Sundar Pichai: ಲಂಡನ್​​ನಲ್ಲಿ ಹೊಸ ಗೂಗಲ್ ಆಫೀಸ್, ಫೋಟೋ ಶೇರ್ ಮಾಡಿದ CEO ಸುಂದರ್ ಪಿಚೈ

ಗೂಗಲ್ CEO ಸುಂದರ್ ಪಿಚೈ ಲಂಡನ್ ನಲ್ಲಿರೋ ನೂತನ ಕಚೇರಿಯ ಫೋಟೋಗಳನ್ನ Instagram ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕಚೇರಿಯಲ್ಲಿ 10 ಸಾವಿರ ಉದ್ಯೋಗಿಗಳು ಕೆಲಸ ಮಾಡಬಹುದಾಗಿದೆ. 

ಗೂಗಲ್ ಕಚೇರಿ

ಗೂಗಲ್ ಕಚೇರಿ

  • Share this:
ಸಿಲಿಕಾನ್ ವ್ಯಾಲಿ ದೈತ್ಯ ಗೂಗಲ್(Google) ಲಂಡನ್ ನಲ್ಲಿ ಹೊಸ ಕಚೇರಿ ಖರೀದಿಸಿದೆ ಎಂದು ಸಿಇಒ ಸುಂದರ್ ಪಿಚೈ(Sundar Pichai) ಹೇಳಿದ್ದಾರೆ. ಸೆಂಟ್ರಲ್ ಸೇಂಟ್ ಗೈಲ್ಸ್ (Central Saint Giles)ನಲ್ಲಿ 1 ಬಿಲಿಯನ್ ಡಾಲರ್ ಮೊತ್ತಕ್ಕೆ ನೂತನ ಕಚೇರಿ (New office)ಯನ್ನು ಖರೀದಿಸಿದೆ. ಶುಕ್ರವಾರ ಸುಂದರ್ ಪಿಚೈ ಹೊಸ ಕಚೇರಿಯ ಒಪ್ಪಂದದ ಕುರಿತು ಪ್ರಕಟಣೆ ಮಾಡಿದ್ದು, ಕಚೇರಿಯ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಲಂಡನ್ ನ ಗೂಗಲ್ ಉದ್ಯೋಗಿಗಳು ನೂತನ ಕಚೇರಿಗೆ ತೆರಳಲಿದ್ದಾರೆ. 10 ಸಾವಿರ ಉದ್ಯೋಗಿಗಳು ಕೆಲಸ ಮಾಡುವ ಸಾಮರ್ಥ್ಯವನ್ನು ಈ ಕಚೇರಿ ಹೊಂದಿದ್ದು, ಕಲರ್ ಫುಲ್ (Color full) ಆಗಿ ಕಚೇರಿಯನ್ನು ವಿನ್ಯಾಸಗೊಳಿಸಲಾಗಿದೆ.

ಲಂಡನ್ ನ ಮಧ್ಯಭಾಗದಲ್ಲಿರುವ ಸೆಂಟ್ರಲ್ ಸೇಂಟ್ ಗೈಲ್ಸ್ ನಲ್ಲಿ ಗೂಗಲ್ ಖರೀದಿಸಿರೋ ಜಾಗ 408,000 ಚದರ ಅಡಿಗಳಲ್ಲಿ ಹರಡಿದೆ. ಪ್ರಸ್ತುತ ಲಂಡನ್ ನಲ್ಲಿರೋ ಗೂಗಲ್ ಆಫೀಸ್ ನಲ್ಲಿ 7 ಸಾವಿರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಕಳೆದ ವರ್ಷ 700 ಹೆಚ್ಚುವರಿ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ.

ಹೊಸ ಆಫೀಸ್ ಹೇಗಿದೆ?

ಸೇಂಟ್ ಗೈಲ್ಸ್ ನ ಗೂಗಲ್ ಹೊಸ ಕಚೇರಿಯನ್ನು ವರ್ಣರಂಜಿತವಾಗಿ ಅಭಿವೃದ್ಧಿ ಮಾಡಲಾಗಿದ್ದು , ಕಟ್ಟಡವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಕಟ್ಟಡದ ಹೊರಭಾಗಗಳು ಹಳದಿ, ಕಿತ್ತಳೆ, ಕೆಂಪು ಹಾಗೂ ಹಸಿರು ಬಣ್ಣದಲ್ಲಿ ಕಂಗೋಳಿಸುತ್ತಿದೆ. ಗೂಗಲ್ ನೂತನ ಕಚೇರಿಯ ಫೋಟೋ ಹಂಚಿಕೊಂಡಿರೋ ಸುಂದರ್ ಪಿಚೈ, ‘ನಾವು ಲಂಡನ್ ನಲ್ಲಿ ಸೆಂಟ್ರಲ್ ಸೇಂಟ್ ಗೈಲ್ಸ್ ಕಚೇರಿ ಖರೀದಿಸಿದ್ದು, ಹೆಚ್ಚು ಫ್ಲೆಕ್ಸಿಬಲ್ (Flexible) ಆಗಿರೋ ಭವಿಷ್ಯದ ಕೆಲಸದ ಸ್ಥಳ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Coronavirus: ದೆಹಲಿ, ಮುಂಬೈನಲ್ಲಿ ಕೊರೋನಾ ಇಳಿಮುಖ, ಕುಸಿಯುತ್ತಿದೆಯಾ ಕೋವಿಡ್ ಟೆಸ್ಟ್ ಪ್ರಮಾಣ?

ಈ ವರ್ಷದೊಳಗೆ ಮತ್ತೊಂದು ಕಟ್ಟಡ ಪೂರ್ಣ

ಕೊರೋನಾ ವೈರಸ್ ಹರಡುವಿಕೆ ಹೆಚ್ಚಿದ ಹಿನ್ನೆಲೆ ಮನೆಯಿಂದಲೇ ಕೆಲಸ(Work form Home) ಮಾಡುತ್ತಿರುವ ತನ್ನ ಉದ್ಯೋಗಿಗಳನ್ನು ಕಚೇರಿಗೆ ಕರೆತರಲು ಗೂಗಲ್ ತಯಾರಿಸಿ ನಡೆಸಿದಂತೆ ಕಾಣ್ತಿದೆ. ಕಂಪನಿಯು ಈಗಾಗಲೇ ಲಂಡನ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಒಂದೆರಡು ಕಚೇರಿ ಹೊಂದಿದೆ. ಕಿಂಗ್ಸ್ ಕ್ರಾಸ್(king’s cross) ರೈಲು ನಿಲ್ದಾಣದ ಬಳಿ ಪ್ರಧಾನ ಕಚೇರಿಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಲ್ಯಾಂಡ್ ಸ್ಕೇಪರ್ (Land scraper) ಎಂದು ಕರೆಯಲ್ಪಡುವ ಗಗನಚುಂಬಿ ಕಟ್ಟಡವು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Border dispute: ಭಾರತ, ಚೀನಾ ಗಡಿ ವಿವಾದ ಮತ್ತೆ ಮುಂದಿನ ವಾರ 14ನೇ ಸುತ್ತಿನ ಸೇನಾ ಮಾತುಕತೆ..?

ಸೆಂಟ್ರಲ್ ಸೇಂಟ್ ಸೇಂಟ್ ಗೈಲ್ಸ್ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಗೂಗಲ್ ಮುಖ್ಯ ಹಣಕಾಸು ಅಧಿಕಾರಿ (Ruth Porat), ಸುಮಾರು 20 ವರ್ಷಗಳಿಂದ ಯುಕೆಯಲ್ಲಿ ಕಾರ್ಯ ನಿರ್ವಹಿಸಲು ನಾವು ಸವಲತ್ತು ಪಡೆದಿದ್ದೇವೆ. ಸೆಂಟ್ರಲ್ ಸೇಂಟ್ ಗೈಲ್ಸ್ ಖರೀದಿಸಿ ಅದನ್ನು ಅಭಿವೃದ್ಧಿ ಪಡಿಸುವುದರಿಂದ ದೇಶದ ಅಭಿವೃದ್ಧಿ ಹಾಗೂ ಯಶಸ್ಸಿನಲ್ಲಿ ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗೂಗಲ್ ನ್ಯೂಯರ್ಕ್ (New York)ನಲ್ಲಿ ವ್ಯಾಪಾರ ವಿಸ್ತರಿಸಲು ತಮ್ಮ ಯೋಜನೆಯ ಭಾಗವಾಗಿ ಗೂಗಲ್ ಮ್ಯಾನ್ ಹ್ಯಾಟನ್ (Manhattan)ನಲ್ಲಿರುವ ಸೇಂಟ್ ಜಾನ್ಸ್ ಟರ್ಮಿನಲ್ (St. John Terminal) ನನ್ನು ಖರೀದಿಸಿತ್ತು.
Published by:Latha CG
First published: