ಕೇರಳ: ಕಾಲ ಬದಲಾಗಿದ್ದು, ಇಂದು ತಂತ್ರಜ್ಞಾನ (Technology) ಬಹಳ ಮುಂದುವರಿದಿದೆ. ಮನುಷ್ಯನ ಜೀವನದ ಬಹುತೇಕ ಚಲನವಲನಗಳು ಯಾವುದಾದರೊಂದು ರೂಪದಲ್ಲಿ ತಂತ್ರಜ್ಞಾನದಲ್ಲಿ ದಾಖಲಾಗುತ್ತಿವೆ. ಟೆಕ್ನಾಲಜಿಯಿಂದ ಒಳ್ಳೆಯ ಕೆಲಸಗಳು ಹೇಗೆ ಆಗುತ್ತಿದಿಯೋ, ಹಾಗೆ ಅನೇಕ ಅಪರಾಧ (Crime) ಪ್ರಕರಣಗಳ ಆರೋಪಿಗಳಿಗೆ (Accuses) ನೆರವಾಗುತ್ತಿದೆ. ಅದೇ ಟೆಕ್ನಾಲಜಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೂ (Police) ಕೂಡ ಸಹಾಯ ಮಾಡುತ್ತಿದೆ. ಇಲ್ಲೊಂದು ನಿಗೂಢ ಕೊಲೆಯ (Murder Mystery) ಪ್ರಕರಣವನ್ನು ಪೊಲೀಸರು ಟೆಕ್ನಾಲಜಿ ಬಳಸಿ ಭೇದಿಸಿದ್ದಾರೆ. 2020ರಲ್ಲಿ ಕೇರಳದಲ್ಲಿ (Kerala) ನಡೆದಿದ್ದ ಕೊಲೆ ಪ್ರಕರಣದ ಅಪರಾಧಿಯನ್ನು ಗುರುತಿಸುವಲ್ಲಿ ಗೂಗಲ್ ಸರ್ಚ್ ಹಿಸ್ಟರಿ ನೆರವಾಗಿದೆ. ಪೊಲೀಸರು ವರದಿ ಮಾಡಿರುವ ಈ ಕೊಲೆ ಪ್ರಕರಣದ ವಿವರವನ್ನುಇಲ್ಲಿ ತಿಳಿದುಕೊಳ್ಳೋಣ.
ಗೆಳತಿಯನ್ನು ಕತ್ತು ಹಿಸುಕಿ ಕೊಂದಿದ್ದ ಆರೋಪಿ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ರಶಾಂತ್ ನಂಬಿಯಾರ್ (33) ಸಂಗೀತ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ. ಮಾರ್ಚ್ 20, 2020 ರಂದು ಪ್ರಶಾಂತ್ ತನ್ನ ಗೆಳತಿ ಸುಚಿತ್ರಾ ಪಿಳ್ಳೈ (42) ಅವರನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಶವವನ್ನು ಬೆಡ್ ಶೀಟ್ನಲ್ಲಿ ಸುತ್ತಿ ಮನೆಯ ಹಿಂದೆ ಹೂತು ಹಾಕಿದ್ದ. ಆದರೆ ಅದಕ್ಕೂ ಮುನ್ನ ಹೇಗೆ ಕೊಲ್ಲಬೇಕು? ಎಂದು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ವಿವಿಧ ಸಿನಿಮಾಗಳಲ್ಲಿನ ಕೊಲೆ ದೃಶ್ಯಗಳನ್ನು ನೋಡಿ ಪ್ಲಾನ್ ಪ್ರಕಾರ ಆಕೆಯನ್ನು ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಚಿತ್ರಾ ಮತ್ತು ಪ್ರಶಾಂತ್ 2019 ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಸುಚಿತ್ರಾ ಪ್ರಶಾಂತ್ನ ಹೆಂಡತಿಗೆ ದೂರದ ಸಂಬಂಧಿಯಾಗಿದ್ದರು. ಪ್ರಶಾಂತ್ ಮಗನ ನಾಮಕರಣ ಕಾರ್ಯಕ್ರಮದ ವೇಳೆ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ಆಗ ತಾನೇ ಪತಿಯಿಂದ ವಿಚ್ಛೇದನ ಪಡೆದಿದ್ದ ಸುಚಿತ್ರಾ ಮತ್ತೆ ಮದುವೆಯಾಗಲು ಬಯಸಲಿಲ್ಲ. ಆದರೆ ತಾಯಿಯಾಗಬೇಕೆಂಬ ಆಸೆ ಹೊಂದಿದ್ದರು.
ಸಂಬಂಧ ಬಯಲಾಗಬಹುದು ಎಂದು ಕೊಲೆಗೆ ನಿರ್ಧಾರ
ಹಾಗಾಗಿ ಪ್ರಶಾಂತ್ ಜೊತೆ ಮಗುವನ್ನು ಪಡೆಯಲು ಬಯಸಿದ್ದರು. ಇದಾದ ನಂತರ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದರು. ಪ್ರಶಾಂತ್ ಆಕೆಯಿಂದ 2.56 ಲಕ್ಷ ರೂಪಾಯಿ ಪಡೆದಿದ್ದ, ಆದರೆ ಇಬ್ಬರ ನಡುವಿನ ಸಂಬಂಧ ಎಂದಾದರೂ ಹೊರಬಿದ್ದು ಸಮಾಜದಲ್ಲಿ ಮರ್ಯಾದೆ ಹೋಗಬಹುದು ಎಂದುಕೊಂಡ ಪ್ರಶಾಂತ್ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಶಾಂತ್ ತನ್ನ ಹೆಂಡತಿಯನ್ನು ಕೊಲ್ಲಂಗೆ ಕಳುಹಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಶಾಂತ್ ನಾಲ್ಕು ದಿನ ಮನೆಯಲ್ಲೇ ಇದ್ದ
ಕೊಲ್ಲಂನಲ್ಲಿರುವ ಬ್ಯೂಟಿಷಿಯನ್ ತರಬೇತಿ ಕೇಂದ್ರಕ್ಕೆ ತೆರಳಲು ಸುಚಿತ್ರಾ ಮಾರ್ಚ್ 17 ರಂದು ಮನೆಯಿಂದ ಹೊರಟಿದ್ದರು. ಸಂಜೆ ಮನೆಗೆ ಕರೆ ಮಾಡಿ ಕೊಚ್ಚಿಯಲ್ಲಿ ಟ್ರೈನಿಂಗ್ ಕ್ಲಾಸ್ಗೆ ಹೋಗುವುದಾಗಿ ತಿಳಿಸಿ ಪ್ರಶಾಂತ್ ಮನೆಗೆ ಬಂದಿದ್ದರು. ರಾತ್ರಿ ಮನೆಗೆ ಬರುವಾಗ ಯಾರೂ ಆಕೆಯನ್ನು ಪತ್ತೆ ಮಾಡದಂತೆ ಕಪ್ಪು ಬಟ್ಟೆ ಧರಿಸುವಂತೆ ಪ್ರಶಾಂತ್‌ಗೆ ಆತ ಮೊದಲೇ ಹೇಳಿದ್ದ. ಅಂದು ರಾತ್ರಿ ಇಬ್ಬರೂ ಪಾಲಕ್ಕಾಡ್ನಿಂದ ಕೊಲ್ಲಂ ಹೆದ್ದಾರಿಯಲ್ಲಿ 270 ಕಿ.ಮೀ ಪ್ರಯಾಣಿಸಿದ್ದರು. ಪ್ರಶಾಂತ್ ಮಾರ್ಚ್ 20ರವರೆಗೆ ಆಕೆಯನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ.
ಕೊಂದು ತುಂಡು ಮಾಡಿದ್ದ ಆರೋಪಿ
ಮಾರ್ಚ್ 20ರಂದು ರಾತ್ರಿ ಸುಚಿತ್ರಾಳ ಮೇಲೆ ಹಲ್ಲೆ ನಡೆಸಿದ ಪ್ರಶಾಂತ್, ಆಕೆಯನ್ನು ನೆಲಕ್ಕೆ ಕೆಡವಿ, ವಿದ್ಯುತ್ ತಂತಿಯ ಸಹಾಯದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಅದರ ನಂತರ ಅವನು ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದ. ನಂತರ ಮನೆಯ ಹಿಂದೆ ಹೊಂಡ ತೋಡಿ ದೇಹದ ಭಾಗಗಳನ್ನು ಅದರೊಳಗಿಟ್ಟು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ನಾಯಿಗಳು ಗುರುತು ಹಿಡಿಯದಂತೆ ಗುಂಡಿಯನ್ನು ಸಿಮೆಂಟ್ ಮತ್ತು ಕಲ್ಲುಗಳಿಂದ ಮುಚ್ಚಿ ಹಾಕಿದ್ದ.
ಮಾರ್ಚ್ 23 ರಿಂದ ಪೊಲೀಸ್ ತನಿಖೆ
ಮಾರ್ಚ್ 23ರಂದು ಬೆಳಗ್ಗೆ ಸುಚಿತ್ರಾಳ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದಾರೆ. ತನಿಖೆಯ ಭಾಗವಾಗಿ ಸುಚಿತ್ರಾ ಮತ್ತು ಪ್ರಶಾಂತ್ ನಡುವಿನ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಲಾಗಿತ್ತು. ಅಲ್ಲದೆ ಪ್ರಶಾಂತ್, ಕಾಲ್ ರೆಕಾರ್ಡ್ ಜೊತೆಗೆ ಇಂಟರ್ನೆಟ್ ಬಳಕೆಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಗೂಗಲ್ ಸರ್ಚ್ ಹಿಸ್ಟರಿ ಚೆಕ್ ಮಾಡಿದಾಗ ಪ್ರಶಾಂತ್ ಸಿಕ್ಕಿಬಿದ್ದಿದ್ದಾನೆ.
ಆರೋಪಿಗೆ 14 ವರ್ಷ ಜೈಲು, ದಂಡ
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೊಲ್ಲಂನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ- ಕಳೆದ ಸೋಮವಾರ ತೀರ್ಪು ಪ್ರಕಟಿಸಿದೆ. ಕೊಲ್ಲಂ ಜಿಲ್ಲೆಯ ನಡುವಿಲಕ್ಕರ ಗ್ರಾಮದ ಸುಚಿತ್ರಾ ಕೊಲೆ ಪ್ರಕರಣದಲ್ಲಿ ಪ್ರಶಾಂತ್‌ಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ