Google For India 2020: ಭಾರತದ ಡಿಜಿಟಲೀಕರಣಕ್ಕೆ ಕೈಜೋಡಿಸಿದ ಗೂಗಲ್: 75 ಸಾವಿರ ಕೋಟಿ ರೂ. ಹೂಡಿಕೆ
Google Announcement: ಭಾರತದ ಡಿಜಿಟಲ್ ಯೋಜನೆಗೆ ಕೈಜೋಡಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾವು ಎಲ್ಲಾ ವಲಯಗಳಲ್ಲೂ ಸಮಾನ ಹೂಡಿಕೆ ಮಾಡಲು ಚಿಂತಿಸಿದ್ದೇವೆ. ಎಕೊಸಿಸ್ಟಮ್, ಪಾರ್ಟ್ನರ್ಶಿಪ್, ಇನ್ಫ್ರಾಸ್ಟ್ರಕ್ಚರ್ ಒತ್ತು ನೀಡಲಿದ್ದೇವೆ ಎಂದು ಸುಂದರ್ ಪಿಚೈ.
ನವದೆಹಲಿ(ಜು.13): ಭಾರತ ಡಿಜಿಟಲ್ ಕ್ರಾಂತಿಯತ್ತ ಹೆಜ್ಜೆ ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಂತೂ ಎಲ್ಲವನ್ನು ಡಿಜಿಟಲ್ ಮಾಡಲು ಭಾರೀ ಉತ್ಸುಕತೆ ತೋರುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ವಹಿವಾಟುಗಳು ಡಿಜಿಟಲ್ ಮೋಡ್ನಲ್ಲಿಯೇ ನಡೆಯಬೇಕು ಎನ್ನುವುದು ಕೇಂದ್ರದ ಉದ್ದೇಶ. ನೋಟ್ ಬ್ಯಾನ್ ಬಳಿಕ ಭಾರತೀಯರು ಕೂಡ ಡಿಜಿಟಲ್ ಪೇಮೆಂಟ್ ಅನ್ನೇ ಬಳಕೆ ಮಾಡಲು ಶುರು ಮಾಡಿದರು. ಇದಕ್ಕೆ ವ್ಯಾಪರಸ್ಥರು ಸಹಕಾರ ನೀಡಿದರು. ಹೀಗಿರುವಾಗಲೇ ಭಾರತ ಡಿಜಟಲೀಕರಣಕ್ಕೆ ಹೂಡಿಕೆ ಮಾಡಲು ಗೂಗಲ್ ಕಂಪನಿ ಮುಂದಾಗಿದೆ.
ಮುಂದಿನ 5-7 ವರ್ಷಗಳಲ್ಲಿ ಭಾರತದಲ್ಲಿ ನಾವು 75 ಸಾವಿರ ಕೋಟಿ ರೂ. ಅಂದರೆ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಗೂಗಲ್ ಸಂಸ್ಥೆಯ ಮುಖ್ಯಸ್ಥ ಸಿಇಓ ಸುಂದರ್ ಪಿಚೈ ಘೋಷಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಎಲ್ಲಾ ಡಿಜಿಟಲ್ ಮಾಡಲು ನೆರವಾಗುತ್ತಿದ್ಧಾರೆ.
ಭಾರತದ ಡಿಜಿಟಲ್ ಯೋಜನೆಗೆ ಕೈಜೋಡಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾವು ಎಲ್ಲಾ ವಲಯಗಳಲ್ಲೂ ಸಮಾನ ಹೂಡಿಕೆ ಮಾಡಲು ಚಿಂತಿಸಿದ್ದೇವೆ. ಎಕೊಸಿಸ್ಟಮ್, ಪಾರ್ಟ್ನರ್ಶಿಪ್, ಇನ್ಫ್ರಾಸ್ಟ್ರಕ್ಚರ್ ಒತ್ತು ನೀಡಲಿದ್ದೇವೆ ಎಂದು ಸುಂದರ್ ಪಿಚೈ.
ಗೂಗಲ್ ಹೂಡಿಕೆ ಪ್ರಮುಖವಾಗಿ ಭಾರತದ ಡಿಜಿಟಲೀಕರಣಕ್ಕೆ ಒತ್ತು ನೀಡಲಿದೆ. ಮೊದಲಿಗೆ ನಮ್ಮ ಯೋಜನೆ ಬಗ್ಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಮಾತೃಭಾಷೆಯಲ್ಲೇ ಮಾಹಿತಿ ಸಂಪೂರ್ಣ ಒದಗಿಸಲಿದ್ದೇವೆ. ಹಿಂದಿ, ತಮಿಳು, ಪಂಜಾಬಿ, ಕನ್ನಡ ಎಲ್ಲಾ ಭಾಷೆಯಲ್ಲೂ ಈ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಂತರ ಭಾರತೀಯರಿಗೆ ಅಗತ್ಯವಿರುವ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸಲಿದ್ದೇವೆ ಎಂದು ಸುಂದರ್ ಪಿಚೈ ಹೇಳಿದರು.
ಭಾರತದ ಡಿಜಿಟಲೀಕರಣದ ನಂತರ ಆರೋಗ್ಯ, ಶಿಕ್ಷಣ, ಕೃಷಿಯಲ್ಲಿ ಹೂಡಿಕೆ ಮಾಡಲಿದ್ದೇವೆ. ಭಾರತೀಯ ಉದ್ಯಮ ಕ್ಷೇತ್ರದೊಂದಿಗೆ ಸಾಮಾಜಿಕ ಸೇವೆಗೂ ಆದ್ಯತೆ ನೀಡಲಿದ್ದೇವೆ ಎಂದು ಭರವಸೆ ನೀಡಿದರು ಸುಂದರ್ ಪಿಚೈ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ