ಆದೇಶ ಅನುಸರಿಸುವಂತೆ ಟ್ವಿಟರ್​ಗೆ ಕೇಂದ್ರದಿಂದ ನೋಟಿಸ್​ ಜಾರಿ

ಟ್ವಿಟ್ಟರ್

ಟ್ವಿಟ್ಟರ್

ಟ್ವಿಟರ್​ ಮಧ್ಯವರ್ತಿಯಾಗಿದ್ದು, ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕಾಗಿದೆ. ಒಂದು ವೇಳೆ ಅವರು ಸರ್ಕಾರದ ಈ ನಿರ್ದೇಶನವನ್ನು ಪಾಲಿಸದಿದ್ದರೆ, ದಂಡನ ಕ್ರಮಕ್ಕೆ ಗುರಿಯಾಗಬಹುದು

  • Share this:

ತಮ್ಮ ಆದೇಶವನ್ನು ಅನುಸರಿಸುವಂತೆ ತಿಳಿಸಿ ಕೇಂದ್ರ ಸರ್ಕಾರ ಟ್ವಿಟರ್​ಗೆ ನೋಟೀಸ್​ ಜಾರಿ ಮಾಡಿದೆ. #ModiPlanningFarmerGenocide ಎಂಬ ಹ್ಯಾಷ್​ಟ್ಯಾಗ್​ಗಳೊಂದಿಗೆ ಅನೇಕ ಟ್ವೀಟ್​ ಮಾಡಲಾಗಿದೆ. ಇವು ಜನರಲ್ಲಿ ಭಾವನೆಗಳನ್ನು ಕೆರಳಿಸುವಂತೆ ಇದೆ. ಇದು ದ್ವೇಷ ಬಿತ್ತುವ ಪರಿಕಲ್ಪನೆಯಾಗಿದ್ದು, ವಾಸ್ತವಕ್ಕೆ ದೂರಾವಾಗಿದೆ. ಇದೊಂದು ಆಧಾರರಹಿತ, ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ರೂಪಿಸಿರುವ ಅಭಿಯಾನವಾಗಿದೆ ಎಂದು ಆರೋಪಿಸಿ ನೋಟಿಸ್​ ಜಾರಿ ಮಾಡಲಾಗಿದೆ. ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ವಾಕ್​ ಸ್ವಾತಂತ್ರ್ಯವಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆವೊಡ್ಡುವ ಕ್ರಿಯೆಯಾಗಿದೆ. ಈ ಹಿನ್ನಲೆ ಈ ಹ್ಯಾಷ್​ಟ್ಯಾಗ್​ ಅಡಿಯ ಟ್ವೀಟ್​ ಮತ್ತು ಖಾತೆ ತೆಗೆದು ಹಾಕುವಂತೆ ಟ್ವಿಟರ್​ಗೆ ನೋಟಿಸ್​ ನೀಡಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಐಟಿ ಸಚಿವಾಲಯ ಈ ಆದೇಶವನ್ನು ಜಾರಿ ಮಾಡಿದೆ 


ಗಣರಾಜ್ಯೋತ್ಸವ ದಿನದಂದು ದೆಹಲಿಯು ರೈತರ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಈ ಸಂದರ್ಭದಲ್ಲಿ ಟ್ವಿಟರ್​ ಸರ್ಕಾರದ ನಿರ್ಧಾರದ ಹೊರತಾಗಿ ಕೆಲ ಅನಿರ್ಬಂಧಿತ ಖಾತೆಗಳನ್ನು ನಿರ್ಬಂಧಿಸಿತ್ತು.


ಟ್ವಿಟರ್​ ಮಧ್ಯವರ್ತಿಯಾಗಿದ್ದು, ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕಾಗಿದೆ. ಒಂದು ವೇಳೆ ಅವರು ಸರ್ಕಾರದ ಈ ನಿರ್ದೇಶನವನ್ನು ಪಾಲಿಸದಿದ್ದರೆ, ದಂಡನ ಕ್ರಮಕ್ಕೆ ಗುರಿಯಾಗಬಹುದು.


ಇದನ್ನು ಓದಿ: ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ರೋಲಿಗೆ ಒಳಗಾದ ಅಮೆರಿಕ ಮಾಜಿ ನೀಲಿ ಚಿತ್ರತಾರೆ


ಯಾವುದು ಸಾರ್ವಜನಿಕ ಆದೇಶ ಮತ್ತು ಅಧಿಕಾರಿಗಳ ಹಕ್ಕುಗಳು ಯಾವುದು ಎಂಬ ಕುರಿತು ಸರ್ಕಾರ ಸುಪ್ರೀಂಕೋರ್ಟ್​ನ ಸಂವಿಧಾನಿಕ ಪೀಠ ತಿಳಿಸಿದ ಅನೇಕ ತೀರ್ಪುಗಳನ್ನು ಉಲ್ಲೇಖಿಸಿ ನೋಟಿಸ್​ ಜಾರಿ ಮಾಡಿದೆ.


ಮಾಹಿತಿ ತಂತ್ರಜ್ಞಾನದ ಕಾಯ್ದೆ 69ರ ಅಡಿ ಈ ಟ್ವೀಟ್​ಗಳನ್ನು ತೆಗೆದುಹಾಕುವಂತೆ ತಿಳಿಸಲಾಗಿದೆ. ಸೋಮವಾರ ಈ ಹ್ಯಾಷ್​ಟ್ಯಾಗ್​​ ಅಡಿ 100 ಟ್ವಿಟರ್​​​ ಹಾಗೂ ರೈತರ ಪ್ರತಿಭಟನೆ ಸಂಬಂಧ 150 ಟ್ವೀಟ್​ಗಳಾಗಿದ್ದವು.


ಟ್ವಿಟರ್​ ಮಧ್ಯವರ್ತಿಯಾಗಿರುವುದರಿಂದ ಜನರನ್ನು ಪ್ರೇರೆಪಿಸುವ ಹಿನ್ನಲೆ ಅಂತಹವುಗಳನ್ನು ನಿರ್ಬಂಧಿಸಲು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ಅಲ್ಲದೇ, ಅಧಿಕಾರಿಗಳ ಈ ಆದೇಶದ ವಿರುದ್ಧ ಹೋಗುವ ಅಧಿಕಾರವನ್ನು ಹೊಂದಿರುವುದಿಲ್ಲ. ಜೊತೆಗೆ ಟ್ವಿಟರ್​ ನ್ಯಾಯವನ್ನು ನಿರ್ಣಯಿಸುವ ಪಾತ್ರವನ್ನುವಹಿಸುವಂತಿಲ್ಲ. ಸರ್ಕಾರದ ಆದೇಶವನ್ನು ಟ್ವಿಟರ್​ ಪಾಲಿಸದಿದ್ದರೆ ಅದು ದಂಡನ ಕ್ರಮವನ್ನು ಎದುರಿಸಬೇಕಾಗುತ್ತದೆ.

top videos
    First published: