ಡ್ರೋನ್ ಉತ್ಪಾದನೆ ಮತ್ತು ಹಾರಾಟಕ್ಕೆ ಸಂಬಂಧಿಸಿ ಹೊಸ ಕರಡು ನಿಯಮ ಹೊರಡಿಸಿದ ಕೇಂದ್ರ ಸರ್ಕಾರ

ಇನ್ನು ಮುಂದೆ ಪ್ರತಿ ಡ್ರೋನ್ ಆಮದುದಾರರು, ತಯಾರಕರು, ವ್ಯಾಪಾರಿಗಳು, ಮಾಲೀಕರು ಮತ್ತು ಆಪರೇಟರ್‌ಗಳು ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮೋದನೆ ಪಡೆಯುವ ಅಗತ್ಯವಿದೆ ಎಂದು ಹೊಸ ನಿಯಮಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ನವದೆಹಲಿ (ಜುಲೈ 15): ದೇಶದಲ್ಲಿ ಡ್ರೋನ್‌ಗಳನ್ನು ತಯಾರಿಸಲು ಮತ್ತು ಬಳಸಲು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಹೊಸ ಕರಡು ನಿಯಮಗಳನ್ನು ಹೊರಡಿಸಿದ್ದು, ಅಧಿಕೃತ ಉತ್ಪಾದಕ ಅಥವಾ ಆಮದುದಾರರು ಇನ್ನು ಡ್ರೋನ್ ಉತ್ಪಾದನೆಯಲ್ಲಿ ತೊಡಗಬೇಕು ಎಂದರೆ ವಾಯುಯಾನ ನಿಯಂತ್ರಕ ಡಿಜಿಸಿಎ ಅನುಮೋದನ ಪಡೆಯಲೇಬೇಕು ಎಂದು ನಿಯಮ ರೂಪಿಸಲಾಗಿದೆ. ಡ್ರೋನ್ ಅನ್ನು ಇತ್ತೀಚೆಗೆ  ಕೊರೋನಾ ವೈರಸ್ ಲಾಕ್‌ಡೌನ್‌ ಕಣ್ಗಾವಲು, ಸೋಂಕು ನಿಯಂತ್ರಣ ಮತ್ತು ವೀಡಿಯೋಗ್ರಫಿಯಂತಹ ಉದ್ದೇಶಗಳಿಗಾಗಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಡ್ರೋನ್ ಬಳಕೆ ಮಾಡಿ ವಿಡಿಯೋಗ್ರಫಿ ಮತ್ತು ಇತರೆ ಬಳಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಕಾರಣ ವಿಮಾನಯಾನ ಸಚಿವಾಲಯ ಡ್ರೋನ್ ಬಳಕೆಗೆ ಹೊಸ ಕರಡು ರಚನೆ ಮಾಡಿದೆ ಎಂದು ಹೇಳಲಾಗುತ್ತಿದೆ.

  ಇನ್ನು ಮುಂದೆ ಪ್ರತಿ ಡ್ರೋನ್ ಆಮದುದಾರರು, ತಯಾರಕರು, ವ್ಯಾಪಾರಿಗಳು, ಮಾಲೀಕರು ಮತ್ತು ಆಪರೇಟರ್‌ಗಳು ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮೋದನೆ ಪಡೆಯುವ ಅಗತ್ಯವಿದೆ ಎಂದು ಹೊಸ ನಿಯಮಗಳು ತಿಳಿಸಿವೆ. ಅಧಿಕೃತ ಮಾನವರಹಿತ ವಿಮಾನ ವ್ಯವಸ್ಥೆ ಆಮದುದಾರರು ಅಥವಾ ತಯಾರಕರು ಅಧಿಕೃತ ವ್ಯಾಪಾರಿ ಅಥವಾ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಡ್ರೋನ್ ಮಾರಾಟ ಮಾಡಬಾರದು ಎಂದೂ ಸೂಚನೆ ನೀಡಲಾಗಿದೆ.

  ಭಾರತದಲ್ಲಿ ಡ್ರೋನ್ ಉತ್ಪಾದನೆ ಮಾಡಬೇಕು ಎಂದರೆ ಉತ್ಪಾದನೆ ಅಥವಾ ನಿರ್ವಹಣಾ ಸೌಲಭ್ಯವನ್ನು ಪರಿಶೀಲಿಸುವ ಅಧಿಕಾರವನ್ನು ಡಿಜಿಸಿಎ ಹೊಂದಿರುತ್ತದೆ ಎಂದು ಕರಡು ತಿಳಿಸಿದೆ. ಇದಲ್ಲದೆ, ಅಪಘಾತದ ಕಾರಣದಿಂದ ಉಂಟಾಗಬಹುದಾದ ಹೊಣೆಗಾರಿಕೆಯನ್ನು ಸರಿದೂಗಿಸಲು ತೃತೀಯ ವಿಮಾ ಪಾಲಿಸಿ ಅಸ್ತಿತ್ವದಲ್ಲಿಲ್ಲದಿದ್ದರೆ ಡ್ರೋನ್ ಉತ್ಪಾದನೆಗೆ ತಡೆ ಹೇರಲಾಗುವುದು ಎಂಬುದನ್ನು ಕರಡು ನಿಯಮದಲ್ಲಿ ಸೇರಿಸಲಾಗಿದೆ.

  ಇದನ್ನೂ ಓದಿ: ಇಂದು ರಾಜ್ಯ ಸಚಿವ ಸಂಪುಟ ಸಭೆ; ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ?

  250 ಗ್ರಾಂಗಿಂತ ಕಡಿಮೆ ಇರುವ ನ್ಯಾನೊ ಕ್ಲಾಸ್ ಡ್ರೋನ್‌ಗಳನ್ನು ಮಾತ್ರ ಸಾಮಾನ್ಯವಾಗಿ ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಎಂದು ಕರಡು ನಿಯಮಗಳು ಹೇಳಿದ್ದು, ಭಾರವಾದ ಡ್ರೋನ್‌ಗಳನ್ನು ನಿರ್ವಹಿಸಲು "ಅರ್ಹ ರಿಮೋಟ್ ಪೈಲಟ್" ಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: