ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ಗೂ ಭಾರತದ ಸುಂದರ್ ಪಿಚ್ಚೈ ಈಗ ಸಿಇಒ

ಫೋರ್ಬ್ಸ್​ ಪ್ರಕಾರ ಪೇಜ್​ 58.9 ಬಿಲಿಯನ್ ಡಾಲರ್ ಮತ್ತು ಬ್ರಿನ್ 56.8 ಬಿಲಿಯಲ್ ಡಾಲರ್ ಆಸ್ತಿಗೆ ಒಡೆಯರಾಗಿದ್ದಾರೆ. ಅಂದರೆ ಜಗತ್ತಿನ ಆರನೇ ಮತ್ತು ಏಳನೆಯ ಅತಿದೊಡ್ಡ ಶ್ರೀಮಂತರು.

HR Ramesh | news18-kannada
Updated:December 4, 2019, 4:15 PM IST
ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ಗೂ ಭಾರತದ ಸುಂದರ್ ಪಿಚ್ಚೈ ಈಗ ಸಿಇಒ
ಗೂಗಲ್ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಹಾಗೂ ಸಿಇಒ ಸುಂದರ್ ಪಿಚ್ಚೈ.
  • Share this:
ಜಗತ್ತಿನ ಅತಿದೊಡ್ಡ ಟೆಕ್​ ಸಂಸ್ಥೆಯಾದ ಗೂಗಲ್ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಸಂಸ್ಥೆಯ ದೈನಂದಿನ ಜವಾಬ್ದಾರಿಗಳಿಂದ ದೂರವಾಗುತ್ತಿದ್ದಾರೆ. ಶೇ.51ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿರುವ ಇವರು ಭಾರತ ಮೂಲದ ಗೂಗಲ್​ನ ಸಿಇಒ ಸುಂದರ್ ಪಿಚ್ಚೈ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ.

ಎಲ್ಲ ಮಾಹಿತಿ ಒಂದೆಡೆ ಸಿಗಬೇಕು. ಎಲ್ಲರಿಗೂ ಸಿಗುವಂತಾಗಬೇಕು ಎಂಬ ಮಹತ್ವದ ಆಶಯದೊಂದಿಗೆ 21 ವರ್ಷಗಳ ಹಿಂದೆ ಗೂಗಲ್ ಸರ್ಚ್ ಎಂಜಿನ್ ರೂಪಿಸಿದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಈಗ ಸಂಸ್ಥೆಯ ಜವಾಬ್ದಾರಿಗಳನ್ನು ಭಾರತ ಮೂಲದ ಸುಂದರ್ ಪಿಚ್ಚೈ ಅವರಿಗೆ ವರ್ಗಾಯಿಸಿದ್ದಾರೆ.

ಗೂಗಲ್ ಸರ್ಚ್ ಎಂಜಿನ್ ಮತ್ತು ಬಿಸಿನೆಸ್ ವಿಭಾಗದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ಪಿಚ್ಚೈ ಕಳೆದ ಒಂದೂವರೆ ದಶಕದಿಂದ ಗೂಗಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೇಜ್ ಮತ್ತು ಬ್ರಿನ್ ಅವರ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪಿಚ್ಚೈ ಇದೀಗ ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಮಂಗಳವಾರ ಈ ಕುರಿತು ಪತ್ರ ಬರೆದಿರುವ ಪೇಜ್ ಮತ್ತು ಸೆರ್ಗಿ, ಇಂದು ಕಂಪನಿಯು ಒಬ್ಬ ವ್ಯಕ್ತಿಯಾಗಿದ್ದರೆ, 21 ವರ್ಷದ ಹರೆಯದ ಯುವಕನಾಗಿರುತ್ತಿದ್ದ ಮತ್ತು ಅದು ಬೆಚ್ಚನೆಯ ಗೂಡನ್ನು ಬಿಡಬೇಕಾದ ಕಾಲ. ಕಂಪನಿಯು ಇಷ್ಟು ದೀರ್ಘ ಕಾಲದ ದೈನಂದಿನ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದು, ಅದ್ಬುತವಾದ ಅವಕಾಶ. ಈಗ ಹೆಮ್ಮೆಯ ಪೋಷಕರ ಜವಾಬ್ದಾರಿಯನ್ನು ನಿಭಾಯಿಸುವ ಸಮಯ ಎಂದು ನಂಬಿದ್ದೇವೆ. ಸಲಹೆ ಮತ್ತು ಪ್ರೀತಿಯನ್ನು ಕೊಡುವುದು ದಿನವೂ ತಲೆ ತೂರಿಸುವುದಲ್ಲ ಎಂದು ತಮ್ಮ ನಿಲುವಿಗೆ ಕಾರಣ ನೀಡಿದ್ದಾರೆ.

I’m excited about Alphabet’s long term focus on tackling big challenges through technology. Thanks to Larry & Sergey, we have a timeless mission, enduring values and a culture of collaboration & exploration - a strong foundation we’ll continue to build on https://t.co/tSVsaj4FsR

ಶೇ.51ರಷ್ಟು ಷೇರುಗಳನ್ನು, ಶೇ.84ರಷ್ಟು ಮತದಾನದ ಹಕ್ಕನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಪೇಜ್ ಮತ್ತು ಬ್ರಿನ್ ಯಾವ ಗಳಿಕೆಯಲ್ಲಿ ಬೇಕಾದರೂ ಪಿಚ್ಚೈ ಅವರನ್ನು ಹೊರಗೆ ಕಳುಹಿಸುವ ಅಧಿಕಾರ ಉಳಿಸಿಕೊಂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ದೈನಂದಿನ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಬೋರ್ಡ್ ಮೀಟಿಂಗ್, ಹೂಡಿಕೆದಾರರ ಸಭೆ ಸೇರಿದಂತೆ ಮುಖ್ಯವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದನ್ನು ಓದಿ: ಎಚ್ಚರ: ಗೂಗಲ್​ನಲ್ಲಿ ಕಸ್ಟಮರ್ ​ಕೇರ್ ನಂಬರ್ ಹುಡುಕಿದ್ರೆ, ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತೆ ಕನ್ನ

ಫೋರ್ಬ್ಸ್​ ಪ್ರಕಾರ ಪೇಜ್​ 58.9 ಬಿಲಿಯನ್ ಡಾಲರ್ ಮತ್ತು ಬ್ರಿನ್ 56.8 ಬಿಲಿಯಲ್ ಡಾಲರ್ ಆಸ್ತಿಗೆ ಒಡೆಯರಾಗಿದ್ದಾರೆ. ಅಂದರೆ ಜಗತ್ತಿನ ಆರನೇ ಮತ್ತು ಏಳನೆಯ ಅತಿದೊಡ್ಡ ಶ್ರೀಮಂತರು.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ