ಕೆಲವರು ತನ್ನ ಜೀವನ ಸಾಗಿಸುವ ಉದ್ದೇಶದಿಂದ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಕೃಷಿಯನ್ನು (Agriculture) ಮಾಡುತ್ತಾರೆ. ಆದರೆ ಈ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಮನುಷ್ಯರು ಕಷ್ಟಪಟ್ಟು ಬೆಳೆಸಿದಂತಹ ಕೃಷಿಗಳನ್ನೆಲ್ಲಾ ಕ್ಷಣಮಾತ್ರದಲ್ಲಿ ನಾಶ ಮಾಡುತ್ತದೆ. ಇದರಿಂದ ರೈತರು (Farmers) ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಕೊನೆಗೆ ಯಾವುದ್ಯಾವುದೇ ರೀತಿಯಲ್ಲಿ ಓಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಇದೇ ರೀತಿ ಕೆರಿಬಿಯನ್ (Caribbean) ಪ್ರದೇಶದಲ್ಲೊಂದು ನಡೆದಿದ್ದು, ರೈತರು ಬೆಲೆಸಿದ ಬೆಳೆಯನ್ನು ಕೋತಿಗಳು ಹಾನಿ ಮಾಡಿವೆ. ಇದೀಗ ಅವುಗಳನ್ನೆಲ್ಲಾ ಕೊಲ್ಲುವುದೆಂದು ನಿರ್ಧರಿಸಿದ್ದಾರೆ.
ಡಚ್ ದ್ವೀಪದ ಭೂಪ್ರದೇಶದಲ್ಲಿ ವಾಸವಿರುವ ವರ್ವೆಟ್ ಕೋತಿಗಳು ಅಕ್ಕಪಕ್ಕದ ಬೆಳೆಗಳನ್ನು ನಾಶ ಮಾಡುತ್ತಿದ್ದು ಬೆಳೆ ಹಾನಿಗೆ ಕಾರಣವಾಗಿವೆ. ಮಂಗಗಳು ತಮ್ಮ ಹೊಲದಲ್ಲಿ ದಾಂಧಲೆ ಎಬ್ಬಿಸುತ್ತಿದ್ದು, ಬೆಳೆಗಳನ್ನು ನಾಶ ಮಾಡುತ್ತಿವೆ. ಇದು ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಸರ್ಕಾರಕ್ಕೆ ಅಲ್ಲಿನ ರೈತರು ದೂರನ್ನು ನೀಡಿದ ನಂತರ ಸಿಂಟ್ ಮಾರ್ಟನ್, ವರ್ವೆಟ್ ಕೋತಿಗಳನ್ನು ಸಂಪೂರ್ಣ ಕೊಲ್ಲುವ ಯೋಜನೆಯನ್ನು ರೂಪಿಸಿದೆ.
450 ಕೋತಿಗಳನ್ನು ಸೆರೆಹಿಡಿಯಲು ಪ್ಲ್ಯಾನ್
ಫ್ರೆಂಚ್ ಸೇಂಟ್ ಮಾರ್ಟಿನ್ ಗಡಿಯಲ್ಲಿರುವ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 450 ಕೋತಿಗಳನ್ನು ಸೆರೆಹಿಡಿಯಲು ಮತ್ತು ದಯಾಮರಣ ನೀಡಲು ಸರ್ಕಾರ ನೇಚರ್ ಫೌಂಡೇಶನ್ ಸೇಂಟ್ ಮಾರ್ಟೆನ್ ಎನ್ಜಿಒಗೆ ಯೋಜನೆಯನ್ನು ಒಪ್ಪಿಸಿದ್ದಾರೆ. ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಿಂಟ್ ಮಾರ್ಟನ್ನಲ್ಲಿನ ಮಂಗಗಳ ಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ ಮತ್ತು ಸಿಂಟ್ ಮಾರ್ಟನ್ನ ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಪರಿಣಾಮಗಳು ತೀವ್ರವಾಗಿರುತ್ತದೆ ಎಂದು ಎನ್ಜಿಒ ಹೇಳಿದೆ.
ಫೌಂಡೇಶನ್ನ ರೇಂಜರ್ ಯುಸೆಬಿಯೊ ರಿಚರ್ಡ್ಸನ್, ಯೋಜನೆಯ ಯಶಸ್ಸಿಗೆ ಸರ್ಕಾರದ ಧನಸಹಾಯವು ಅಗತ್ಯವಾಗಿದೆ ಮತ್ತು ಸಾಮಗ್ರಿಗಳು, ಉಪಕರಣಗಳು ಹಾಗೂ ತರಬೇತಿಗಾಗಿ ಹಣವನ್ನು ಬಳಸಲಾಗಿದೆ ಎಂದು ಹೇಳಿದರು. ಯೋಜನೆಯಲ್ಲಿ ತಮ್ಮ ಭಾಗವನ್ನು ಚರ್ಚಿಸಲು ಈ ವಾರ ಫ್ರೆಂಚ್ ಸೇಂಟ್ ಮಾರ್ಟಿನ್ನಿಂದ ಸಂಬಂಧಿತ ಏಜೆನ್ಸಿಗಳನ್ನು ಭೇಟಿ ಮಾಡಲು ಫೌಂಡೇಶನ್ ಯೋಜಿಸಿದೆ.
"ನಿಯಂತ್ರಿಸುವುದು ಕಷ್ಟಸಾಧ್ಯ"
ಫೌಂಡೇಶನ್ನ ಮ್ಯಾನೇಜರ್, ಲೆಸ್ಲಿ ಹಿಕರ್ಸನ್ ಮಾತನಾಡಿ, "ಒಂದು ಜಾತಿಯು ಸ್ಥಳೀಯವಲ್ಲದ ಪ್ರದೇಶದಲ್ಲಿ ಅದರ ಸಂತತಿ ಹೆಚ್ಚಾದಾಗ ಅವುಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ವರ್ವೆಟ್ ಕೋತಿಗಳ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ನಮ್ಮ ಮುಂದಿನ ಪೀಳಿಗೆಗಾಗಿ ದ್ವೀಪ ಪ್ರಾಂತ್ಯವನ್ನು ಆರೋಗ್ಯವಾಗಿರಿಸುವುದು ನಿರ್ವಹಣೆಯು ಒಂದು ಪ್ರಮುಖ ಅಂಶವಾಗಿದೆ." ಎಂದು ಹೇಳಿದರು.
ಸರ್ಕಾರದ ಯೋಜನೆಗೆ ಹಲವರಿಂದ ವಿರೋಧ
ಆದಾಗ್ಯೂ ಪ್ರಾಣಿ ಪ್ರಿಯರು ಸರ್ಕಾರದ ಈ ಯೋಜನೆಗೆ ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಕೊಲ್ಲುವುದನ್ನು ಬಿಟ್ಟು ಬೇರೆ ಮಾರ್ಗಗಳನ್ನು ಅನುಸರಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ವೆರ್ವೆಟ್ ಮಂಕಿ ಫೌಂಡೇಶನ್ನ ಸಂಸ್ಥಾಪಕ ಡೇವ್ ಡು ಟೋಯಿಟ್ ಮಾತನಾಡಿ, "ಪುರುಷ ಕೋತಿಗಳಿಗೆ ಸಂತಾನಹರಣ ಮಾಡುವುದು ಮತ್ತು ಹೆಣ್ಣುಕೋತಿಗಳ ಸಂತಾನೋತ್ಪತ್ತಿಯ ಕ್ಷಮತೆಯನ್ನು ಮೊಟಕುಗೊಳಿಸುವುದು ಉತ್ತಮ ವಿಧಾನ ಮತ್ತು ಹೆಚ್ಚು ಸಾರ್ವಜನಿಕವಾಗಿ ಸ್ವೀಕಾರಾರ್ಹವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಪ್ರಾಣಿ ಪ್ರಿಯರು ಕೂಡ ಕ್ರಿಮಿನಾಶಕ ಅಥವಾ ಸಂತಾನಹರಣವು ಹೆಚ್ಚುತ್ತಿರುವ ಕೋತಿ ಜಾತಿಗಳ ಸಂಖ್ಯೆಯನ್ನು ನಿಭಾಯಿಸಲು ಉತ್ತಮ ಮಾರ್ಗ ಎಂದು ಸರ್ಕಾರಕ್ಕೆ ತಮ್ಮ ಅಹವಾಲು ತಿಳಿಸಿದ್ದಾರೆ.
ವರ್ವೆಟ್ ಕೋತಿಗಳು
ವರ್ವೆಟ್ ಕೋತಿಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿವೆ ಮತ್ತು 17ನೇ ಶತಮಾನದಿಂದ ಕೆರಿಬಿಯನ್ ದೇಶದಲ್ಲಿ ಕಂಡು ಬರುತ್ತವೆ. ವರ್ವೆಟ್ ಮಂಕಿ ಬೂದು-ಕಂದು ಬಣ್ಣದ ದೇಹಗಳನ್ನು ಹೊಂದಿದೆ ಮತ್ತು ಬಿಳಿ ತುಪ್ಪಳದಿಂದ ಕೂಡಿದ ಕಪ್ಪು ಮುಖಗಳನ್ನು ಹೊಂದಿದೆ.
ಇದನ್ನೂ ಓದಿ: 55 ಇಂಚಿನ ಸ್ಮಾರ್ಟ್ಟಿವಿಯನ್ನು ಕೇವಲ 1,400 ರೂಪಾಯಿಗೆ ಖರೀದಿಸಿ! ಬಂಪರ್ ಆಫರ್
ಈ ಕೋತಿಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾದರೂ ಸಹ ಸೇಂಟ್ ಕಿಟ್ಸ್ ಮತ್ತು ನೆವಿಸ್ನಂತಹ ಕೆಲವು ಕೆರಿಬಿಯನ್ ದ್ವೀಪಗಳಲ್ಲಿ ಇವುಗಳ ಸಂತತಿ ಮಿತಿಮೀರಿ ಬೆಳೆದಿದೆ. 2020 ರಲ್ಲಿ ನೇಚರ್ ಫೌಂಡೇಶನ್ ಸೇಂಟ್ ಮಾರ್ಟನ್ ನಡೆಸಿದ ಸಂಶೋಧನೆಯು ದ್ವೀಪದ ಡಚ್ ಭಾಗದಲ್ಲಿ ಸುಮಾರು 450 ವರ್ವೆಟ್ ಕೋತಿಗಳು ವಾಸಿಸುತ್ತಿವೆ ಎಂದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ