Sir John Tenniel: ಬ್ರಿಟನ್ ವ್ಯಂಗ್ಯಚಿತ್ರಕಾರ ಜಾನ್ ಟೆನ್ನಿಯಲ್​ಗೆ ಗೂಗಲ್ ಗೌರವ

Sir John Tenniel's 200th Birthday | Google Doodle: ಬ್ರಿಷನ್​ನ ಐತಿಹಾಸಿಕ ಮ್ಯಾಗಜಿನ್ ಪಂಚ್​ಗೆ ವ್ಯಂಗ್ಯಚಿತ್ರಕಾರರಾಗಿ ನೇಮಕಗೊಂಡ ಟೆನ್ನಿಯಲ್ ಅಲ್ಲಿನ ರಾಜಕಾರಣವನ್ನು ಗೆರೆಗಳ ಮೂಲಕ ಅದ್ಭುತವಾಗಿ ಕಟ್ಟಿಕೊಡುತ್ತಿದ್ದರು.

ಬ್ರಿಟನ್ ವ್ಯಂಗ್ಯಚಿತ್ರಕಾರ ಜಾನ್ ಟೆನ್ನಿಯಲ್

ಬ್ರಿಟನ್ ವ್ಯಂಗ್ಯಚಿತ್ರಕಾರ ಜಾನ್ ಟೆನ್ನಿಯಲ್

 • Share this:
  ಖ್ಯಾತ ಬ್ರಿಟಿಷನ್​ ಇಲ್ಲಸ್ಟ್ರೇಟರ್​ ಮತ್ತು ಕಲಾವಿದ ಸರ್ ಜಾನ್​ ಟೆನ್ನಿಯಲ್ ಅವರ 200ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್​ ಮೂಲಕ ಗೌರವ ಸಲ್ಲಿಸಿದೆ. ಟೆನ್ನಿಯಲ್ ಇಂಗ್ಲೆಂಡ್​ನ ಬಹಳ ಪ್ರಸಿದ್ಧ ವಿಕ್ಟೋರಿಯನ್ ಇಲ್ಲಸ್ಟ್ರೇಟರ್ ಹಾಗೂ ಪೇಂಟರ್ ಆಗಿದ್ದವರು. ದಿನನಿತ್ಯದ ನಡೆಯುವ ವಿಷಯಗಳಿಗೆ ಹಾಗೂ ಬ್ರಿಟನ್​ನ ಪಾತ್ರಗಳಿಗೆ ವ್ಯಂಗ್ಯಚಿತ್ರ ಹಾಗೂ ಬಣ್ಣಗಳ ಮೂಲಕ ಜೀವ ತುಂಬುತ್ತಿದ್ದ ಜಾನ್ ಟೆನ್ನಿಯಲ್ ಅವರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

  1820ರಲ್ಲಿ ಫೆ. 28ರಂದು ಲಂಡನ್​ನಲ್ಲಿ ಹುಟ್ಟಿದ ಟೆನ್ನಿಯಲ್ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರ ಕಲಾವಿದರಾಗಿ ಹೆಸರು ಮಾಡಿದ್ದರು. ತಮ್ಮ 16ನೇ ವಯಸ್ಸಿನಲ್ಲಿ ಅವರು ಚಿತ್ರ ಪ್ರದರ್ಶನಕ್ಕಾಗಿ ನೀಡಿದ್ದ ಆಯಿಲ್ ಪೇಂಟಿಂಗ್ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ, ಅದೇ ಚಿತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತು. 1850ರಲ್ಲಿ ಇಲ್ಲಸ್ಟ್ರೇಷನ್​ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಟೆನ್ನಿಯಲ್, ನಂತರ ರಾಜಕೀಯ ವ್ಯಂಗ್ಯಚಿತ್ರಕಾರನಾಗಿ ಬಹಳ ಪ್ರಸಿದ್ಧಿ ಪಡೆದರು.

  ಇದನ್ನೂ ಓದಿ: ದೆಹಲಿ ಹಿಂಸಾಚಾರ; ಸಾವಿನ ಸಂಖ್ಯೆ 38ಕ್ಕೆ ಏರಿಕೆ; ವಿಚಾರಣೆಗಾಗಿ 514 ಜನ ಪೊಲೀಸ್ ವಶಕ್ಕೆ

  ಬ್ರಿಷನ್​ನ ಐತಿಹಾಸಿಕ ಮ್ಯಾಗಜಿನ್ ಪಂಚ್​ಗೆ ವ್ಯಂಗ್ಯಚಿತ್ರಕಾರರಾಗಿ ನೇಮಕಗೊಂಡ ಟೆನ್ನಿಯಲ್ ಅಲ್ಲಿನ ರಾಜಕಾರಣವನ್ನು ಗೆರೆಗಳ ಮೂಲಕ ಅದ್ಭುತವಾಗಿ ಕಟ್ಟಿಕೊಡುತ್ತಿದ್ದರು. ಅವರು ರಚಿಸಿದ ವ್ಯಂಗ್ಯಚಿತ್ರಗಳ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ವಿಶ್ವದ ಟಾಪ್​ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡ ಟೆನ್ನಿಯಲ್ ನಂತರ ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದರು. ಮಕ್ಕಳು, ವಯಸ್ಕರು, ವೃದ್ಧರು ಎಂಬ ಭೇದವಿಲ್ಲದೆ ಎಲ್ಲ ವರ್ಗದವರಿಗೂ ಟೆನ್ನಿಯಲ್ ಅವರ ಇಲ್ಲಸ್ಟ್ರೇಷನ್​ ಇಷ್ಟವಾಗುತ್ತಿತ್ತು.

   
  First published: