರ ಸರ್ಕಾರ (Central Government) ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.


ಟೋಲ್ ಸಂಗ್ರಹಕ್ಕಾಗಿ ಎಎನ್‌ಪಿಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾಗಳು ಎಂಬ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿದೆ.


ಜಿಪಿಎಸ್ ಆಧಾರಿತ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?


ಎಎನ್‌ಪಿಆರ್ ಅಥವಾ ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯು ನಂಬರ್‌ ಪ್ಲೇಟ್‌ ರೀಡ್‌ ಮಾಡುತ್ತದೆ. ನಂತರ ಟೋಲ್ ತೆರಿಗೆಯನ್ನು ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.


ಸಾಂದರ್ಭಿಕ ಚಿತ್ರ


ಈ ವ್ಯವಸ್ಥೆಯು ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ ಗಳಲ್ಲಿ ಸ್ಥಾಪಿಸಲಾದ ಕ್ಯಾಮೆರಾಗಳನ್ನು ಅವಲಂಬಿಸಿರುತ್ತದೆ. ಈ ಕ್ಯಾಮೆರಾಗಳು ನಂಬರ್‌ ಪ್ಲೇಟ್‌ ಫೋಟೋವನ್ನು ಕ್ಲಿಕ್ ಮಾಡುತ್ತವೆ ಮತ್ತು ವಾಹನ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ತೆರಿಗೆಯನ್ನು ಕಡಿತಗೊಳಿಸುತ್ತವೆ. ಹಾಗಾಗಿ ಈ ಹೊಸ ANPR ವ್ಯವಸ್ಥೆಯು ಫಾಸ್ಟ್ಯಾಗ್ ಬದಲಿಗೆ ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದು.


1 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ವ್ಯರ್ಥ


ಭಾರತೀಯ ಸಾರಿಗೆ ನಿಗಮ ಮತ್ತು ಐಐಎಂ ಕಲ್ಕತ್ತಾದ ವರದಿಯ ಪ್ರಕಾರ, ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವುದರಿಂದ ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ವ್ಯರ್ಥವಾಗುತ್ತಿದೆಯಂತೆ.


ಟೋಲ್ ಪ್ಲಾಜಾದಲ್ಲಿ ಉಂಟಾಗುವ ಜಾಮ್‌ನಿಂದ ಪ್ರತಿ ವರ್ಷ ಸುಮಾರು 45 ಸಾವಿರ ಕೋಟಿ ರೂಪಾಯಿಗಳು ವ್ಯರ್ಥವಾಗುತ್ತವೆ. ಅಂದರೆ ಒಟ್ಟಾರೆ ಟೋಲ್ ನಾಕಾಗಳಿಂದ ದೇಶಕ್ಕೆ 1 ಲಕ್ಷದ 45 ಸಾವಿರ ಕೋಟಿ ನಷ್ಟವಾಗಿದೆ.


ಶೀಘ್ರದಲ್ಲೇ ಜಿಪಿಎಸ್ ವ್ಯವಸ್ಥೆ


ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಹಣವನ್ನು ಉಳಿಸುವ ಜೊತೆಗೆ ದೇಶದ ಆರ್ಥಿಕ ನಷ್ಟವನ್ನು ಉಳಿಸಲು ಜಿಪಿಎಸ್ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.


ವಾಹನದ ನಂಬರ್ ಪ್ಲೇಟ್ ಕೂಡ ಬದಲಾಗಬಹುದು!ಈ ಮಧ್ಯೆ ವಾಹನದ ನಂಬರ್ ಪ್ಲೇಟ್‌ನಲ್ಲೂ ಸರ್ಕಾರ ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನು ಮಾಡಬಹುದು.


ಈಗ ಹೊಸ ನಂಬರ್ ಪ್ಲೇಟ್‌ನಲ್ಲಿ ಜಿಪಿಎಸ್ ಇರುತ್ತದೆ. ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯ ಹೊಸ ವಾಹನಗಳಲ್ಲಿ ಜಿಪಿಎಸ್ ನಂಬರ್ ಪ್ಲೇಟ್ ಅಳವಡಿಸಲು ಆದೇಶ ಹೊರಡಿಸಿದೆ.


ನಂಬರ್ ಪ್ಲೇಟ್‌ಗಳಲ್ಲಿ  ಜಿಪಿಎಸ್


ಇದರೊಂದಿಗೆ ಈಗ ಹಳೆಯ ವಾಹನಗಳಿಗೂ ಹೊಸ ನಂಬರ್ ಪ್ಲೇಟ್ ಅಳವಡಿಸಬೇಕಾಗುತ್ತದೆ. ಅದರಲ್ಲಿ ನಂಬರ್ ಪ್ಲೇಟ್ ಗೆ ಜಿಪಿಎಸ್ ವ್ಯವಸ್ಥೆ ಜೋಡಿಸಲಾಗುತ್ತದೆ.


ಈ ಹೊಸ ನಂಬರ್ ಪ್ಲೇಟ್‌ಗಳಲ್ಲಿ ಹೊಸ ಜಿಪಿಎಸ್ ಕೂಡ ಅಳವಡಿಸಲಾಗುವುದು. ಇದರೊಂದಿಗೆ, ಟೋಲ್ ಪ್ಲಾಜಾದಲ್ಲಿ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗುವುದು.


ಇದರಿಂದಾಗಿ ವಾಹನವು ಹೊರಟು ಹೋದ ತಕ್ಷಣ ನಿಮ್ಮ ಖಾತೆಯಿಂದ ಟೋಲ್ ತೆರಿಗೆ ಹಣವನ್ನು ಕಡಿತಗೊಳಿಸಲಾಗುತ್ತದೆ. ಒಟ್ಟಾರೆ, ತಂತ್ರಜ್ಞಾನ ಆವಿಷ್ಕಾರಗೊಂಡಂತೆ ನಮ್ಮಲ್ಲಿಯೂ ಅದನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ.


ಇದನ್ನೂ ಓದಿ: Corona Virus | Lemon Price: ಕೊರೊನಾ ಕೇಸ್ ಹೆಚ್ಚಾಗ್ತಿದ್ದಂತೆ ನಿಂಬೆ ಹಣ್ಣಿಗೆ ಭಾರೀ ಬೇಡಿಕೆ


ಸಮಯ, ಹಣ ಉಳಿತಾಯ


ಇಂತಹ ತಂತ್ರಜ್ಞಾನಗಳಿಂದ ಜನರ ಸಮಯ, ಹಣ ಎರಡೂ ಉಳಿತಾಯವಾಗುತ್ತದೆ. ಅಲ್ಲದೇ ಟೋಲ್‌ ಗಳಲ್ಲಿ ಉಂಟಾಗುತ್ತಿದ್ದ ಜಾಮ್‌ ನಿಂದಾಗಿ ಮಾನಸಿಕ ಕಿರಿಕಿರಿಯೂ ತಪ್ಪುತ್ತದೆ.


ಆದ್ದರಿಂದ ಕೇಂದ್ರ ಸರ್ಕಾರದ ಈ ಕ್ರಮ ಸಾರ್ವಜನಿಕರಿಗೆ ವರದಾನವಾಗಿಯೇ ಪರಿಣಮಿಸುತ್ತದೆ. ಹೊಸದರಲ್ಲಿ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೆನಿಸಿದರೂ ಮುಂದೆ ಅದರಿಂದ ಅನುಕೂಲವೇ ಆಗುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Published by:Mahmadrafik K
First published: