Government Jobs: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಿಇಟಿ ಅರ್ಹತಾ ಪರೀಕ್ಷೆ: ಕೇಂದ್ರ ಸಂಪುಟ ಸಮ್ಮತಿ

ವಿವಿಧ ಸರ್ಕಾರಿ ಕೆಲಸಗಳಿಗಾಗಿ ಅರ್ಜಿ ಸಲ್ಲಿಸಲು ಹಲವು ಪರೀಕ್ಷೆಗಳನ್ನು ಬರೆಯುವ ಬದಲು ಒಂದು ಸಾಮಾನ್ಯ ಅರ್ಜತಾ ಪರೀಕ್ಷೆ ನಡೆಸಲು ಕೇಂದ್ರ ಮುಂದಾಗಿದೆ. ಇದರಿಂದ ಸರ್ಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆ ಸರಳಗೊಳ್ಳುವ ನಿರೀಕ್ಷೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ನವದೆಹಲಿ(ಆ. 19): ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್​ಆರ್​ಎ) ರಚನೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಇವತ್ತು ಕೇಂದ್ರ ಸಂಪುಟವು ಎನ್​ಆರ್​ಎ ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಈ ನ್ಯಾಷನಲ್ ರೆಕ್ರೂಟ್ಮೆಂಟ್ ಏಜೆನ್ಸಿಯು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನ ನಿಭಾಯಿಸಲಿದೆ. ಗೆಜೆಟೆಡ್ ಅಲ್ಲದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಇನ್ಮುಂದೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಯಲಿದೆ. ಬಹು ಪರೀಕ್ಷೆಗಳನ್ನ ಬರೆಯುವುದರ ಬದಲು ಉದ್ಯೋಗಾಕಾಂಕ್ಷಿಗಳು ಒಂದು ಕಾಮನ್ ಎಲಿಜಿಬಿಲಿಟಿ ಟೆಸ್ಟ್ ಬರೆದರೆ ಸಾಕಾಗುತ್ತದೆ. ಕೇಂದ್ರ ಸರ್ಕಾರದ ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಮತ್ತು ಸಿ ದರ್ಜೆಯ ಹುದ್ದೆಗಳಿಗೆ ಈ ಸಿಇಟಿ ಅನ್ವಯವಾಗುತ್ತದೆ.

    ಮೂರು ಹಂತಗಳಲ್ಲಿ ಸಿಇಟಿ ಪರೀಕ್ಷೆಗಳಿರುತ್ತವೆ. ಪದವೀಧರರು, 12ನೇ ತರಗತಿ ಪಾಸಾದವರು ಮತ್ತು 10ನೇ ತರಗತಿ ಪಾಸಾದವರಿಗೆ ಪ್ರತ್ಯೇಕ ಸಾಮಾನ್ಯ ಅರ್ಹತಾ ಪರೀಕ್ಷೆ ಇರುತ್ತದೆ. ಎಸ್​ಎಸ್​​ಸಿ, ಆರ್​ಆರ್​ಬಿ ಮತ್ತು ಐಬಿಪಿಎಸ್ ಸಂಸ್ಥೆಗಳು ತಾಂತ್ರಿಕೇತರ ಹುದ್ದೆಗಳಿಗೆ ನಡೆಸುವ ಟಯರ್-1 ಪರೀಕ್ಷೆಗಳ ಬದಲು ಸಿಇಟಿ ಇರುತ್ತದೆ. ಈ ಸಿಇಟಿ ಪರೀಕ್ಷೆಯ ಅಂಕಗಳು ಮೂರು ವರ್ಷದವರೆಗೂ ಗಣನೆಯಲ್ಲಿರುತ್ತವೆ. ಇವೇ ಅಂಕಗಳ ಆಧಾರದ ಮೇಲೆ ಮೂರು ವರ್ಷಗಳವರೆಗೆ ಅಭ್ಯರ್ಥಿಯು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ನಡೆಸಬಹುದು. ನಾನ್-ಗೆಜೆಟೆಡ್ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿ ಸಿಇಟಿಯಲ್ಲಿ ಗಳಿಸಿದ ಅಂಕಗಳೇ ಆಧಾರವಾಗಿರುತ್ತದೆ. ಸಿಇಟಿ ಅಂಕಗಳ ಮೂಲಕ ಹುದ್ದೆಗಳಿಗೆ ಶಾರ್ಟ್​ಲಿಸ್ಟ್ ಆದ ಅಭ್ಯರ್ಥಿಗಳಿಗೆ ಆಯಾ ನೇಮಕಾತಿ ಸಂಸ್ಥೆಗಳು ಕೊನೆಯ ಸುತ್ತಿನ ಪರೀಕ್ಷೆ ನಡೆಸಬಹುದು.

    ಇದನ್ನೂ ಓದಿ: ನೆಗಡಿಯೋ, ಕೊರೋನಾ ರೋಗವೋ ಗೊಂದಲವಾ? ಈ ಅಂಶ ನೆನಪಲ್ಲಿಡಿ

    ಕಂಪ್ಯೂಟರ್​ನಲ್ಲಿ ಆಯೋಜಿಸಲಾಗುವ ಸಿಇಟಿ ಪರೀಕ್ಷೆಯನ್ನು ಒಬ್ಬ ಅಭ್ಯರ್ಥಿ ತನ್ನ ವಯೋಮಿತಿಯೊಳಗೆ ಎಷ್ಟು ಬಾರಿಯಾದರೂ ಬರೆಯಬಹುದಾಗಿದೆ. ಮೀಸಲಾತಿ ಸೌಲಭ್ಯ ಹೊಂದಿದವರಿಗೆ ಹೆಚ್ಚಿನ ವಯೋಮಿತಿ ಇರುತ್ತದೆ.

    ನ್ಯಾಷನಲ್ ರೆಕ್ರುಟ್ಮೆಂಟ್ ಏಜೆನ್ಸಿಯು ದೇಶದ ಕೋಟ್ಯಂತರ ಯುವಜನರಿಗೆ ವರದಾನವಾಗಲಿದೆ. ಕಾಮನ್ ಎಲಿಜಿಬಿಲಿಟಿ ಟೆಸ್ಟ್ ಬಹುಪರೀಕ್ಷೆಗಳ ಪ್ರಮೇಯವನ್ನು ತಪ್ಪಿಸಿ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನ ಉಳಿಸುತ್ತದೆ. ಪಾರದರ್ಶಕತೆಯೂ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.





    ಸಿಇಟಿ ಮೂಲಕ ನೇಮಕಾತಿ ಪ್ರಕ್ರಿಯೆ ಸರಳಗೊಳಿಸಲು ಕೇಂದ್ರ ಸಂಪುಟ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಕೂಡ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ನಟ ಸುಶಾಂತ್‌ ಸಿಂಗ್ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆ ನಮಗಿದೆ; ಬಿಹಾರದ ಸಿಎಂ ನಿತೀಶ್‌ ಕುಮಾರ್‌ ವಿಶ್ವಾಸ
    Published by:Vijayasarthy SN
    First published: