ಗೂಗಲ್‌ ಮೀಟ್‌ನಲ್ಲಿ ಮೀಟಿಂಗ್ ಮಾಡೋರಿಗೆ ಶಾಕ್; ನಾಳೆಯಿಂದ ಹೊಸ ರೂಲ್ಸ್!

ಈ ಗೂಗಲ್​​ ಮೀಟಿಂಗ್​ನಲ್ಲಿ 250ಕ್ಕೂ ಹೆಚ್ಚು ಮಂದಿ ಭಾಗವಹಿಸಬಹುದಾಗಿದೆ. ಲೈವ್​ ಸ್ಟ್ರೀಮಿಂಗ್​ ಜೊತೆಗೆ ಮೀಟಿಂಗ್​ ರೆಕಾರ್ಡ್​​​​​​​​ಗಳನ್ನು ಗೂಗಲ್​ ಡ್ರೈವ್​​​ನಲ್ಲಿ ಸೇವ್ ಮಾಡಿಕೊಳ್ಳುವ ಕೆಲವು ಸುಧಾರಿತ ಬದಲಾವಣೆಗಳನ್ನು ತರಲಾಗಿದೆ

ಗೂಗಲ್ ಮೀಟ್

ಗೂಗಲ್ ಮೀಟ್

 • Share this:
  ನವದೆಹಲಿ(ಸೆ.29): ಕೊರೋನಾ ವೈರಸ್​ ಬಂದಾಗಿನಿಂದ ಬಹುತೇಕ ಕಚೇರಿಗಳು ಮುಚ್ಚಿದ್ದು, ವರ್ಕ್​​ ಫ್ರಂ ಹೋಮ್​ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಅದರಲ್ಲೂ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮುಖಾಮುಖಿ ಭೇಟಿಯಾಗಲು ಸಾಧ್ಯವಾಗದ ಕಾರಣ ಗೂಗಲ್​ ಮೀಟ್ ಮೂಲಕ ಮೀಟಿಂಗ್​ಗಳನ್ನು ನಡೆಸಲಾಗುತ್ತಿದೆ. ಈ ಗೂಗಲ್​ ಮೀಟ್​ ಆ್ಯಪ್​ನಲ್ಲಿ ಕೆಲವು ಅಪ್​ಡೇಟ್​​ಗಳನ್ನು ಮಾಡಲಾಗಿದೆ. ವಿಡಿಯೋ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್​​ ​ಗೂಗಲ್ ಮೀಟ್​​ ಉಚಿತ ಆವೃತ್ತಿಯನ್ನು ಕೇವಲ 60 ನಿಮಿಷಗಳವರೆಗೆ ಮಿತಿಗೊಳಿಸಿದೆ. ಅಂದರೆ ಒಂದು ಗಂಟೆ ಮಾತ್ರ ಉಚಿತವಾಗಿ ಮೀಟಿಂಗ್ ಹೋಸ್ಟ್​ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಹಣ ಪಾವತಿ ಮಾಡಬೇಕಾಗುತ್ತದೆ.ಈ ಹೊಸ ನಿಯಮ ಸೆಪ್ಟೆಂಬರ್ 30ರಿಂದ ಅನ್ವಯವಾಗಲಿದೆ. 

  ಈ ಗೂಗಲ್​​ ಮೀಟಿಂಗ್​ನಲ್ಲಿ 250ಕ್ಕೂ ಹೆಚ್ಚು ಮಂದಿ ಭಾಗವಹಿಸಬಹುದಾಗಿದೆ. ಲೈವ್​ ಸ್ಟ್ರೀಮಿಂಗ್​ ಜೊತೆಗೆ ಮೀಟಿಂಗ್​ ರೆಕಾರ್ಡ್​​​​​​​​ಗಳನ್ನು ಗೂಗಲ್​ ಡ್ರೈವ್​​​ನಲ್ಲಿ ಸೇವ್ ಮಾಡಿಕೊಳ್ಳುವ ಕೆಲವು ಸುಧಾರಿತ ಬದಲಾವಣೆಗಳನ್ನು ತರಲಾಗಿದೆ. ಪ್ರೋಮೋ ಮತ್ತು ಸುಧಾರಿತ ವೈಶಿಷ್ಟ್ಯಗಳ ಬದಲಾವಣೆಗಳ ಕುರಿತು ಸಂವಹನ ನಡೆಸುವ ಬಗ್ಗೆ ಇನ್ನೂ ಸಹ ಉದ್ದೇಶಿಸಿಲ್ಲ. ಇದು ಬದಲಾದರೆ ನಿಮಗೆ ಖಚಿತವಾಗಿ ತಿಳಿಸುತ್ತೇವೆ ಎಂದು ಗೂಗಲ್​ ತಿಳಿಸಿದೆ.

  ಡ್ರಗ್ಸ್ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರ ಸಮರ; 380 ಕೆ.ಜಿ ಗಾಂಜಾ ಮತ್ತು 70 ಆರೋಪಿಗಳ ವಶ

  ಅಪ್​ಡೇಟ್​ ಆದ ಗೂಗಲ್​ ಮೀಟ್​ ಬಳಸಲು ಇಚ್ಛಿಸದ ಬಳಕೆದಾರರು ಮೀಟಿಂಗ್​ಗಳ ಮಿತಿಯೊಂದಿಗೆ ಉಚಿತ ಆವೃತ್ತಿ ಬಳಕೆಯನ್ನು ಮುಂದುವರೆಸಬಹುದಾಗಿದೆ. ಹಣ ಪಾವತಿ ಮಾಡಲು ಸಿದ್ಧವಿಲ್ಲದಿದ್ದರೆ 1 ಗಂಟೆಯೊಳಗೆ ಮೀಟಿಂಗ್​ ಮುಕ್ತಾಯಗೊಳಿಸಬೇಕಿದೆ.

  ಕೊರೋನಾ ವೈರಸ್​​ನಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ಗೂಗಲ್​ ಮೀಟ್ ಮತ್ತು ಜೂಮ್​ನಂತಹ ಇತರೆ ವಿಡಿಯೋ ಕಾನ್ಪರೆನ್ಸಿಂಗ್ ಪ್ಲಾಟ್​​ಫಾರ್ಮ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗೂಗಲ್ ಮೀಟ್ ಮತ್ತು ಜೂಮ್​​ನಂತಹ ಈ ಅಪ್ಲಿಕೇಶನ್​ ಮೂಲಕ ಸಭೆಯಲ್ಲಿ ಭಾಗವಹಿಸುವವರ ಸಂಖ್ಯೆ100 ಮಿಲಿಯನ್ ದಾಟಿದೆ.

  ಈ ಮೊದಲು ಗೂಗಲ್ ತನ್ನ ಮೀಟ್​ ಅಪ್ಲಿಕೇಶನ್​ನಲ್ಲಿ ಹೊಸ ಫೀಚರ್ ಬಿಡುಗಡೆ ಮಾಡಿತ್ತು. ಬಳಕೆದಾರರು ಏಕಕಾಲದಲ್ಲಿ 49 ಜನರನ್ನು ಆ್ಯಪ್​ ಮೂಲಕ ನೋಡಬಹುದಾಗಿದೆ.
  Published by:Latha CG
  First published: