ಪೋಷಕರೇ ಎಚ್ಚರ.. ಔಷಧಿಯ ಅಡ್ಡ ಪರಿಣಾಮದಿಂದ ಬೇಬಿ ಗೊರಿಲ್ಲಾ ಎನಿಸಿಕೊಂಡ 4 ತಿಂಗಳ ಕಂದಮ್ಮ..!

ಔಷಧಿ ಸೇವಿಸಿದ ಒಂದೆರಡು ವಾರಗಳ ನಂತರ ಮಗುವಿನ ದೇಹವು ಬದಲಾಗತೊಡಗಿತು. ತಲೆ ಮತ್ತು ದೇಹದ ಮೇಲೆ ಸಾಕಷ್ಟು ಕೂದಲು ಬೆಳೆಯಲು ಆರಂಭಿಸಿತು. ಮೊದಲು ತಲೆ ಮತ್ತು ಹಣೆಯಿಂದ ಆರಂಭವಾಯಿತು, ನಂತರ ಕಾಲುಗಳು, ತೋಳುಗಳು, ಬೆನ್ನಲ್ಲಿ ದಟ್ಟ ಕೂದಲು ಬೆಳೆಯಿತು.

ಮಗುವಿನ ದೇಹದ ಮೇಲೆ ದಟ್ಟ ಕೂದಲು

ಮಗುವಿನ ದೇಹದ ಮೇಲೆ ದಟ್ಟ ಕೂದಲು

  • Share this:
ಜೀವ ಉಳಿಸುವ ಔಷಧಿಗಳ ಅಡ್ಡ ಪರಿಣಾಮದಿಂದಾಗಿ ನಾಲ್ಕು ತಿಂಗಳ ಮಗು ಬೇಬಿ ಗೊರಿಲ್ಲಾ ಎನಿಸಿಕೊಂಡಿದೆ. ಪುಟ್ಟ ಕಂದಮ್ಮನ ಎದೆ, ಬೆನ್ನು, ಕೈ, ಕಾಲು ಮತ್ತು ಮುಖದ ತುಂಬ ಅಸಹಜವಾಗಿ ಕಪ್ಪು ಕೂದಲು ಬೆಳೆದು ನಿಂತಿದೆ. ಇದರಿಂದ ಮಗುವನ್ನು ಬೇಬಿ ಗೊರಿಲ್ಲಾ ಎನ್ನಲಾಗುತ್ತಿದೆ. ಅಮೆರಿಕಾದ ಟೆಕ್ಸಾಸ್‌ನ ಮೇಟಿಯೊ ಹೆರ್ನಾಂಡೀಸ್  ಹೆಸರಿನ ಮಗುಗೆ ಕೇವಲ ಒಂದು ತಿಂಗಳಿರುವಾಗಲೇ ಹೈಪರ್‌ ಇನ್‌ಸುಲಿನಿಸಂ ಇರುವುದು ಪತ್ತೆಯಾಯಿತು. ಇದರಿಂದ ಮಗು ಅಲುಗಾಡದಂತೆ ಆಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಹಂತದಲ್ಲಿತ್ತು.

ಅಪರೂಪದ ಕಾಯಿಲೆಯಿಂದ ಮೇದೋಜ್ಜೀರಕ ಗ್ರಂಥಿಯು ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸುತ್ತದೆ. ಇದು ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಸ್ಥಿತಿಯು ಪ್ರತಿ 50,000 ಶಿಶುಗಳಲ್ಲಿ ಒಂದು ಮಗುವಿನಲ್ಲಿ ಪತ್ತೆಯಾಗುತ್ತದೆ. ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬೇಬಿ ಮೇಟಿಯೊನನ್ನು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯಲ್ಲಿರುವ ಎನ್ಐಸಿಯುಗೆ ದಾಖಲಿಸಲಾಗಿತ್ತು. ಜೀವರಕ್ಷಕ ಚಿಕಿತ್ಸೆ ನೀಡಿದ ಬಳಿಕ ಎರಡು ವಾರಗಳಲ್ಲಿ ಆರೋಗ್ಯ ಸುಧಾರಿಸಿತು. ಇದಾದ ಬಳಿ ಮಗುವಿನ ದೇಹದ ಮೇಲೆ ಅಸಹಜವಾಗಿ ದಟ್ಟ ಕಪ್ಪು ಕೂದಲು ಬೆಳೆಯುವುದನ್ನು ಪೋಷಕರಾದ ಬ್ರೈ ಶೆಲ್ಬಿ(24), ಜೇರ್ಡ್ ಹೆರ್ನಾಂಡೀಸ್ (22) ಗಮನಿಸಿದರು.

ಔಷಧಿ ಸೇವಿಸಿದ ಒಂದೆರಡು ವಾರಗಳ ನಂತರ ಮಗುವಿನ ದೇಹವು ಬದಲಾಗತೊಡಗಿತು. ಮಗು ಬೆಳೆಯುತ್ತಿದಂತೆ ತಲೆ ಮತ್ತು ದೇಹದ ಮೇಲೆ ಸಾಕಷ್ಟು ಕೂದಲು ಬೆಳೆಯಲು ಆರಂಭಿಸಿತು. ಮೊದಲು ತಲೆ ಮತ್ತು ಹಣೆಯಿಂದ ಆರಂಭವಾಯಿತು, ನಂತರ ಕಾಲುಗಳು, ತೋಳುಗಳು, ಬೆನ್ನಲ್ಲಿ ದಟ್ಟ ಕೂದಲು ಬೆಳೆಯಿತು.  ಹೊಟ್ಟೆಯನ್ನು ಹೊರತುಪಡಿಸಿ ಎಲ್ಲೆಡೆಯೂ ಹರಡಿತ್ತು ಎಂದು ಪೋಷಕರು ಮಗುವಿನ ಸ್ಥಿತಿಯನ್ನು ವಿವರಿಸಿದ್ದಾರೆ.

ಕೂದಲು ಬೆಳವಣಿಗೆಯ ಸಂಭವನೀಯ ಅಡ್ಡಪರಿಣಾಮಗಳ ಬಗ್ಗೆ ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು.  ಆದಾಗ್ಯೂ, ಇಷ್ಟೊಂದು ಕೂದಲು ಬೆಳೆಯಬಹುದೆಂದು ವೈದ್ಯರೂ ನಿರೀಕ್ಷಿಸಿರಲಿಲ್ಲ. ಬ್ರಿ ಮತ್ತು ಆಕೆಯ ಪತಿ ಮಗುವಿನ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಮೇಟಿಯೊ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡರು. ಅಂತಿಮವಾಗಿ ಮಗುವಿಗೆ ನೀಡುತ್ತಿರುವ ಔಷಧಿಗಳನ್ನು ನಿಲ್ಲಿಸಬೇಕು. ನಂತರ ಹೆಚ್ಚುವರಿ ಕೂದಲು ಉದುರಬೇಕು. ಆದಾಗ್ಯೂ, ಈ ಸ್ಥಿತಿಯು ತುಂಬಾ ಅಪರೂಪದ ಪ್ರಕರಣವಾಗಿರೋದರಿಂದ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರಿಗೇ ಖಚಿತವಿಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: