ಸುಂದರ್​ ಪಿಚೈ ಕೊನೆ ಬಾರಿ ಕಣ್ಣೀರು ಹಾಕಿದ್ದು ಇದೇ ವಿಷಯಕ್ಕಂತೆ; ಬಿಬಿಸಿ ಸಂದರ್ಶನದಲ್ಲಿ Google CEO ಹೇಳಿದ್ದೇನು?

ನಾನು ಅಮೆರಿಕದ ಪ್ರಜೆಯಾಗಿರಬಹುದು. ಆದರೆ, ಭಾರತ ನನ್ನ ಉಸಿರಲ್ಲಿ ಬೆರೆತಿದೆ. ನನ್ನ ತವರಿನ ಬೇರು ಆಳವಾಗಿ ಬೇರೂರಿದೆ.

ಸುಂದರ್ ಪಿಚೈ, ಗೂಗಲ್ ಸಿಇಒ

ಸುಂದರ್ ಪಿಚೈ, ಗೂಗಲ್ ಸಿಇಒ

 • Share this:
  ಸೆಲೆಬ್ರಿಟಿಗಳು, ಪ್ರಖ್ಯಾತ ವ್ಯಕ್ತಿಗಳ ಜೀವನದ ಕುರಿತು ಅನೇಕ ಕುತೂಹಲಗಳು ಇರುವುದು ಸಹಜ. ಅದರಲ್ಲೂ ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಗೂಗಲ್​ ಸಿಇಒ ಸುಂದರ್​ ಪಿಚೈ ಬದುಕು ಅನೇಕರ ಯುವ ಜನತೆಗೆ ಸ್ಪೂರ್ತಿ ಜೊತೆ ಅವರ ಬಗ್ಗೆ ಮತ್ತಷ್ಟು ತಿಳಿದು ಕೊಳ್ಳುವ ಕಾತುರ. ಇದೇ ಉದ್ದೇಶದಿಂದಲೇ ಇತ್ತೀಚೆಗೆ ಬಿಬಿಸಿ ನಡೆಸಿದ ಸಂದರ್ಶನದಲ್ಲಿ ಅವರ ವೈಯಕ್ತಿಕ ವಿಚಾರಗಳ ಕುರಿತು ಪ್ರಶ್ನಿಸಿದೆ. ಈ ವೇಳೆ ಅವರು ಕೊನೆಯ ಬಾರಿ ಕಣ್ಣೀರು ಹಾಕಿದ್ದು, ಯಾವ ಕಾರಣಕ್ಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಈ ಸಂದರ್ಶನದಲ್ಲಿ ಅವರು ವೈಯಕ್ತಿಕ ಜೊತೆ ತಮ್ಮ ಮುಂದಿರುವ ಸವಾಲುಗಳ ಕುರಿತು ಸವಿವರವಾಗಿ ಮಾತನಾಡಿದ್ದಾರೆ.

  ಕೊರೋನಾ ಸಾಂಕ್ರಾಮಿಕತೆ ಜಗತ್ತನ್ನೇ ಕಾಡಿದ ಸೋಂಕು. ಇದು ತಮ್ಮನ್ನು ಭಾವನಾತ್ಮಕವಾಗಿ ಸಾಕಷ್ಟು ಕಾಡಿತು ಎಂದಿದ್ದಾರೆ ಸುಂದರ್​ ಪಿಚೈ. ಅಮೋಲ್​ ರಾಜನ್​ ಅವರೊಂದಿಗಿನ ಸಂದರ್ಶನದಲ್ಲಿ ಕಡೆಯದಾಗಿ ತಾವು ಕಣ್ಣೀರು ಹಾಕಿದ ಘಟನೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನಾದಿಂದ ಸಾವನ್ನಪ್ಪಿದವರ ಮೃತ ದೇಹಗಳನ್ನು ಹೊತ್ತು ನಿಂತ ಟ್ರಕ್​ಗಳು ನೋಡಿದಾಗ ಹಾಗೂ ತನ್ನ ತವರು ನೆಲ ಭಾರತದಲ್ಲಿ ಜನರು ಕೋವಿಡ್​ ಸಂಕಷ್ಟದಿಂದ ಸಂಕಷ್ಟ ಅನುಭವಿಸಿದ್ದನ್ನು ಕಂಡು ಕಂಬನಿ ಮಿಡಿದೆ ಎಂದು ತಿಳಿಸಿದ್ದಾರೆ.

  ನಾನು ಅಮೆರಿಕದ ಪ್ರಜೆಯಾಗಿರಬಹುದು. ಆದರೆ, ಭಾರತ ನನ್ನ ಉಸಿರಲ್ಲಿ ಬೆರೆತಿದೆ. ನನ್ನ ತವರಿನ ಬೇರು ಆಳವಾಗಿ ಬೇರೂರಿದೆ. ತಮಿಳುನಾಡಿನಲ್ಲಿ ಹುಟ್ಟಿದ ನನಗೆ ಭಾರತದ ಸ್ಥಾನ ದೊಡ್ಡದು ಎಂದಿದ್ದಾರೆ.

  ಇದೇ ವೇಳೆ ತಾವು ದಕ್ಷಿಣ ಭಾರತದ ತಮಿಳುನಾಡಿನ ಮಧ್ಯಮ ವರ್ಗದ ಕುಟುಂಬದ ಬಂದಿದ್ದು, ವಿವಿಧ ತಂತ್ರಜ್ಞಾನಗಳು ತಮ್ಮ ಮೇಲೆ ಪರಿಣಾಮ ಬೀರಿದವು. ಈ ತಂತ್ರಜ್ಞಾನಗಳು ನನ್ನದೇ ಆದ ಹೊರ ಜಗತ್ತಿಗೆ ಕಿಟಕಿಯನ್ನು ನೀಡಿದವು. ಜೊತೆಗೆ ನಮ್ಮ ಕುಟುಂಬಸ್ಥರನ್ನು ಹತ್ತಿರ ಕರೆತಂದವು. ಪ್ರತಿದಿನ ಸಂಜೆ ನಾವು ದೂರದರ್ಶನದ ಮೂಲಕ ಸಾರೆ ಜಹಾಸೆ ಅಚ್ಚಾ ಮೂಲಕ ಒಂದಾಗುತ್ತಿದ್ದೇವು. ಇವನ್ನು ನಾನು ನನ್ನ ಸಹೋದ್ಯೋಗಿಗಳಿಗೆ ಮೊದ ಮೊದಲು ತಿಳಿಸುತ್ತಿದೆ. ಬಳಿಕ ಅದನ್ನು ಯೂ ಟ್ಯೂಬ್​ ಮೂಲಕ ತೋರಿಸಲು ಶುರು ಮಾಡಿದೆ ಎಂದು ಕಳೆದ ಬಾರಿ ಜುಲೈ ಸಂದರ್ಶನದಲ್ಲಿ ಭಾರತದ ನಂಟಿನ ಕುರಿತು ಮಾತನಾಡಿದ್ದಾರೆ.

  ಇದನ್ನು ಓದಿ: ನೀವು ಆಹ್ವಾನ ಕೊಟ್ಟಾಗಲೇ ಮೂರನೇ ಅಲೆ ಸೋಂಕು ಆರಂಭ; ಮೋದಿ ಎಚ್ಚರಿಕೆ

  ನಾನು ಚಿಕ್ಕವನಿದ್ದಾಗ ಹೊಸ ತಂತ್ರಜ್ಞಾನಗಳು ನನ್ನ ಕಲಿಕೆಗೆ ಹಾಗೂ ಬೆಳವಣಿಗೆಗೆ ಅವಕಾಶ ಒದಗಿಸಿದವು. ಆದರೆ, ಈ ತಂತ್ರಜ್ಞಾನಗಳು ಬೇರೆ ಕಡೆಯಿಂದ ಬರಬೇಕಾದ ಕಾರಣ ನಾವು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಭಾರತದ ಈಗಿನ ಜನತೆಗೆ ಈ ರೀತಿಯ ಕಾಯುವ ಅವಶ್ಯಕತೆ ಇಲ್ಲ. ಇಂದು ಭಾರತದಲ್ಲಿ ಹೊಸ ತಲೆಮಾರಿನ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ ಎಂದರು.

  ಕಳೆದ ಬಾರಿ ನಡೆದ ವರ್ಚುಯಲ್​ ಸಭೆಯಲ್ಲಿ ಮಾತನಾಡಿದ ಅವರು, ಸ್ಯಾಂಡ್​ಫೋರ್ಡ್​ಗೆ ಬಂದ ಬಳಿಕ ಎದುರಿಸಿದ ಸವಾಲಿನ ಕುರಿತು  ಮಾತನಾಡಿದ್ದರು. ತಮ್ಮ ತಂದೆಯ ವರ್ಷದ ಸಂಬಳದ ಮೊತ್ತವನ್ನು ನನಗೆ ಅಮೆರಿಕ ತೆರಳಲು ವಿಮಾನ ಟಿಕೆಟ್​ ಗಾಗಿ ನೀಡಿದರು. ಇದೇ ನನ್ನ ಮೊದಲ ವಿಮಾನ ಪ್ರಯಾಣ. ಕ್ಯಾಲಿಫೋರ್ನಿಯಾಗೆ ಬಂದಿಳಿದಾಗ ಪರಿಸ್ಥಿತಿ ನಾನು ಅಂದುಕೊಂಡಂತೆ ಇರಲಿಲ್ಲ. ಅಮೆರಿಕ ಜೀವನ ಬಲು ದುಬಾರಿಯಾಗಿತ್ತು. ಭಾರತಕ್ಕೆ ಇಲ್ಲಿಂದ 10 ನಿಮಿಷ ಕರೆ ಮಾಡುವುದು ನನ್ನ ತಂದೆ ತಿಂಗಳ ವೇತನದ ಸರಿಸಮಾನ ದುಡ್ಡಾಗುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೆ ನನಗೆ ಅದೃಷ್ಟದ ಹೊರತಾಗಿ ಸಿಕ್ಕ ಹೊಸ ವಿಷಯ ಎಂದರೆ ತಂತ್ರಜ್ಞಾನದ ವಿಷಯದಲ್ಲಿ ನನಗೆ ಇದ್ದ ಅತಿಯಾದ ಆಸಕ್ತಿ ಎಂದಿದ್ದಾರೆ.
  Published by:Seema R
  First published: