Gorakhpur: ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ: ಮೌಲ್ವಿ ಆಜ್ಞೆ ಪಾಲಿಸಿದವರಿಗೆ ಶಾಕ್!

ಗೋರಖ್‌ಪುರದ ಗಗಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಸ್ಲಿಂ ಕುಟುಂಬವೊಂದು ತಂತ್ರಿಯೊಬ್ಬನ ಆದೇಶದ ಮೇರೆಗೆ ಮನೆಯನ್ನು ಅಗೆದಿದ್ದಾರೆ. ಉತ್ಖನನದ ವೇಳೆ ದೇವಸ್ಥಾನದ ಗಂಟೆ, ಶಂಖ, ತ್ರಿಶೂಲ, ಪಾತ್ರೆ ಸೇರಿದಂತೆ ಕಬ್ಬಿಣ ಮತ್ತು ಹಿತ್ತಾಳೆಯಿಂದ ಮಾಡಿದ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ದಪ್ಪ ಮೂಳೆಗಳೂ ಕಂಡುಬಂದಿವೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದರಿಂದ ಆ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ

ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ

  • Share this:
ಲಕ್ನೋ(ಸೆ.15): ಗೋರಖ್‌ಪುರದ (Gorakhpur) ಗಗಹಾ ಪ್ರದೇಶದ ಜಗದೀಶ್‌ಪುರ ಭಾಲುವಾನ್ ಗ್ರಾಮದ ಮುಸ್ಲಿಂ ಕುಟುಂಬದ ಮನೆಯಲ್ಲಿ ಉತ್ಖನನ (Excavation) ಮಾಡುವಾಗ, ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದರಿಂದ ಭಾರೀ ಸಂಚಲನ ಸೃಷ್ಟಿಯಾಗಿದೆ. ಉತ್ಖನನದ ಸಮಯದಲ್ಲಿ ದೊರೆತ ವಸ್ತುಗಳಲ್ಲಿ ದೇವಾಲಯದ ಗಂಟೆ, ಶಂಖ, ತ್ರಿಶೂಲಗಳು, ಪಾತ್ರೆಗಳು ಮತ್ತು ಕಬ್ಬಿಣ ಮತ್ತು ಹಿತ್ತಾಳೆಯಿಂದ ಮಾಡಿದ ಅನೇಕ ಪೂಜಾ ಸಾಮಗ್ರಿಗಳು ಸೇರಿವೆ. ಇದಲ್ಲದೇ ದಪ್ಪ ಮೂಳೆಗಳೂ ಕಂಡು ಬಂದಿವೆ. ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹರಪ್ಪ‌ ನಾಗರಿಕತೆಯಲ್ಲಿ ಪೌಷ್ಠಿಕ ಕಾಳುಗಳಿಂದ ಮಾಡಿದ ಲಡ್ಡುಗಳು ಪತ್ತೆ

ಗೋರಖ್‌ಪುರದ ಜಗದೀಶ್‌ಪುರ ಭಾಲುವಾನ್‌ ಗ್ರಾಮದ ನಯಾ ಚೌರಾಹಾ ನಿವಾಸಿ ನೂರ್‌ ಮೊಹಮ್ಮದ್‌ ಅವರ ಎಲ್ಲಾ ಮಕ್ಕಳಿಗೂ ಮದುವೆಯಾಗಿದೆ ಆದರೆ ಯಾವ ಹೆಣ್ಣುಮಕ್ಕಳಿಗೂ ಮಕ್ಕಳಾಗಿರಲಿಲ್ಲ. ಇದರಿಂದ ಅವರ ಮನೆಯವರು ತುಂಬಾ ಬೇಸರಗೊಂಡಿದ್ದರು. ಪೊಲೀಸರ ಪ್ರಕಾರ ಚಿಕಿತ್ಸೆಯ ಹೊರತಾಗಿ ತಂತ್ರ-ಮಂತ್ರದ ಹಾದಿಯನ್ನೂ ಅವರು ಹಿಡಿದಿದ್ದಾರೆ. ನೂರ್ ಮೊಹಮ್ಮದ್ ಅವರ ಹಿರಿಯ ಅಳಿಯ ಆಲಂ ಶೇಖ್, ಗಗಾಹಾ ನಿವಾಸಿ, ಗೋರಖ್‌ಪುರದಲ್ಲಿ ಮೌಲ್ವಿಯನ್ನು ಭೇಟಿಯಾಗಿದ್ದರು. ಹೀಗಿರುವಾಗ ಅವರಿದ್ದ ಮನೆಯಲ್ಲಿಯೇ ದೋಷವಿದೆ ಎಂದು ಧರ್ಮಗುರು ಹೇಳಿದರು. ಯಾರೋ ಮಾಟ ಮಾಡಿ ಮನೆಯಲ್ಲಿ ಏನನ್ನೋ ಹೂತಿಟ್ಟಿದ್ದಾರೆ, ಇದರಿಂದ ಹೆಣ್ಣು ಮಕ್ಕಳಿಗೆ ಮಕ್ಕಳಾಗುತ್ತಿಲ್ಲ ಎಂದು ಹೇಳಿದ್ದಾರೆ.

ಭೂಮಿಯಿಂದ ನಾಲ್ಕು ಅಡಿ ಕೆಳಗೆ ಮಡಕೆ ಪತ್ತೆ

ಅಷ್ಟೇ ಅಲ್ಲ, ಇಂತಹ ಅನುಮಾನಾಸ್ಪದ ವಸ್ತುಗಳನ್ನು ಮನೆಯಲ್ಲಿ ಹೂತು ಹಾಕಿರುವುದರಿಂದ ಮನೆಯ ನೆಮ್ಮದಿಗೆ ಭಂಗ ಉಂಟಾಗಿದೆ ಎಂದು ಮೌಲ್ವಿ ತಿಳಿಸಿದ್ದಾರೆ. ಧರ್ಮಗುರುಗಳ ಮಾತಿನಂತೆ ಆಲಂ ಶೇಖ್ ಇದರ ನಿವಾರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳವಾರ ಮೌಲ್ವಿ ಹೇಳಿದ ಜಾಗದಲ್ಲಿ ಮನೆಯಲ್ಲಿ ಅಗೆಯಲು ಆರಂಭಿಸಿದರು. ಸುಮಾರು ನಾಲ್ಕು ಅಡಿಗಳಷ್ಟು ನೆಲದ ಮಣ್ಣನ್ನು ತೆಗೆದ ಬಳಿಕ ಅದರಲ್ಲಿ ಮಡಕೆ ಪತ್ತೆಯಾಗಿದೆ.



ಮಡಕೆ ತೆರೆದಾಗ ಅದರಲ್ಲಿ ದೀಪ, ಗಂಟೆ, ತ್ರಿಶೂಲ, ಪಾತ್ರೆಗಳು, ಕೆಲವು ಕಬ್ಬಿಣದ ವಸ್ತುಗಳು ಮತ್ತು ಮೂಳೆಗಳು ಕಂಡುಬಂದಿವೆ. ಮಡಕೆಯಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂಬ ವದಂತಿ ಪ್ರದೇಶದಾದ್ಯಂತ ಹರಡಿತು. ಮಾಹಿತಿ ಪಡೆದ ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿ ಅವರ ಬಳಿಯಿದ್ದ ಸಂಪೂರ್ಣ ವಸ್ತುಗಳನ್ನು ಠಾಣೆಗೆ ತಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಪುರಾತತ್ವ ಇಲಾಖೆಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಹಳೇಬೀಡಿನಲ್ಲಿ ಉತ್ಖನನ ವೇಳೆ ಜೈನ ಮಂದಿರ ಪತ್ತೆ

ಬೌದ್ಧ ವಸ್ತುಸಂಗ್ರಹಾಲಯದ ಉಪ ನಿರ್ದೇಶಕ ಮನೋಜ್ ಗೌತಮ್, ಜಗ್ ಮತ್ತು ಲೋಟವು ಕ್ರಿ.ಶ 18ರದ್ದಾಗಿರಬಹುದೆಂದು ಅಂದಾಜು. ತನಿಖೆಯ ನಂತರ, ಇದು ಎಷ್ಟು ಹಳೆಯದು ಎಂದು ತಿಳಿಯುತ್ತದೆ. ಲಭ್ಯವಾದ ಎಲ್ಲಾ ಸಾಮಗ್ರಿಗಳು ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿಲ್ಲ. ಈಗ ಎಲ್ಲಾ ಸಾಮಾನುಗಳು ಗಗಹ ಪೊಲೀಸ್ ಠಾಣೆಯಲ್ಲಿವೆ ಎಂದಿದ್ದಾರೆ.
Published by:Precilla Olivia Dias
First published: