Rudolf Weigl: ಪೋಲಿಷ್ ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್‍ಗೆ ಗೂಗಲ್ ಡೂಡಲ್ ಗೌರವ

ಮೊದಲನೆಯ ಮಹಾಯುದ್ಧದ ಸಮಯದಲ್ಲಿ, ಟೈಫಸ್ ಎಂಬ ಸೋಂಕು ಯುರೋಪ್ ಅನ್ನು ಅಲ್ಲೋಲ ಕಲ್ಲೋಲವಾಗಿಸಿತು ಮತ್ತು ಇದರಿಂದ ಲಕ್ಷಾಂತರ ಮಂದಿ ಮೃತಪಟ್ಟರು. ವೀಗೆಲ್ ಈ ಸೋಂಕಿನ ಬಗ್ಗೆ ತಿಳಿದುಕೊಳ್ಳಲು ಮತ್ತು ರೋಗದ ಬಗ್ಗೆ ಸಂಶೋಧನೆ ಮಾಡಲು ನಿರ್ಧರಿಸಿದನು.

ಪೋಲಿಷ್ ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್‍

ಪೋಲಿಷ್ ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್‍

  • Share this:

ಪೋಲಿಷ್ ಜೀವಶಾಸ್ತ್ರಜ್ಞ ರುಡಾಲ್ಫ್ ವೀಗಲ್ ಅವರಿಗೆ ಇಂದು ಗೂಗಲ್ ತನ್ನ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಸಾಂಕ್ರಾಮಿಕ ರೋಗ ಟೈಫಾಸ್‍ಗೆ ಲಸಿಕೆ ಕಂಡು ಹಿಡಿದ ಕೀತಿ ಇವರಿಗೆ ಸಲ್ಲುತ್ತದೆ. ಜೊತೆಗೆ ಎರಡನೇ ಮಹಾಯುದ್ಧದಲ್ಲಿ ಯಹೂದಿಗಳ ಜೀವ ಉಳಿಸಿದ ಸಂಶೋಧಕ ಹಾಗೂ ವೈದ್ಯರಾದ ರುಡಾಲ್ಫ್ ವೀಗಲ್‍ಗೆ ಈ ಗೌರವ ದಕ್ಕಿದೆ.ಇವರು ಇಂದಿಗೆ ಜನಿಸಿ 138ನೇ ವರ್ಷ. ಹಾಗಾಗಿ ಇವರ ಜನ್ಮ ದಿನದ ಪ್ರಯುಕ್ತ ಜೀವಶಾಸ್ತ್ರ ಪ್ರಯೋಗಾಲಯದಲ್ಲಿ ಔಷಧಿಯ ಸಂಶೋಧನೆಯಲ್ಲಿ ತೊಡಗಿರುವ ಚಿತ್ರ ಹಾಕುವ ಮೂಲಕ ರುಡಾಲ್ಫ್‌ರಿಗೆ ಗೌರವ ನೀಡಿದೆ.


ರುಡಾಲ್ಫ್ ಸ್ಟೀಫನ್ ಜಾನ್ ವೀಗಲ್ 1883ರಲ್ಲಿ ಆಸ್ಟ್ರೋ ಹಂಗೇರಿಯನ್ ಸಮೀಪದ ಪ್ರೆರೌ ಎಂಬಲ್ಲಿ ಜನಿಸಿದರು. ಇವರು ಚಿಕ್ಕವರಿರುವಾಗಲೇ ಇವರ ತಂದೆ ಬೈಕ್ ಅಪಘಾತದಲ್ಲಿ ತೀರಿಕೊಂಡರು. ತಾಯಿ ಎಲಿಜಬೆತ್ ಕ್ರೋಯಿಸಲ್ ಎರಡನೇ ವಿವಾಹವಾದರು. ನಂತರ ಪೋಲೆಂಡ್‍ಗೆ ತೆರಳಿದರು. ಅಲ್ಲಿ ರುಡಾಲ್ಫ್ ಪೋಲೆಂಡ್ ಸಂಸ್ಕೃತಿ ಮತ್ತು ಭಾಷೆ ಕಲಿತು ಅದಕ್ಕೆ ಒಗ್ಗಿಕೊಂಡರು.


ಅವರು 1907ರಲ್ಲಿ ಪೋಲೆಂಡ್‍ನ ಲೌ ವಿಶ್ವವಿದ್ಯಾಲಯದಿಂದ ಜೈವಿಕ ವಿಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿದರು. ಮಾತ್ರವಲ್ಲ, ಪ್ರಾಣಿಶಾಸ್ತ್ರ, ತುಲನಾತ್ಮಕ ಅಂಗರಚನಾಶಾಸ್ತ್ರ, ಹಿಸ್ಟಾಲಜಿ ವಿಷಯಗಳಲ್ಲಿ ಡಾಕ್ಟರೇಟ್ ಪದವಿಗಳನ್ನು ಗಳಿಸಿದರು.


ಇದನ್ನೂ ಓದಿ:Uttar Pradesh Election: ಅಯೋಧ್ಯೆಯಿಂದ ಅಸಾದುದ್ದೀನ್ ಓವೈಸಿ ಪ್ರವಾಸ ಆರಂಭ

ಮೊದಲನೆಯ ಮಹಾಯುದ್ಧದ ಸಮಯದಲ್ಲಿ, ಟೈಫಸ್ ಎಂಬ ಸೋಂಕು ಯುರೋಪ್ ಅನ್ನು ಅಲ್ಲೋಲ ಕಲ್ಲೋಲವಾಗಿಸಿತು ಮತ್ತು ಇದರಿಂದ ಲಕ್ಷಾಂತರ ಮಂದಿ ಮೃತಪಟ್ಟರು. ವೀಗೆಲ್ ಈ ಸೋಂಕಿನ ಬಗ್ಗೆ ತಿಳಿದುಕೊಳ್ಳಲು ಮತ್ತು ರೋಗದ ಬಗ್ಗೆ ಸಂಶೋಧನೆ ಮಾಡಲು ನಿರ್ಧರಿಸಿದನು. ಸೋಂಕಿಗೆ ಕಾರಣವಾದ ಪರೋಪಜೀವಿಗಳೇ ಮೂಲ ಕಾರಣ ಎಂದು ಕಂಡುಕೊಂಡರು. ನಂತರ ಇದರ ಬಗ್ಗೆ ಸಂಶೋಧನೆ ಮುಂದುವರೆಸಿ ಪರಿಹಾರ ಕಂಡು ಹಿಡಿಯಲು ಶ್ರಮವಹಿಸಿದರು. 1933ರ ಸಮಯದಲ್ಲಿ ಈ ಲಸಿಕೆ ಕುರಿತು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ನಡೆಯಿತು.


ಈ ಸಂಶೋಧನಾ ಕಾರ್ಯವು ಅನುಕರಣೀಯವಾಗಿದ್ದರೂ, ನಾಜಿ ಘೆಟ್ಟೋಸ್‍ನಲ್ಲಿ ಸುಮಾರು 5000 ಯಹೂದಿಗಳನ್ನು ಉಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಆದ ಕಾರಣ ಅವರನ್ನು ಇತಿಹಾಸದಲ್ಲಿ ಪ್ರಮುಖ ವ್ಯಕ್ತಿ ಎಂದು ಗುರುತಿಸುವಂತೆ ಮಾಡಿತು. ಟೈಫಾಸ್ ರೋಗಕ್ಕೆ ಔಷಧಿ ಕಂಡು ಹಿಡಿದ ಮೊದಲ ವಿಜ್ಞಾನಿ ಎಂಬ ಖ್ಯಾತಿಗೆ ಭಾಜನರಾದರು. ನಾಜಿ ಜರ್ಮನಿಯು ಅವರ ಬಗ್ಗೆ ವಿಚಾರಿಸಿ ಟೈಫಸ್ ಲಸಿಕೆ ತಯಾರಿಕಾ ಘಟಕವನ್ನು ರಚಿಸಲು ವೀಗಲ್‌ರನ್ನು ಕೇಳಿದರು. ಅದಕ್ಕಾಗಿ, ಆತ ತನ್ನ ಅನೇಕ ಯಹೂದಿ ಸಹೋದ್ಯೋಗಿಗಳು ಮತ್ತು ಸ್ನೇಹಿತರನ್ನು ನೇಮಿಸಿಕೊಂಡಿದ್ದರಿಂದ ಅವರನ್ನು ಸೆರೆಶಿಬಿರಗಳಿಗೆ ಗಡಿಪಾರು ಮಾಡಬಾರದು ಎಂದು ಹೇಳಿದರು. ಅಲ್ಲದೆ, ಆಗ ಅವರು ಲಸಿಕೆಗಳನ್ನು ಕಾನ್ಸಂಟ್ರೇಶನ್ ಕ್ಯಾಂಪ್‍ಗಳಿಗೆ ಕಳ್ಳಸಾಗಣೆ ಮಾಡುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ:Viral News: ಅಪರೂಪದ ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ..!

ಲಸಿಕೆ ಕಂಡು ಹಿಡಿದ ಕಾರಣ ಹಾಗೂ ಆತನ ಮಾನವೀಯ ಕಾರ್ಯಗಳಿಂದಾಗಿ ಎರಡು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ ಕೆಲವರ ಹಸ್ತಕ್ಷೇಪ ಮತ್ತು ಕುತಂತ್ರದಿಂದ ಎರಡೂ ಬಾರಿ ನೊಬೆಲ್ ಪ್ರಶಸ್ತಿ ಕೈ ತಪ್ಪಿ ಹೋಯಿತು. ಇವರು 1957ರ ಆಗಸ್ಟ್‌ನಲ್ಲಿ ಕೊನೆಯುಸಿರೆಳೆದರು. ನಂತರ 2003ರಲ್ಲಿ ಇಸ್ರೇಲ್ ರುಡಾಲ್ಫ್‌ರಿಗೆ 'ರಾಷ್ಟ್ರಗಳಲ್ಲಿ ನೀತಿವಂತ' ಎಂಬ ಬಿರುದು ನೀಡಿ ಗೌರವಿಸಿತು.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Latha CG
First published: