Google, FB, WhatsApp: ಹೊಸ ನಿಯಮಗಳಿಗೆ ಜೈ ಎಂದ ವಾಟ್ಸ್ಯಾಪ್, ಫೇಸ್ಬುಕ್, ಗೂಗಲ್; ಟ್ವಿಟರ್ ಮಾತ್ರ ಇನ್ನೂ ಒಪ್ಪಿಲ್ಲ

ಟ್ವಿಟ್ಟರ್​ ಇನ್ನೂ ಸಹ ಮುಖ್ಯ ಅನುಸರಣೆ ಅಧಿಕಾರಿಯ(chief compliance officer) ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ.

ಟ್ವಿಟರ್

ಟ್ವಿಟರ್

 • Share this:
  ನವದೆಹಲಿ(ಮೇ 29): ಸೋಷಿಯಲ್ ಮೀಡಿಯಾಗಳಾದ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್​​ಆಪ್​, ಗೂಗಲ್​ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಿಲ್ಲವೆಂದು ಭಾರತದಲ್ಲಿ ಇವು ಬ್ಯಾನ್ ಆಗಲಿವೆ ಎನ್ನಲಾಗಿತ್ತು. ಆದರೆ ಈಗ ಗೂಗಲ್, ಫೇಸ್​ಬುಕ್ ಮತ್ತು ವಾಟ್ಸ್ಯಾಪ್​ನಂತಹ ಬೃಹತ್​ ಸಾಮಾಜಿಕ ಮಾಧ್ಯಮ ಕಂಪನಿಗಳು ಹೊಸ ಡಿಜಿಟಲ್​​ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿದ್ದು, ಐಟಿ ಸಚಿವಾಲಯದ ಜೊತೆ ಮಾಹಿತಿ ಹಂಚಿಕೊಂಡಿವೆ. ಆದರೆ ಟ್ವಿಟ್ಟರ್​ ಇನ್ನೂ ಸಹ ಹೊಸ ನಿಯಮಗಳನ್ನು ಪಾಲಿಸಲು ಒಪ್ಪಿಗೆ ನೀಡಿಲ್ಲ. ಜೊತೆಗೆ ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ಪಿಟಿಐ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

  ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಕೂ, ಶೇರ್‌ಚಾಟ್, ಟೆಲಿಗ್ರಾಮ್ ಮತ್ತು ಲಿಂಕ್ಡ್‌ಇನ್ ಸೇರಿದಂತೆ ಮಹತ್ವದ ಸಾಮಾಜಿಕ ಮಾಧ್ಯಮ ಕಂಪನಿಗಳು ಈ ವಾರದ ಆರಂಭದಲ್ಲಿ ಜಾರಿಗೆ ಬಂದ ಐಟಿ ಮಾನದಂಡಗಳ ಅಗತ್ಯಕ್ಕೆ ಅನುಗುಣವಾಗಿ ವಿವರಗಳನ್ನು ಸಚಿವಾಲಯದೊಂದಿಗೆ ಹಂಚಿಕೊಂಡಿವೆ. ಆದರೆ, ಟ್ವಿಟರ್ ಇನ್ನೂ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

  ಟ್ವಿಟ್ಟರ್​ ಇನ್ನೂ ಸಹ ಮುಖ್ಯ ಅನುಸರಣೆ ಅಧಿಕಾರಿಯ(chief compliance officer) ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ. ಕಾನೂನು ಸಂಸ್ಥೆಯಲ್ಲಿ ನೋಡಲ್​ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುವ ವಕೀಲರೊಬ್ಬರ ಮತ್ತು ಕೊಂದುಕೊರತೆ ಅಧಿಕಾರಿಯ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

  ಇದನ್ನೂ ಓದಿ:ಯಡಿಯೂರಪ್ಪ ಸಿಎಂ ಆಗಿ ಸಂಪೂರ್ಣ ವಿಫಲ, ಸಮರ್ಥ ನಾಯಕರಿಲ್ಲದ ಕಾರಣ ಮುಂದುವರಿಕೆ; ಸಿದ್ಧರಾಮಯ್ಯ

  ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 25 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿ) ಹೊಸ ಐಟಿ ನಿಯಮಗಳನ್ನು ಪಾಲಿಸಲು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೂರು ತಿಂಗಳ ಗಡುವನ್ನು ನೀಡಿತ್ತು. ಈ ನಿಯಮಗಳಲ್ಲಿ ಅನುಸರಣೆ ಅಧಿಕಾರಿಗಳ ನೇಮಕ, ಭಾರತದಲ್ಲಿ ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದು ಸೇರಿವೆ. ಇಲ್ಲಿಯವರೆಗೆ, ಒಬ್ಬರನ್ನು ಹೊರತುಪಡಿಸಿ ಯಾವುದೇ ಕಂಪನಿಯು ಅಂತಹ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ವರದಿಯಾಗಿದೆ.

  ಭಾರತೀಯ ಸಂಸ್ಥೆ 'ಕೂ' ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು (50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲವೆಂದು ಮೂಲಗಳು ತಿಳಿಸಿದೆ.

  ಗುರುವಾರ ಕೇಂದ್ರ ಸರ್ಕಾರದ ಬಲವಾದ ಪ್ರತಿಕ್ರಿಯೆಯ ನಂತರ, ಟ್ವಿಟ್ಟರ್​ ಭಾರತದ ಕಾನೂನು ಸಂಸ್ಥೆಯಲ್ಲಿ ನೋಡಲ್​ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುವ ವಕೀಲರೊಬ್ಬರ ಮತ್ತು ಕೊಂದುಕೊರತೆ ಅಧಿಕಾರಿಯ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

  ಹೊಸ ಕಾನೂನು ಪ್ರಕಾರ, ಮೇಲುಸ್ತುವಾರಿ ಸಮಿತಿಯಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದಸ್ಯರಿರುತ್ತಾರೆ. ಯಾವುದಾದರೂ ಕಂಪೆನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡು, ವಿಚಾರಣೆ ನಡೆಸಬಹುದು.

  ಸರ್ಕಾರದಿಂದ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ನೇಮಕ ಮಾಡುತ್ತದೆ. ಅವರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ. ಮೇಲ್ಮನವಿ ಸಮಿತಿಗೆ ಯಾವುದೇ ಸೋಷಿಯಲ್ ಮೀಡಿಯಾ ಕಂಪೆನಿಯು ಮಾಹಿತಿ ವಿಚಾರದಲ್ಲಿ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಸರ್ಕಾರದ ನಿಯಂತ್ರಣದಲ್ಲಿರುವ ಸಮಿತಿಗೆ ಕೇಳಬಹುದು.

  ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಅನುಷ್ಠಾನವಿಲ್ಲದೆ, ಯಾವುದೇ ತಪಾಸಣೆ ಮತ್ತು ಬಾಕಿ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ನಿಯಮಗಳು ಪ್ರಮುಖ ಸಮಸ್ಯೆಗಳನ್ನು ಬರಗೆಹರಿಸಿದ್ದರೂ ನೀತಿ ಸುರಕ್ಷತೆಗಳಿಲ್ಲದೆ ನಾಗರಿಕರ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಅವರು ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣ ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.
  Published by:Latha CG
  First published: