Goons Attack Hindu Temples: ದುರ್ಗಾ ಪೂಜೆ ವೇಳೆಯೇ ಹಿಂದೂ ದೇಗುಲದ ಮೇಲೆ ದಾಳಿ; ಮೂವರು ಬಲಿ

ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಇದೇ ಮಾದರಿಯ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸಿದ್ದಾರೆ.

ಘಟನಾ ಸ್ಥಳ

ಘಟನಾ ಸ್ಥಳ

  • Share this:
    ಡಾಕಾ: ನೆರೆಯ ಬಾಂಗ್ಲಾದೇಶ(Bangladesh)ದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲಿನ ದಾಳಿ ಪ್ರಕರಣ ಮತ್ತೊಂದು ವರದಿಯಾಗಿದೆ. ಬಾಂಗ್ಲಾದೇಶದ ಪೊಲೀಸರ ಪ್ರಕಾರ, ದುರ್ಗಾ ಪೂಜೆ (Durga Puja) ಹಿನ್ನೆಲೆ ಚಾಂದಪುರ ಜಿಲ್ಲೆಯ ಹಾಜಿಗಂಜ್ ಉಪ ಜಿಲ್ಲೆಯ ಕುಮಿಲ್ಲಾ ದೇವಾಲಯದಲ್ಲಿ ಭಕ್ತರು (Hindu Temple) ಸೇರಿದ್ದರು. ಈ ಸಮಯದಲ್ಲಿಯೇ ಗುಂಡಿನ ದಾಳಿ ನಡೆಸಿ ಮೂವರನ್ನು ಕೊಲೆ ಮಾಡಲಾಗಿದೆ. ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಇದೇ ಮಾದರಿಯ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ.

    ಪೊಲೀಸ್ ಪ್ರಕಟನೆ

    ವಿಧ್ವಂಸಕರು ದುರ್ಗಾ ಪೂಜೆ ನಡೆಯುತ್ತಿದ್ದ ದೇಗುಲಗಳನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದು, ಬಾಂಗ್ಲಾದೇಶ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ Rapid Action Battalion (RAB) and paramilitary force Border Guard Bangladesh (BGB) ಗಳನ್ನು ನಿಯೋಜನೆ ಮಾಡಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು ಮತ್ತು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ತುರ್ತು ಪತ್ರಿಕಾ ಪ್ರಕಟನೆ ಹೊರಡಿಸಿದೆ. ದುರ್ಗಾ ಪೂಜೆ ನಡೆಯುತ್ತಿದ್ದ ಸ್ಥಳ ಮತ್ತು ಹಿಂದೂಗಳ ವಾಸವಾಗಿರುವ ವಸತಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆಯೂ ಹಲವು ಬಾರಿ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಯುತ್ತಲಿವೆ.

    ಹಿಂದೂ ಯುನಿಟಿ ಕೌನ್ಸಿಲ್ ಪ್ರತಿಕ್ರಿಯೆ

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಹಿಂದೂ ಯುನಿಟಿ ಕೌನ್ಸಿಲ್(Bangladesh Hindu Unity Council (@UnityCouncilBD)) ಅಕ್ಟೋಬರ್ 13, 2021 ಕರಾಳ ದಿನ ಅಂತಾನೇ ಬಾಂಗ್ಲಾದೇಶದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲಿದೆ. ಅಷ್ಟಮಿ ದಿನವಾಗಿದ್ದು, ಮೂರ್ತಿ ವಿಸರ್ಜನೆ ಸಮಯದಲ್ಲಿಯೇ ದಾಳಿ ನಡೆಸಲಾಗಿದೆ. ಹಲವೆಡೆ ಪೂಜಾ ಮಂಟಪಗಳನ್ನು ಧ್ವಂಸ ಮಾಡಲಾಗಿದೆ. ಸದ್ಯ ಹಿಂದೂಗಳೇ ದೇವಸ್ಥಾನಗಳನ್ನು ರಕ್ಷಣೆ ಮಾಡಬೇಕಿದೆ. ಇಂದು ಇಡೀ ಜಗತ್ತು ಮೌನವಾಗಿದೆ. ತಾಯಿ ದುರ್ಗಾದೇವಿಯ ಆಶೀರ್ವಾದ ಎಲ್ಲ ಹಿಂದೂಗಳ ಮೇಲಿರಲಿದೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಹೇಳಿದೆ.

    ಇದನ್ನೂ ಓದಿ: PVC Pipe: ಗೋದಾಮಿನಲ್ಲಿ ಅಗ್ನಿ ದುರಂತ: 5 ಕಿ.ಮೀ.ವರೆಗೆ ವ್ಯಾಪಿಸಿದ ಹೊಗೆ; ಜನರ ಸ್ಥಳಾಂತರ

    ಪ್ರಧಾನ ಮಂತ್ರಿ ಶೇಖ್ ಹಸೀನಾ (Prime Minister Sheikh Hasina) ಹಿಂದೂಗಳ ರಕ್ಷಣೆಗೆ ಮುಂದಾಗಬೇಕು. ಬಾಂಗ್ಲಾದೇಶದ ಮುಸ್ಲಿಮರು ಹಿಂದೂಗಳು ಪೂಜೆ ಮಾಡೋದನ್ನು ವಿರೋಧಿಸಿದ್ರೆ (Durga Puja celebrations) ಮಾಡಲ್ಲ. ಕನಿಷ್ಠ ಪಕ್ಷ ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಿ. ದೇವಸ್ಥಾನ ಮತ್ತು ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ದಯವಿಟ್ಟು ಸೇನೆಯನ್ನು ಕಳುಹಿಸಿ. ಸದ್ಯ ದೇವಸ್ಥಾನಗಳಲ್ಲಿ ಸೇನೆಯ ಅವಶ್ಯಕೆ ಇದೆ ಎಂದು ಪ್ರಧಾನ ಮಂತ್ರಿ ಶೇಖ್ ಹಸೀನಾರಿಗೆ ಮನವಿ ಮಾಡಿಕೊಂಡಿದೆ.

    ಬಿಹಾರದಲ್ಲಿ ಅರ್ಚಕನಿಗೆ ಗುಂಡಿಟ್ಟು ಕೊಲೆ

    ಬಿಹಾರದ ದರ್ಬಾಂಗ (Drbhang, Bihar) ಜಿಲ್ಲೆಯ ಕಂಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ರಾಜೀವ್ ಕುಮಾರ್ ಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಇಂದು ಬೆಳಗಿನ ಜಾವ ಅರ್ಚಕರನ್ನು ಅಡ್ಡಗಟ್ಟಿದ ನಾಲ್ವರು ಅಪರಿಚಿತರು ಗುಂಡಿಕ್ಕಿ ಕೊಲೆ  ಮಾಡಿದ್ದಾರೆ. ಕೊಲೆ ಬಳಿಕ ಎಸ್ಕೇಪ್ ಆಗಲು ನಾಲ್ವರು ಪ್ರಯತ್ನಕ್ಕೆ ಮುಂದಾದಾಗ ಸ್ಥಳೀಯರು ಹಿಡಿದು ಕೋಲುಗಳಿಂದ ಥಳಿಸಿದ್ದಾರೆ. ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ವರದಿ: ಮೊಹ್ಮದ್​ ರಫೀಕ್​ ಕೆ 
    Published by:Kavya V
    First published: