ಗೋರಖ್ಪುರ್​ ಹಾಗೂ ವಾಜಪೇಯಿ ನಡುವಿನ ಸಂಬಂಧವೇನು?: ಬಯಲಾಯ್ತು ರಹಸ್ಯ!


Updated:August 17, 2018, 6:05 PM IST
ಗೋರಖ್ಪುರ್​ ಹಾಗೂ ವಾಜಪೇಯಿ ನಡುವಿನ ಸಂಬಂಧವೇನು?: ಬಯಲಾಯ್ತು ರಹಸ್ಯ!
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಆ.17): ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಗುರುವಾರದಂದು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದಿಂದ ದೇಶದಾದ್ಯಂತ ಸೂತಕದ ಛಾಯೆ ಮೂಡಿದೆ. ಹೀಗಿರುವಾಗ ವಾಜಪೇಯಿ ಹಾಗೂ ಉತ್ತರ ಪ್ರದೇಶದ ಗೋರಖ್ಪರ್​ ನಡುವೆಯೂ ವಿಶೇಷವಾದ ಕೆಲ ನೆನಪುಗಳಿವೆ. ಸ್ವಾತಂತ್ರ್ಯ ಸಿಗುವ ಮೊದಲು, 1940ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ತನ್ನ ಹಿರಿಯ ಅಣ್ಣ ಪ್ರೇಮ್​ ಬಿಹಾರಿ ವಾಜಪೇಯಿಯವರ ಮದುವೆಗೆಂದು ತಮ್ಮ 16 ನೇ ವಯಸ್ಸಿನಲ್ಲಿ ಆಗಮಿಸಿದ್ದರು. ಎಲ್ಲಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಅಟಲ್​ ಬಿಹಾರಿಯವರು ತಮ್ಮ ರಾಜಕೀಯ ಯಾತ್ರೆಗಳಲ್ಲಿ ಗೋರಖ್ಪುರ್​ ಜೊತೆಗೆ ತನಗಿದ್ದ ಸಂಬಮಧವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಅವರು ಸಾಮಾನ್ಯವಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. 1996ರ ಚುನಾವಣಾ ಸಮಾವೆಶವೊಂದರಲ್ಲಿ ಎಂಪಿ ಇಂಟರ್​ ಕಾಲೇಜಿನಲ್ಲಿ ಗೋರಖ್ಪುರ್​ ಜನರನ್ನು ನೋಡಿದ ವಾಜಪೇಯಿ ತನಗೆ ಗೋರಖ್ಪುರ್​ನೊಂದಿಗಿದ್ದ ಸಂಬಂಧವನ್ನು ಬಹಿರಂಗಪಡಿಸಿದರು.ಗೋರಖ್ಪುರ್​ನ ದುರ್ಗಾಬಾಢೀ ರೋಡ್​ನಲ್ಲಿರುವ ಮಥುರಾ ಪ್ರಸಾದ್​ ದೀಕ್ಷಿತ್​ರವರ ಮಗಳು ರಾಮೇಶ್ವರಿಯೊಂದಿಗೆ ಅಟಲ್​ರವರ ಹಿತಯ ಅಣ್ಣ ಪ್ರೇಮ್​ ಬಿಹಾರಿಯವರ ಮದುವೆಯಾಗಿತ್ತು. ಪ್ರಸ್ತುತ ಮಥುರಾ ಪ್ರಸಾದ್​ ದೀಕ್ಷಿತ್​ರವರ ಕುಟುಂಬದ ಎಲ್ಲಾ ಸದಸ್ಯರು ಗೋರಖ್ಪುರ್​ನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅಟಲ್​ ಬಿಹಾರಿ ವಾಜಪೇಯಿಯವರಿಗೆ ಸಂಬಂಧದಲ್ಲಿ ಬಾಮೈದನಾಗುವ ಬ್ರಜ್​ ನಾರಾಯಣ್​ ಎಲ್ಲರಿಗಿಂತಲೂ ಹಿರಿಯರಾಗಿದ್ದು, ಕುಟುಂಬದ ಯಜಮಾನರಾಗಿ ಅವರನ್ನು ಗೌರವಿಸಲಾಗುತ್ತಿದೆ.ದೀಕ್ಷಿತ್​ರವರ ಕುಟುಂಬದವರು ಇಂದಿಗೂ ವಾಜಪೇಯಿಯವರ ನೆನಪುಗಳನ್ನು ತಮ್ಮ ಹೃದಯಾಂತರಾಳದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಅಣ್ಣನ ಬಾಮೈದ ಬ್ಜ್​ ನಾರಾಯಣ್​ ದೀಕ್ಷಿತ್​ರವರು ಮಾತನಾಡುತ್ತಾ "ಅಟಲ್​ ಜೀ ನಗುತ್ತಾ, ನಗಿಸುತ್ತಾ ನಮ್ಮೊಂದಿಗಿರುತ್ತಿದ್ದರು" ಎಂದಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ