Anna Mani Birth Anniversary: ಭಾರತದ ಮೊದಲ ಮಹಿಳಾ ವಿಜ್ಞಾನಿ ಅನ್ನಾ ಮಣಿ 104ನೇ ಜನ್ಮದಿನ; ವಿಶೇಷ ಡೂಡಲ್‌ ರಚಿಸಿ, ಸ್ಮರಿಸಿದ ಗೂಗಲ್

ಅನ್ನಾ ಮೊಡಾಯಿಲ್​ ಮಣಿ ಅವರು 1918ರಲ್ಲಿ ಜನಿಸಿದರು. ಇವರು ಕೇರಳ ಮೂಲದವರು. ಭೌತಶಾಸ್ತ್ರಜ್ಞ ಮತ್ತು ಹವಾಮಾನಶಾಸ್ತ್ರಜ್ಞ. ಅಷ್ಟು ಮಾತ್ರವಲ್ಲದೆ, ಅನ್ನಾ ಮಣಿ ಭಾರತೀಯ ಹವಾಮಾನ ಇಲಾಖೆಯಲ್ಲಿ ಮಾಜಿ ಉಪ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅನ್ನಾ ಮಣಿ

ಅನ್ನಾ ಮಣಿ

  • Share this:
    ಗೂಗಲ್​ (Goofle) ವಿಶ್ವಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುತ್ತಾ ಬಂದಿದೆ. ತನ್ನ ಡೂಡಲ್​​ (Doodle) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸುವ ಮೂಲಕ ಅವರನ್ನು ಸ್ಮರಿಸುತ್ತದೆ. ಅದರಂತೆಯೇ ಇಂದು ಭಾರತದ ಮೊದಲ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾದ ಅನ್ನಾ ಮಣಿ (Anna Mani) ಅವರ ಜನ್ಮ ವಾಷ್ಟಿಕೋತ್ಸವವನ್ನು (Birth Anniversary) ಸ್ಮರಿಸಿದೆ. 104ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗೂಗಲ್ ವಿಶೇಷ ಡೂಡಲ್​ ಸಿದ್ಧಪಡಿಸಿ ಗೌರವ ಸಲ್ಲಿಸಿದೆ.

    ಅನ್ನಾ ಮೊಡಾಯಿಲ್​ ಮಣಿ ಅವರು 1918ರಲ್ಲಿ ಜನಿಸಿದರು. ಇವರು ಕೇರಳ ಮೂಲದವರು. ಭೌತಶಾಸ್ತ್ರಜ್ಞ ಮತ್ತು ಹವಾಮಾನಶಾಸ್ತ್ರಜ್ಞ. ಅಷ್ಟು ಮಾತ್ರವಲ್ಲದೆ, ಅನ್ನಾ ಮಣಿ ಭಾರತೀಯ ಹವಾಮಾನ ಇಲಾಖೆಯಲ್ಲಿ ಮಾಜಿ ಉಪ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅನ್ನಾ ಅದರಲ್ಲೇ ಮುಂದುವರಿಯಲು ನಿರ್ಧರಿಸಿದರು. ಕಿರಿಯ ವಯಸ್ಸಿನಿಂದಲೇ ಭೌತಶಾಸ್ತ್ರ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದರು. ಇದೇ ಆಸಕ್ತಿ ವಿಚಾರವನ್ನಾಗಿ ಇಟ್ಟುಕೊಂಡು ಅವರು ಚೆನ್ನೈನಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು. ಬಳಿಕ ಪದವಿ ಪಡೆದರು.

    ನೊಬೆಲ್​ ಪ್ರಶಸ್ತಿ ವಿಜೇತ ಪ್ರೊಫೆಸರ್​  ಸಿವಿ ರಾಮನ್​​ ಅವರೊಂದಿಗೆ ಅನ್ನಾ ಮಣಿ ಕೆಲಸ ಮಾಡಿದ್ದಾರೆ. ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್​ ಗುಣಲಕ್ಷದ ಬಗ್ಗೆ ಸಂಶೋಧನೆ ನಡೆಸಿದ್ದರು. ಸದಾ ಕೆಲಸದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದ ಅವರು ಲೌಕಿಕ ಜೀವನಕ್ಕೆ ಅಷ್ಟೇನು ಪ್ರಾಮುಖ್ಯತೆ ನೀಡುತ್ತಿರಲಿಲ್ಲ.

    ಇದನ್ನೂ ಓದಿ: NHAI ಪರಿಚಯಿಸುತ್ತಿದೆ ಹೊಸ ಆ್ಯಪ್​! ಹೆದ್ದಾರಿಯಲ್ಲಿ ಹೊಂಡ, ಗುಂಡಿ ಕಂಡು ಬಂದ್ರೆ ಇಲ್ಲಿ ದೂರು ನೀಡಿ





    1940ರಲ್ಲಿ ಸಂಶೋಧನೆ ನಡೆಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ತೆರಳಿ ಅಭ್ಯಾಸ ಮಾಡುತ್ತಿದ್ದರು. ಹೀಗೆ ಅನ್ನಾ ಮಣಿ ಅವರಿಗೆ ಹವಾಮಾನಶಾಸ್ತ್ರವು ಅದರತ್ತ ಸೆಳೆಯುವಂತೆ ಮಾಡಿತು. 1945ರಲ್ಲಿ ಲಂಡನ್​ ಕಾಲೇಜಿಗೆ ತೆರಳಿದರು. ಬಳಿಕ ಅಲ್ಲಿ ಅನ್ನಾ ಹವಾಮಾನ ಉಪಕರಣಗಳಲ್ಲಿ ಪರಿಣತಿಯನ್ನು ಪಡೆದರು.

    ಅಚ್ಚರಿಯ ಸಂಗತಿ ಎಂದರೆ ಅನ್ನಾ ಮಣಿಯವರು ಮಹಾತ್ಮ ಗಾಂಧಿಯವರ ತತ್ವದಿಂದ ಸ್ಫೂರ್ತಿ ಪಡೆದವರು. ಅವರ ರಾಷ್ಟ್ರೀಯ ಚಳುವಳಿಯಿಂದ ಪ್ರೇರಿತರಾದರು. ಬಳಿಕ ಖಾದಿ ಬಟ್ಟೆಯನ್ನು ಮಾತ್ರ ಧರಿಸುತ್ತಿದ್ದರು.





    ಇದನ್ನೂ ಓದಿ: Doogee S89: ತ್ರಿವಳಿ ಕ್ಯಾಮೆರಾ, 12 ಸಾವಿರ mAh ಬ್ಯಾಟರಿ; ನೀರಿಗೆ ಬಿದ್ದರೂ ಹಾಳಾಗುವುದಿಲ್ಲ ಈ ಸ್ಮಾರ್ಟ್​ಫೋನ್​!

    ಅನ್ನಾ ಮಣಿ ಅವರ ಹೆಚ್ಚಿನ ಜ್ಞಾನವುಳ್ಳವರಾಗಿದ್ದರು. ಲೈಬ್ರರಿಯಲ್ಲಿ ಓಡುತ್ತಾ, ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಿತ್ತಿದ್ದರು. ರಾಕೆಟ್​ ಉಡಾವಣೆಯ ಸಮಯದಲ್ಲಿ ಹವಾಮಾನ ವೀಕ್ಷಣಾಲಯ ಮತ್ತು ಸಲಕರಣೆ ಗೋಪುರಗಳ ಸಂಶೋಧನೆ ಮಾಡಿದ್ದಾರೆ. ಅಷ್ಟೇ ಏಕೆ, ಅಂತರಾಷ್ಟ್ರೀಯ ಓಜೋನ್​ ಅಸೋಸಿಯೇಷನ್​​ ಸದಸ್ಯರೂ ಆಗಿದ್ದರು.



    ಭಾರತೀಯ ಹವಾಮಾನಶಾಸ್ತ್ರಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಅನ್ನಾ ಮಣಿಯವರನ್ನು ಮತ್ತು ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಅವರ ಜನ್ಮ ವಾರ್ಷಿಕೋತ್ಸವವನ್ನು ಗೂಗಲ್​ ವಿಶೇಷ ಡೂಡಲಗ್​​ ಸಿದ್ಧಪಡಿಸಿಕೊಂಡು ಸ್ಮರಿಸಿದೆ.
    Published by:Harshith AS
    First published: