• Home
  • »
  • News
  • »
  • national-international
  • »
  • Google Year In Search 2022: ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್ ಆದ ಅಗ್ನಿಪಥ್ ಯೋಜನೆ!

Google Year In Search 2022: ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್ ಆದ ಅಗ್ನಿಪಥ್ ಯೋಜನೆ!

ಅಗ್ನಿಪಥ್ ಯೋಜನೆ

ಅಗ್ನಿಪಥ್ ಯೋಜನೆ

ಅಗ್ನಿಪಥ್ ಸ್ಕೀಮ್ ಎಂದರೇನು? ಎಂಬುದು 'ವಾಟ್ ಇಸ್' ವರ್ಗದ ಅಡಿಯಲ್ಲಿ ವರ್ಷದ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ವಿಷಯವಾಗಿದೆ ಎಂದು ಗೂಗಲ್‌ ವರದಿ ತಿಳಿಸಿದೆ.

  • Share this:

ಅಗ್ನಿಪಥ್ ಯೋಜನೆಯ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆ ಹುಟ್ಟಿಕೊಂಡಿತ್ತು. ಯೋಜನೆ ಬಗ್ಗೆ ಪರ-ವಿರೋಧಗಳು ಕೇಳಿ ಬಂದಿದ್ದವು. ಯೋಜನೆಯನ್ನು ವಿರೋಧಿಸಿ ಹಿಂಸಾಚಾರಗಳೂ ಕೂಡ ನಡೆದಿದ್ದವು. ಒಟ್ಟಾರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅಗ್ನಿಪಥ್ ಯೋಜನೆ (Agnipath Scheme) ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ವಿಚಾರ ದೇಶದಲ್ಲಿ ಮಾತ್ರವಲ್ಲದೇ ಗೂಗಲ್‌ನಲ್ಲೂ (Google Trends) ಸಖತ್‌ ಹವಾ ಮಾಡಿದೆ. ಗೂಗಲ್‌ನಲ್ಲಿ ಏನು ಸುದ್ದಿ ಮಾಡಿದೆ ಅನ್ನೋದಕ್ಕೆ ಮುಂದೆ ಇದೆ ನೋಡಿ ವಿವರ. ಅಂದಹಾಗೆ 2022 ಮುಗಿದು ಹೊಸ ವರ್ಷ ಆರಂಭವಾಗೋದಕ್ಕೆ (Google Year In Search 2022 ಕೆಲವೇ ದಿನಗಳು ಬಾಕಿ ಇದೆ. 2022  ಕಳೆದ ಎರಡು ವರ್ಷಗಳಿಗಿಂತ ಸ್ವಲ್ಪ ಉತ್ತಮವಾಗಿತ್ತು ಎನ್ನಬಹುದು.


ಹಲವಾರು ಮಹತ್ವದ ಘಟನೆಗಳಿಗೆ, ಮೈಲಿಗಲ್ಲುಗಳಿಗೆ, ಗಣ್ಯರ ಸಾವಿಗೆ, ದೇಶಗಳ ನಡುವಿನ ಯುದ್ಧ..ಹೀಗೆ ಹತ್ತಾರು ಘಟನೆಗಳಿಗೆ 2022 ಸಾಕ್ಷಿಯಾಗಿದೆ.


ಅಗ್ನಿಪಥ್ ಯೋಜನೆ ಪರಿಚಯಿಸಿದ ಕೇಂದ್ರ
ಭಾರತವೂ ಸಹ ಇಂತಹ ಕೆಲ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಮುಖ್ಯವಾದದ್ದು ಕೇಂದ್ರ ಸರ್ಕಾರದ ಒಂದು ಯೋಜನೆ. ಭಾರತದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.


ಭಾರತೀಯ ಸೇನೆಯ 3 ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಯುವಕ-ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿಯೇ ಈ ‘ಅಗ್ನಿಪಥ್’ ಯೋಜನೆ. ಆದರೆ ಈ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳೂ ನಡೆದಿತ್ತು.


'ಅಗ್ನಿಪಥ್ ಸ್ಕೀಮ್ʼ, ಗೂಗಲ್‌ನಲ್ಲಿ ಹೆಚ್ಚು ಹುಡುಕಾಟ ನಡೆಸಿದ ವಿಷಯ
ಜೂನ್‌ ಹೊತ್ತಲ್ಲಿ ಈ 'ಅಗ್ನಿಪಥ್ ಸ್ಕೀಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಟಿವಿ, ಮಾಧ್ಯಮ ಎಲ್ಲದರಲ್ಲೂ ಇದರದ್ದೇ ಸುದ್ದಿ. ಅಷ್ಟೇ ಅಲ್ಲ ಗೂಗಲ್‌ ಹುಡಕಾಟದಲ್ಲೂ ಇದೇ ಸುದ್ದಿ ಮುಂದಿದೆ.


ಗೂಗಲ್, ಹುಡುಕಾಟ 2022 ರ ಫಲಿತಾಂಶಗಳನ್ನು ಪ್ರಕಟಿಸಿದ್ದು, ಯಾವ ವಿಷಯಕ್ಕೆ ಹೆಚ್ಚು ಹುಡುಕಾಟ ನಡೆಸಲಾಗಿತ್ತು ಎಂಬುದರ ವರದಿಯನ್ನು ಬಹಿರಂಗಪಡಿಸಿದೆ. ವರದಿಯನುಸಾರ ಅಗ್ನಿಪಥ್ ಸ್ಕೀಮ್ ಎಂದರೇನು? ಎಂಬುದು 'ವಾಟ್ ಇಸ್' ವರ್ಗದ ಅಡಿಯಲ್ಲಿ ವರ್ಷದ ಅತ್ಯಂತ ಹೆಚ್ಚು ಹುಡುಕಾಟದ ವಿಷಯವಾಗಿದೆ ಎಂದು ಗೂಗಲ್‌ ವರದಿ ತಿಳಿಸಿದೆ.


Google ವರ್ಷದ ಹುಡುಕಾಟ ಫಲಿತಾಂಶಗಳನ್ನು ಒಂಬತ್ತು ವಿಭಾಗಗಳ ಅಡಿಯಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆ ಹುಡುಕಾಟಗಳು, ಏನು (What Is), ಹೇಗೆ (How To), ಚಲನಚಿತ್ರಗಳು (Film), ನನ್ನ ಹತ್ತಿರ (Near Me) , ಕ್ರೀಡಾ ಘಟನೆಗಳು (Sports Events), ಜನರು (People) ಸುದ್ದಿ ಈವೆಂಟ್‌ಗಳು ( News Event) ಮತ್ತು ಪಾಕವಿಧಾನಗಳಲ್ಲಿ (Recipes) ಮಾಹಿತಿಯನ್ನು ಬಿಡುಗಡೆ ಮಾಡಿದೆ.


ಈ ಏನು (What Is) ವಿಭಾಗದಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ಹೆಚ್ಚಾಗಿ ಪ್ರಶ್ನಿಸಿ ಹುಡುಕಾಟ ನಡೆಸಾಗಿದೆ ಎಂದು ಗೂಗಲ್‌ ವರದಿ ಹೇಳಿದೆ.


ಅಗ್ನಿಪಥ್ ಯೋಜನೆ ಎಂದರೇನು?
ಈ ಮೇಲೆ ಹೇಳಿದಂತೆ ಭಾರತದ ಭದ್ರತೆಯನ್ನು ಬಲಪಡಿಸುವ ಒಂದು ಯೋಜನೆ. ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೂನ್ 14ಕ್ಕೆ ಉದ್ಘಾಟನೆ ಮಾಡಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ 46,000 ಸೈನಿಕರನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ.


ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?


ಅಗ್ನಿಪಥ್ ಅಥವಾ ಅಗ್ನಿಪಥ್ ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಭಾರತೀಯ ಯುವಕರಿಗೆ ನೇಮಕಾತಿ ಯೋಜನೆಯಾಗಿದೆ. ಪ್ರವೇಶವನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ.


ಈ 4 ವರ್ಷಗಳಲ್ಲಿ, ನೇಮಕಗೊಂಡವರಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಸಶಸ್ತ್ರ ಪಡೆಗಳಿಂದ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.


ಯಾವೆಲ್ಲಾ ವಿಚಾರಗಳ ಬಗ್ಗೆ ಹುಡುಕಿದ್ದಾರೆ?
ನಮ್ಮ ಪ್ರತಿ ಅನುಮಾನಕ್ಕೂ ನಾವು ಗೂಗಲ್‌ ಮೊರೆ ಹೋಗುತ್ತೇವೆ. ಹಾಗೆಯೇ ಈ ವರ್ಷ ಕೂಡ ಜನ ಇಂಡಿಯನ್ ಪ್ರೀಮಿಯರ್ ಲೀಗ್‌ ಬಗ್ಗೆ, ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು 'ಹೇಗೆ' ವರ್ಗದ ಅಡಿಯಲ್ಲಿ ಹೆಚ್ಚು ಹುಡುಕಾಟ ನಡೆಸಿದ್ದಾರಂತೆ.


ಇದನ್ನೂ ಓದಿ: Explained: ರೇವ್ ಪಾರ್ಟಿ ಎಂದರೇನು? ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯೋದು ಹೇಗೆ? ಇಲ್ಲಿದೆ ಸ್ಫೋಟಕ ಮಾಹಿತಿ


ಹಾಗೆಯೇ ಲತಾ ಮಂಗೇಶ್ಕರ್, ಸಿಧು ಮೂಸ್ ವಾಲಾ ಸಾವು, ರಷ್ಯಾ-ಉಕ್ರೇನ್ ಯುದ್ಧ, ಯುಪಿ ಚುನಾವಣಾ ಫಲಿತಾಂಶಗಳು ಮತ್ತು ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಭಾರತದಲ್ಲಿ ವರ್ಷದ ಅತಿ ಹೆಚ್ಚು ಹುಡುಕಾಟದ ಸುದ್ದಿಗಳಾಗಿವೆ ಎಂದು ಗೂಗಲ್ ಹೇಳಿದೆ.

Published by:ಗುರುಗಣೇಶ ಡಬ್ಗುಳಿ
First published: