‘ಭಾರತದ ಸ್ಯಾಟಲೈಟ್​ ಮ್ಯಾನ್​‘​ ಉಡುಪಿ ರಾಮಚಂದ್ರ ರಾವ್​ ಜನ್ಮದಿನವನ್ನು ಸ್ಮರಿಸಿದ ಗೂಗಲ್​ ಡೂಡಲ್​

Udupi Ramachandra Rao: ರಾಮಚಂದ್ರ ರಾವ್ ಅವರು ಇಸ್ರೋದ ಮುಖ್ಯಸ್ಥರಾಗಿದ್ದರು. 1975ರಲ್ಲಿ ಭಾರತದ ಮೊದಲ ಉಪಗ್ರಹ​​ ಆರ್ಯಭಟ ಉಡಾವಣೆಯ ನೇತೃತ್ವ ವಹಿಸಿದ್ದರು.

ಉಡುಪಿ ರಾಮಚಂದ್ರ ರಾವ್​

ಉಡುಪಿ ರಾಮಚಂದ್ರ ರಾವ್​

 • News18
 • Last Updated :
 • Share this:
  ಗೂಗಲ್​ ವಿಶೇಷ ದಿನವನ್ನು ತನ್ನ ಡೂಡಲ್​ ಮೂಲಕ ವಿಭಿನ್ನವಾಗಿ ಸ್ಮರಿಸುತ್ತದೆ. ಅದರಂತೆ ಇಂದು ಭಾರತದ ಸ್ಯಾಟಲೈಟ್​ ಮ್ಯಾನ್​ ಪ್ರೊಫೆಸರ್​​, ವಿಜ್ಞಾನಿ ಉಡುಪಿ ರಾಮಚಂದ್ರ ರಾವ್​​​ ಅವರ ಜನ್ನದಿನ. ಈ ದಿನವನ್ನು ಗೂಗಲ್​ ಡೂಡಲ್​​ ಸ್ಮರಿಸಿದೆ.

  ರಾಮಚಂದ್ರ ರಾವ್ ಅವರು ಇಸ್ರೋದ ಮುಖ್ಯಸ್ಥರಾಗಿದ್ದರು. 1975ರಲ್ಲಿ ಭಾರತದ ಮೊದಲ ಉಪಗ್ರಹ​​ ಆರ್ಯಭಟ ಉಡಾವಣೆಯ ನೇತೃತ್ವ ವಹಿಸಿದ್ದರು. ಹಾಗಾಗಿ ಗೂಗಲ್​ ಡೂಡಲ್​ನಲ್ಲಿ ಅವರ ಫೋಟೋದ ಜೊತೆಗೆ ಭೂಮಿಯ ಚಿತ್ರವಿರುವ ಡೂಡಲ್​ ಅನ್ನು ರಚಿಸುವ ಮೂಲಕ ಅವರ ಜನ್ಮದಿನವನ್ನು ಸ್ಮರಿಸಿದೆ.

  ರಾಮಚಂದ್ರ ರಾವ್ ಅವರು 1932ರಲ್ಲಿ ಉಡುಪಿಯ ಹಳ್ಳಿಯೊಂದರಲ್ಲಿ ಜನಿಸಿದರು. ಭೌತಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ನಂತರ ಅಮೆರಿಕದಲ್ಲಿ ಪ್ರೊಪೆಸರ್​ ಆಗಿ ದುಡಿದರು. ಬಳಿಕ ನಾಸಾ ಬಾಹ್ಯಾಕಾಶ ಶೋಧಕಗಳಲ್ಲಿ ಪ್ರಯೋಗ ಮಾಡಿದರು.

  1966ರಲ್ಲಿ ಭಾರತಕ್ಕೆ ಮರಳಿದ ಅವರು ದೇಶದ ಉಪ್ರಗಹ 1972ರಲ್ಲಿ  ಭಾರತದ ಪ್ರಮುಖ ಬಾಹ್ಯಕಾಶ ವಿಜ್ಞಾನ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಮಗ್ರ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

  ಪ್ರೊ, ರಾವ್​ ಸುಮಾರು 20ಕ್ಕೂ ಹೆಚ್ಚು ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. 1994ರಲ್ಲಿ ಭಾರತ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರು ಆಗಿದ್ದರು.2013ರಲ್ಲಿ ಸ್ಯಾಟಲೈಟ್​​ ಹಾಲ್​ ಆಫ್​ ಪ್ರೇಮ್​ಗೆ ಸೇರ್ಪಡೆಯಾದ ಮೊದಲ ಭಾರತೀಯ ಹೆಗ್ಗಳಿಕೆ ಇವರ ಮೇಲಿದೆ.

  2017ರ ಜುಲೈ 21ರಂದು ರಾಮಚಂದ್ರ ರಾವ್​ ಸಾವನ್ನಪ್ಪುತ್ತಾರೆ. ಇವರ ಸಾಧನೆಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.
  Published by:Harshith AS
  First published: