New Rules For Abortion: ಗರ್ಭಪಾತದ ಅವಧಿಯನ್ನು 24 ವಾರಕ್ಕೆ ವಿಸ್ತರಿಸಿದ ಕೇಂದ್ರ; ಈ ವರ್ಗದ ಮಹಿಳೆಯರಿಗೆ ಮಾತ್ರ ಅವಕಾಶ

ಮೆಡಿಕಲ್​ ಟರ್ಮಿನೇಶನ್​ ಆಫ್​ ಪ್ರೆಗ್ನನ್ಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಈಗ ಈ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ವಿಸ್ತರಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಅ. 13): ಭಾರತದಲ್ಲಿ ಗರ್ಭಪಾತ ಕಾನೂನು ವಿರೋಧ. ಆದರೆ, ಕೆಲವು ವರ್ಗದ ಮಹಿಳೆಯರಿಗೆ ಗರ್ಭಪಾತಕ್ಕೆ (Abortion) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಮೆಡಿಕಲ್​ ಟರ್ಮಿನೇಶನ್​​ ಆಫ್ ಪ್ರೆಗ್ನನ್ಸಿ ಕಾಯ್ದೆ 2021 ಅಡಿ (Medical Termination of Pregnancy (Amendment) Rules, 2021,) ಅಪ್ರಾಪ್ತರು, ಅತ್ಯಾಚಾರ ಸಂತ್ರಸ್ತರು, ವಿಧವೆಯರು, ವಿಚ್ಛೇದಿತರು, ವೈದ್ಯಕೀಯ ಸಮಸ್ಯೆ ಅನುಭವಿಸುತ್ತಿರುವವರಿಗೆ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶ ವಿದೆ. ಈ ವರ್ಗದ ಮಹಿಳೆಯರು ಗರ್ಭಪಾತಕ್ಕೆ ಮುಂದಾದರೂ ಅದು 20 ವಾರಗಳ ಒಳಗೆ ಮಾಡಿಸಬೇಕು ಎಂದು ಕಾನೂನಿತು. ಈ ಮೆಡಿಕಲ್​ ಟರ್ಮಿನೇಶನ್​ ಆಫ್​ ಪ್ರೆಗ್ನನ್ಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಈಗ ಈ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ವಿಸ್ತರಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ. 

    ಯಾವ ಸಂದರ್ಭದಲ್ಲಿ ಗರ್ಭಪಾತ ಮಾಡಿಸಬಹುದು

    ಹೊಸ ನಿಯಮದ ಅನುಸಾರ ಇದೀಗ ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣದ ವಿರೂಪತೆಯ ಪ್ರಕರಣ, ಇಲ್ಲ ತಾಯಿ ಜೀವನಕ್ಕೆ ಗಣನೀಯ ಅಪಾಯವಿದೆ. ತಾಯಿಯ ದೈಹಿಕ ಅಥವಾ ಮಾನಸಿಕ ವೈಪರೀತ್ಯಗಳಿಂದ ಮಗು ವಿಕಲಚೇತನರಾಗಬಹುದು. ಅಥವಾ ಕೆಲವೊಮ್ಮೆ ಅಪಾಯದ ತುರ್ತು ಸಂದರ್ಭದಲ್ಲಿ ಗರ್ಭಪಾತಕ್ಕೆ ಮುಂದಾಗಲು ಸರ್ಕಾರ ಅನುಮತಿ ನೀಡಿದೆ. ಇನ್ನು ಈ. ಹೊಸ ಮೆಡಿಕಲ್​ ಟರ್ಮಿನೇಶನ್​​ ಆಫ್ ಪ್ರೆಗ್ನನ್ಸಿ (ತಿದ್ದುಪಡಿ) ಕಾಯ್ದೆ, 2021 ರ ಅಡಿಯಲ್ಲಿ ಸಂಸತ್ತಿನಲ್ಲಿ ಮಾರ್ಚ್‌ನಲ್ಲಿ ಅಂಗೀಕರಿಸಲಾಗಿದೆ

    24 ವಾರ ಕಾಲ ಗರ್ಭಪಾತಕ್ಕೆ ಅವಕಾಶ

    ಮೊದಲು, ಗರ್ಭಪಾತದ ನಂತರ 12 ವಾರಗಳಲ್ಲಿ ಗರ್ಭಧಾರಣೆ ಮಾಡಿದರೆ ಒಬ್ಬ ವೈದ್ಯರ ಅಭಿಪ್ರಾಯ ಮತ್ತು 12 ರಿಂದ 20 ವಾರಗಳ ನಡುವೆ ಇಬ್ಬರು ವೈದ್ಯರ ಸಲಹೆ ಪಡೆಯಬೇಕಿತ್ತು. ಹೊಸ ನಿಯಮಗಳ ಪ್ರಕಾರ, ಭ್ರೂಣದ ವಿರೂಪತೆಯ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಾವಸ್ಥೆಯನ್ನು ಕೊನೆಗೊಳಿಸಬಹುದಾಗಿದೆ. ಮಹಿಳೆಯ ಜೀವಕ್ಕೆ ಹೆಚ್ಚಿನ ಅಪಾಯವಿದ್ದರೆ ಮತ್ತು ಭ್ರೂಣಕ್ಕೆ ಭವಿಷ್ಯದಲ್ಲಿ ಗಮನೀಯ ವಿರೂಪಗಳು ಉಂಟಾಗುವ ಸಾಧ್ಯತೆಗಳು ಕಂಡುಬಂದರೆ ನ್ಯಾಯಾಲಯವು 24 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶ ನೀಡಲಾಗುವುದು

    ಇದನ್ನು ಓದಿ: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

    ಇನ್ನು ಈ ಅಧಿಸೂಚನೆಯಲ್ಲಿ ಭ್ರೂಣದ ಅಸಹಜತೆಗಳ ಬಗ್ಗೆ ವೈದ್ಯಕೀಯ ಮಂಡಳಿಯಿಂದ ರೋಗನಿರ್ಣಯ ಮಾಡಲ್ಪಟ್ಟ ಸಂದರ್ಭದಲ್ಲಿ ಗರ್ಭಾವಸ್ಥೆ ಅವಧಿಯ ಮಿತಿ ಅನ್ವಯಿಸುವುದಿಲ್ಲ. ವೈದ್ಯಕೀಯ ಮಂಡಳಿಯ ಸಂಯೋಜನೆ, ಕಾರ್ಯಗಳು ಮತ್ತು ಇತರ ವಿವರಗಳನ್ನು ನಂತರ ಕಾಯ್ದೆಯಡಿ ನಿಯಮಗಳಲ್ಲಿ ಸೂಚಿಸಬೇಕು.

    ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

    ಇಬ್ಬರು ವೈದ್ಯರಿಂದ ಶಿಫಾರಸು
    20 ವಾರಗಳ ನಂತರದಲ್ಲಿ ಗರ್ಭಪಾತಕ್ಕೆ ಮುಂದಾಗುವವರು ವೈದ್ಯರಿಂದ ಶಿಫಾರಸು ಪಡೆಯುವುದ ಅಗತ್ಯ. ಇಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಶಿಫಾರಸು ಪಡೆದ ಬಳಿಕವೇ ಈ ಕಾರ್ಯಕ್ಕೆ ಅನುಮತಿ ಸಿಗಲಿದೆ. ಗರ್ಭಪಾತವನ್ನು ಮಾಡಿಸಿಕೊಂಡ ಮಹಿಳೆಯ ಹೆಸರು ಮತ್ತು ಇತರ ವಿವರಗಳನ್ನು ಯಾವುದೇ ಕಾನೂನಾತ್ಮಕ ವ್ಯಕ್ತಿಗೆ ಹೊರತುಪಡಿಸಿ ಇತರರಿಗೆ ಬಹಿರಂಗಪಡಿಸುವಂತಿಲ್ಲ ಎಂದು ಕೂಡ ತಿದ್ದುಪಡಿಯಲ್ಲಿ ತಿಳಿಸಲಾಗಿದೆ
    Published by:Seema R
    First published: