ಹೊಸ ಐಟಿ ನಿಯಮವನ್ನು ಅನುಷ್ಠಾನಗೊಳಿಸಿದ ಗೂಗಲ್; ಕಳೆದ ಏಪ್ರಿಲ್​ನಲ್ಲಿ 59,350 ಕಂಟೆಂಟ್​ಗಳು ಡಿಲೀಟ್

ಗೂಗಲ್‌‌ ಬುಧವಾರ ತನ್ನ ಪಾರದರ್ಶಕತೆ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ಏಪ್ರಿಲ್‌ನಲ್ಲಿ ಒಟ್ಟು 27,762 ದೂರುಗಳನ್ನು ಸ್ವೀಕರಿಸಿದ್ದು, 59,350 ಕಂಟೆಂಟ್‌‌ಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.

ಗೂಗಲ್.

ಗೂಗಲ್.

 • Share this:
  ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು-2021 ರ "ಮಧ್ಯವರ್ತಿಗಳ ಮಾರ್ಗದರ್ಶಿ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್" ಗೆ ಅನುಸಾರವಾಗಿ ಜಾಗತಿಕ ಮಾಹಿತಿ ಕಂಪನಿಯಾದ ಗೂಗಲ್‌‌ ಬುಧವಾರ ತನ್ನ ಪಾರದರ್ಶಕತೆ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಒಟ್ಟು 27,762 ದೂರುಗಳನ್ನು ಸ್ವೀಕರಿಸಿದ್ದು, 59,350 ಕಂಟೆಂಟ್‌‌ಗಳನ್ನು ತೆಗೆದು ಹಾಕಲಾಗಿದೆ ಎಂದು ಗೂಗಲ್‌ ಹೇಳಿದೆ. "ನಾವು ಪ್ರಪಂಚದಾದ್ಯಂತ ವಿವಿಧ ರೀತಿಯ ವಿನಂತಿಗಳಿಗೆ ಪಾರದರ್ಶಕತೆಯನ್ನು ಒದಗಿಸುವ ಮತ್ತು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬ ಬಗ್ಗೆ ದೀರ್ಘ ಇತಿಹಾಸವನ್ನು ಹೊಂದಿದ್ದೇವೆ. ಈ ಎಲ್ಲಾ ವಿನಂತಿಗಳನ್ನು ಟ್ರ್ಯಾಕ್ ಮಾಡಲಾಗಿದೆ. 2010 ರಿಂದ ಅಸ್ತಿತ್ವದಲ್ಲಿರುವ ಪಾರದರ್ಶಕತೆಯನ್ನು ವರದಿಯಲ್ಲಿ ಸೇರಿಸಲಾಗಿದೆ" ಎಂದು ಗೂಗಲ್ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  "ಇದೆ ಮೊದಲ ಬಾರಿಗೆ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಮಾಸಿಕ ಪಾರದರ್ಶಕತೆ ವರದಿಯನ್ನು ಪ್ರಕಟಿಸುತ್ತೇವೆ. ಭಾರತಕ್ಕಾಗಿ ನಮ್ಮ ವರದಿ ಪ್ರಕ್ರಿಯೆಗಳನ್ನು ಪರಿಷ್ಕರಿಸುವುದರಿಂದ ಹೆಚ್ಚಿನ ವಿವರ ಪ್ರಕಟಿಸುವುದನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

  ಒಕ್ಕೂಟ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದ ನಂತರ ತನ್ನ ಪಾರದರ್ಶಕತೆ ವರದಿಯನ್ನು ಪ್ರಕಟಿಸಿದ ಮೊದಲ ಜಾಗತಿಕ ಟೆಕ್ ಕಂಪೆನಿಯಾಗಿದೆ ಗೂಗಲ್‌‌.

  ಇದನ್ನೂ ಓದಿ: ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡುವವರೆಗೆ ಅನ್​ಲಾಕ್​ ಸಾಧ್ಯವಿಲ್ಲ; ಗೌರವ್ ಗುಪ್ತಾ

  ಹೊಸ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಬೃಹತ್‌‌ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ನಿಯಮಿತವಾಗಿ ಅನುಸರಣೆ ವರದಿಗಳನ್ನು ಪ್ರಕಟಿಸಬೇಕಾಗುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: