ನವ ದೆಹಲಿ (ಜೂನ್ 12); ಜುಲೈ 2017 ಮತ್ತು ಜನವರಿ 2020 ರ ನಡುವೆ ಜಿಎಸ್ಟಿ ತೆರಿಗೆ ಬಾಕಿಯನ್ನು ತಡವಾಗಿ ಸಲ್ಲಿಸಿದವರಿಗೆ ಯಾವುದೇ ಹೆಚ್ಚುವರಿ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಬಾಕಿ ಹಣದ ಮೇಲಿನ ಬಡ್ಡಿಯನ್ನೂ ಶೇ.50ರಷ್ಟು ಇಳಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಸರಣೆ ಮಾನದಂಡಗಳ ಕುರಿತು ಇಂದು ನಡೆದ ಸಭೆಯ ಬಳಿಕ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.
“ಕೊರೋನಾ ವೈರಸ್ ಸಾಮೂದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ತೆರಿಗೆಗಳನ್ನು ಹೆಚ್ಚಿಸುವ ಅಥವಾ ದಂಡ ಶುಲ್ಕ ವಿಧಿಸುವುದು ಸರಿಯಲ್ಲ. ಹೀಗಾಗಿ ಈ ಕುರಿತ ಎಲ್ಲಾ ಪ್ರಸ್ತಾಪವನ್ನೂ ಹಣಕಾಸು ಇಲಾಖೆ ತಳ್ಳಿಹಾಕಿದೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಬಳಿಕ ತಿಳಿಸಿದ್ದಾರೆ.
ಇಂದಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜವಳಿ, ಉಡುಪುಗಳು, ರಸಗೊಬ್ಬರಗಳು ಮತ್ತು ಪಾದರಕ್ಷೆಗಳ ಮೇಲೆ ಹೆಚ್ಚುತ್ತಿರುವ ಜಿಎಸ್ಟಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಏಕೆಂದರೆ "ಲಾಕ್ಡೌನ್ ಅನ್ನು ಈಗ ತೆರೆಯಲಾಗಿರುವ ಕಾರಣ ಇಷ್ಟು ತುರ್ತಾಗಿ ತೆರಿಗೆಯನ್ನು ಹೆಚ್ಚಿಸುವುದು ಸರಿಯಲ್ಲ" ಎಂದು ಎಲ್ಲಾ ಜಿಎಸ್ಟಿ ಕೌನ್ಸಿಲ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ