Spring Season Google Doodle: ಡೂಡಲ್​ ವಿನ್ಯಾಸದೊಂದಿಗೆ ವಸಂತ ಋತುವನ್ನು ಬರಮಾಡಿಕೊಂಡ ಗೂಗಲ್

What is Spring Season | Google Doodle: ವಸಂತ ಋತುವಿನಲ್ಲಿ ಮರಗಿಡಗಳು ಚಿಗುರುತ್ತದೆ. ವಸಂತ ಋತುವಿನೊಂದಿಗೆ ಭಾರತದಲ್ಲಿ ಹೊಸ ವರ್ಷ ಶುರುವಾಗುತ್ತದೆ.

ಗೂಗಲ್ ಡೂಡಲ್

ಗೂಗಲ್ ಡೂಡಲ್

  • Share this:
    Spring Season Google Doodle:  ಬೆಂಗಳೂರು (ಮಾ. 19): ಜಗತ್ತಿನ ಪ್ರತಿಯೊಂದು ವಿಶೇಷವಾದ ದಿನಕ್ಕೂ ಡೂಡಲ್ ಗೌರವ ಸಲ್ಲಿಸುವ ಗೂಗಲ್ ಇಂದು ಡೂಡಲ್ ಮೂಲಕ ವಸಂತ ಋತುವನ್ನು ಬರಮಾಡಿಕೊಂಡಿದೆ. ತಿಳಿನೀಲಿ ಬಣ್ಣದ ಆಕಾಶ, ಪ್ಯಾರಾಚೂಟ್​ಗಳೊಂದಿಗೆ ಗೂಗಲ್ ತನ್ನ ಹೋಂ ಪೇಜ್ ಅನ್ನು ವಿನ್ಯಾಸಗೊಳಿಸಿದೆ.

    ವಸಂತಕಾಲವೆಂದರೆ ಅದು ಸಂಭ್ರಮದ ಕಾಲ. ಸೂರ್ಯನ ಸುತ್ತ ಭೂಮಿ ಸುತ್ತಲು ಒಂದು ವರ್ಷ ಬೇಕಾಗುತ್ತದೆ. ಹೀಗೆ ತಿರುಗುವಾಗ ಹವಾಮಾನದಲ್ಲಿ ಬದಲಾವಣೆಯಾಗುತ್ತದೆ. ಈ ವಸಂತ ಋತುವಿನಲ್ಲಿ ಮರಗಿಡಗಳು ಚಿಗುರುತ್ತದೆ. ವಸಂತ ಋತುವಿನೊಂದಿಗೆ ಭಾರತದಲ್ಲಿ ಹೊಸ ವರ್ಷ ಶುರುವಾಗುತ್ತದೆ. ವರ್ಷದ ಆರಂಭವಾದ ಈ ಋತುವಿನಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ವಸಂತ ಋತುವನ್ನು ಋತುಗಳ ರಾಜ ಎಂದೇ ಕರೆಯಲಾಗುತ್ತದೆ.

    ಇದನ್ನೂ ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆ; ವಿಶ್ವಾದ್ಯಂತ 8,000ಕ್ಕೂ ಹೆಚ್ಚು ಬಲಿ

    ವಸಂತ ಕಾಲದೊಂದಿಗೆ ಹೊಸ ವರ್ಷದ ಆರಂಭವಾಗುತ್ತದೆ. ಇಂದಿನಿಂದ ಬೇಸಿಗೆಯ ಧಗೆ ಹೆಚ್ಚಾಗುತ್ತದೆ. ಎಲ್ಲೆಡೆ ಹೊಸ ಚಿಗುರು, ಭೂಮಿಗೆ ಮರುಜೀವ ತುಂಬುವ ಕಾಲವೆಂದು ವಸಂತ ಋತುವನ್ನು ಪರಿಗಣಿಸಲಾಗುತ್ತದೆ. ಇಂದಿನಿಂದ ವಸಂತ ಋತು ಆರಂಬವಾಗುವುದರಿಂದ ತಿಳಿ ನೀಲಿ ಬಣ್ಣದ ಆಕಾಶ, ಪ್ಯಾರಾಚೂಟ್​ಗಳೊಂದಿಗೆ ಗೂಗಲ್ ಡೂಡಲ್ ತನ್ನ ಪೇಜನ್ನು ವಿನ್ಯಾಸಗೊಳಿಸಿದೆ.
    First published: