Titanoboa Theories: ಭೂಮಿಯ ಮೇಲಿನ ಅತಿದೊಡ್ಡ ಹಾವಿನ ಅಸ್ಥಿಪಂಜರ ಪತ್ತೆ ಮಾಡಿದ Google Map: ವಿಡಿಯೋ ವೈರಲ್

ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಫ್ರಾನ್ಸ್‌ನಲ್ಲಿ ಯಾರೋ ಒಬ್ಬರು ದೈತ್ಯ 'ಹಾವಿನ ಅಸ್ಥಿಪಂಜರ'ವನ್ನು ಕಂಡು ಹಿಡಿದಿದ್ದಾರೆ. ಅದರ ನಂತರ ಟೈಟಾನೊಬೊವಾ ಚರ್ಚೆ ಪ್ರಾರಂಭವಾಗಿದೆ.

ಅತಿದೊಡ್ಡ ಹಾವಿನ ಅಸ್ಥಿಪಂಜರ

ಅತಿದೊಡ್ಡ ಹಾವಿನ ಅಸ್ಥಿಪಂಜರ

 • Share this:
  ಗೂಗಲ್ ನಕ್ಷೆಗಳು (Google Maps) ಟೈಟಾನೊಬೊವಾ ಸಿದ್ಧಾಂತ (Titanoboa Theories ) ಗಳನ್ನು ಹುಟ್ಟು ಹಾಕುತ್ತವೆ. ಮನುಷ್ಯರು (Peoples) ತಮ್ಮ ಪ್ರಯಾಣದ ವೇಳೆ ದಾರಿ (Road) ಗೊತ್ತಾಗದೇ ಹೋದಾಗ, ದಾರಿಯಲ್ಲಿ ಸಿಗುವ ಇತರೆ ಜನರನ್ನು ಕೇಳುತ್ತಾ ತಾವು ತಲುಪುವ ನಿಲ್ದಾಣ ಮುಟ್ಟುತ್ತಿದ್ದರು. ಅದು ಪರಸ್ಪರ ದಾರಿ ಕೇಳುವ ಮೂಲಕ ಪ್ರಯಾಣಿಸುತ್ತಿದ್ದ (Travel) ಸಮಯವಾಗಿತ್ತು. ಆದರೆ ಗೂಗಲ್ ಅಣ್ಣಯ್ಯ, ಈಗ ಗೂಗಲ್ ಮ್ಯಾಪ್ಸ್ ಅವಕಾಶ ನೀಡಿದ್ದು, ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಈಗ ಕೇವಲ 'ಗೂಗಲ್ ಮ್ಯಾಪ್ಸ್' ನಲ್ಲಿ ಸ್ಥಳದ ಹೆಸರನ್ನು ಟೈಪ್ ಮಾಡಿ ಮತ್ತು ಅಲ್ಲಿಗೆ ಹೋಗುವ ಮಾರ್ಗವನ್ನು ಮತ್ತು ಇತರ ಹಲವು ವಿಷಯಗಳನ್ನು ಸಹ ಅದು ನಿಮಗೆ ತಿಳಿಸುತ್ತದೆ.

  ಅಲ್ಲದೆ, 'ಗೂಗಲ್ ಮ್ಯಾಪ್ಸ್' ಸಹಾಯದಿಂದ ನೀವು ಎಲ್ಲಿ ಬೇಕಾದರೂ ಕುಳಿತು ಪ್ರಪಂಚದ ಯಾವುದೇ ಭಾಗವನ್ನು ನೋಡಬಹುದು. ಗೂಗಲ್ ನಕ್ಷೆಗಳನ್ನು ಬಳಸಿಕೊಂಡು

  ಫ್ರಾನ್ಸ್‌ನಲ್ಲಿ ಯಾರೋ ಒಬ್ಬರು ದೈತ್ಯ 'ಹಾವಿನ ಅಸ್ಥಿಪಂಜರ'ವನ್ನು ಕಂಡು ಹಿಡಿದಿದ್ದಾರೆ. ಅದರ ನಂತರ ಟೈಟಾನೊಬೊವಾ ಚರ್ಚೆ ಪ್ರಾರಂಭವಾಗಿದೆ.

  ಈ ವಿಷಯ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದು

  ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, 'TikTok' ನಲ್ಲಿ @googlemapsfun ಎಂಬ ಹೆಸರಿನ ಖಾತೆಯಿದೆ. ಇದು 'ಗೂಗಲ್ ನಕ್ಷೆಗಳನ್ನು' ಅನ್ವೇಷಿಸುವಾಗ ಕಂಡು ಬಂದ ವಿಷಯಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ.

  ಇದನ್ನೂ ಓದಿ: ಪ್ರೀತಿಯ ಶ್ವಾನದ ನೆನಪಿಗಾಗಿ ಮಂದಿರ ಕಟ್ಟಿದ ಮಾಲೀಕ! ಇದು ಪ್ರಾಣಿ ಪ್ರೀತಿ ಅಂದ್ರೆ

  ಮಾರ್ಚ್ 24 ರಂದು, ಈ ಖಾತೆಯಿಂದ ಆಘಾತಕಾರಿ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಈ ದೃಶ್ಯವು ಫ್ರಾನ್ಸ್‌ನ ಕರಾವಳಿಯಲ್ಲಿದೆ ಎಂದು ಹೇಳಲಾಗಿದೆ. ಅಲ್ಲಿ 'ದೊಡ್ಡ ಹಾವಿನ ಅಸ್ಥಿಪಂಜರ'ದಂತಹ ವಸ್ತು ಕಂಡು ಬಂದಿದೆ.

  ಈ 'ಅಸ್ಥಿಪಂಜರ' ಸುಮಾರು 30 ಮೀಟರ್ ಉದ್ದವಿದೆ

  ಅವರು ಶೀರ್ಷಿಕೆಯಲ್ಲಿ ಹೇಳಿರುವ ಪ್ರಕಾರ, 'ಫ್ರಾನ್ಸ್‌ನಲ್ಲಿ ಎಲ್ಲೋ, ನಾವು ಕೆಲವು ದೊಡ್ಡದನ್ನು ನೋಡಲು ಸಾಧ್ಯವಾಯಿತು. ಅದನ್ನು ಉಪಗ್ರಹಗಳ ಮೂಲಕ ಮಾತ್ರ ನೋಡಬಹುದು. ಇದನ್ನು 'ಗೂಗಲ್ ಅರ್ಥ್' ನಲ್ಲಿ ಮರೆ ಮಾಡಲಾಗಿದೆ. ಬಳಕೆದಾರರು ಇದನ್ನು ದೊಡ್ಡ ಹಾವುಗಳಲ್ಲಿ ಒಂದೆಂದು ಪರಿಗಣಿಸುತ್ತಿದ್ದಾರೆ!

  ಇದು ಸುಮಾರು 30 ಮೀಟರ್ ಉದ್ದವಿದ್ದು, ಹಿಂದೆ ಹಿಡಿದ ಯಾವುದೇ ಹಾವಿಗಿಂತ ದೊಡ್ಡದಾಗಿದೆ. ಅಷ್ಟೇ ಅಲ್ಲ, ಈ ಅಸ್ಥಿಪಂಜರವು ಅಳಿವಿನಂಚಿನಲ್ಲಿರುವ 'ಟೈಟಾನೊಬೊವಾ' ಹಾವಿನದ್ದಾಗಿರಬಹುದು ಎಂದು ಅವರು ಬರೆದಿದ್ದಾರ. ಇದು ಅತಿದೊಡ್ಡ ಹಾವುಗಳ ಜಾತಿಯಾಗಿದೆ.

  ವೀಡಿಯೊ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ

  ಈ ಆಘಾತಕಾರಿ ವೀಡಿಯೊವನ್ನು 'ಟಿಕ್‌ಟಾಕ್' ನಲ್ಲಿ 2 ಮಿಲಿಯನ್ (20 ಲಕ್ಷ) ಬಾರಿ ವೀಕ್ಷಿಸಲಾಗಿದೆ. ಸಹಜವಾಗಿ, ಇದು ಹಾವಿನಂತೆಯೇ ಇರುತ್ತದೆ. ಇದನ್ನು ನೀವು 'ಗೂಗಲ್ ನಕ್ಷೆ' ಸಹಾಯದಿಂದ ಸಹ ನೋಡಬಹುದು. ಆದರೆ, ಈ ‘ಅಸ್ಥಿಪಂಜರದ ಕಥೆಯೇ ಬೇರೆ.

  ಸ್ನೋಪ್ಸ್ ವೈರಲ್ ಕ್ಲಿಪ್ ಅನ್ನು ಪರಿಶೀಲಿಸಿದಾಗ, ಜಗತ್ತು ದೈತ್ಯಾಕಾರದ 'ಹಾವಿನ ಅಸ್ಥಿಪಂಜರ' ಎಂದು ಭಾವಿಸಿದ್ದನ್ನು ಅವರು ಕಂಡು ಕೊಂಡರು. ಅದು ಲೆ ಸರ್ಪೆಂಟ್ ಡಿ'ಓಷನ್ ಎಂದು ಕರೆಯಲ್ಪಡುವ ದೈತ್ಯ ಲೋಹದ ಪ್ರತಿಮೆಯಾಗಿದೆ.

  ಈ ಪ್ರತಿಮೆಯು ಫ್ರಾನ್ಸ್‌ನ ಪಶ್ಚಿಮ ಕರಾವಳಿಯಲ್ಲಿ 425 ಅಡಿಗಳಷ್ಟು ಎತ್ತರದಲ್ಲಿದೆ. ಲೆ ಸರ್ಪೆಂಟ್ ಡಿ'ಓಷನ್ ಅನ್ನು 2012 ರಲ್ಲಿ ಎಸ್ಟುವೈರ್ ಕಲಾ ಪ್ರದರ್ಶನದ ಭಾಗವಾಗಿ ಅನಾವರಣಗೊಳಿಸಲಾಯಿತು. ಅಟ್ಲಾಸ್ ಅಬ್ಸ್ಕ್ಯೂರಾ ವರದಿ ಮಾಡಿದಂತೆ,

  ಇದನ್ನು ಸಿನೋ-ಫ್ರೆಂಚ್ ಕಲಾವಿದ ಹುವಾಂಗ್ ಯೋಂಗ್ ಪಿಂಗ್ ರಚಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿಕೊಂಡಿರುವ 'ಹಾವಿನ ಅಸ್ಥಿಪಂಜರ' ನಿಜಕ್ಕೂ ಒಂದು ಕಲೆ ಎಂಬುದು ಕೊನೆಗೂ ಸಾಬೀತಾಗಿದೆ.

  ಟೈಟಾನೊಬೊವಾ ಎಂದರೇನು?

  ಟೈಟಾನೊಬೋವಾ ಎಂಬುದು ಹಾವು. ಅದರ ಮುಂದೆ ಇಂದಿನ ಅನಕೊಂಡ ಕೂಡ ಕುಬ್ಜವಾಗಿ ಚಿಕ್ಕದಾಗಿ ಕಾಣುತ್ತದೆ. ಹೌದು, ಟೈಟಾನೊಬೊವಾವನ್ನು “ಭೂಮಿಯ ಮೇಲಿನ ಅತಿದೊಡ್ಡ ಹಾವು” ಎಂದು ಪರಿಗಣಿಸಲಾಗಿದೆ.

  ಇದನ್ನೂ ಓದಿ: ಈಜುವಾಗ ಮಹಿಳೆಯ ಕಿವಿ ಹೊಕ್ಕಿದ ಏಡಿ: ಮುಂದೇನಾಯ್ತು ನೀವೇ ನೋಡಿ

  ಈ ಜಾತಿಯ ಹಾವುಗಳು ಭೂಮಿಯಿಂದ ನಿರ್ನಾಮವಾಗಿವೆ ಎಂದು ಹೇಳಲಾಗುತ್ತದೆ. ಆದರೆ ಈ ಟಿಕ್‌ಟಾಕ್ ವಿಡಿಯೋ ವೈರಲ್ ಆದ ನಂತರ ಮತ್ತೊಮ್ಮೆ ಈ ಹಾವು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ.
  Published by:renukadariyannavar
  First published: