• Home
  • »
  • News
  • »
  • national-international
  • »
  • Sundar Pichai: ಮೋಜು ಇರೋದು ಕೆಲಸದಲ್ಲಿ, ಹಣದಲ್ಲಲ್ಲ! ಸುಂದರ್ ಪಿಚೈ

Sundar Pichai: ಮೋಜು ಇರೋದು ಕೆಲಸದಲ್ಲಿ, ಹಣದಲ್ಲಲ್ಲ! ಸುಂದರ್ ಪಿಚೈ

ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್ ಸಿಇಒ ಸುಂದರ್ ಪಿಚೈ

ನೀವು ಮಾಡುವ ಕೆಲಸದಲ್ಲೇ ಉತ್ತಮ ಮನರಂಜನೆಯನ್ನು ಪಡೆದುಕೊಳ್ಳಿ ಹಾಗೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹಣವನ್ನು ಮೋಜು ಹಾಗೂ ಮನರಂಜನೆಯ ವಸ್ತುವಾಗಿ ನೋಡಬೇಡಿ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. 

  • Share this:

ಗೂಗಲ್ (Google) ತನ್ನ ಉದ್ಯೋಗಿ ಮನರಂಜನೆ ಹಾಗೂ ಪ್ರಯಾಣದ ಬಜೆಟ್‌ಗಳನ್ನು ಕಡಿತಗೊಳಿಸಿದ ನಂತರ ಸಂಸ್ಥೆಯ ಎಲ್ಲಾ ಸಭೆಗಳಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಪಿಚೈ, ನೀವು ಮಾಡುವ ಕೆಲಸದಲ್ಲೇ ಉತ್ತಮ ಮನರಂಜನೆಯನ್ನು ಪಡೆದುಕೊಳ್ಳಿ ಹಾಗೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹಣವನ್ನು ಮೋಜು ಹಾಗೂ ಮನರಂಜನೆಯ ವಸ್ತುವಾಗಿ ನೋಡಬೇಡಿ ಎಂದು ಉದ್ಯೋಗಿಗಳಿಗೆ (Employees) ಕಿವಿಮಾತು ಹೇಳಿದ್ದಾರೆ. ಸತತ ಎರಡನೇ ತ್ರೈಮಾಸಿಕದಲ್ಲಿ ಕೂಡ ಗೂಗಲ್ ನಿರೀಕ್ಷಿಸಿದ್ದಕ್ಕಿಂತ ದುರ್ಬಲ ಗಳಿಕೆಯನ್ನು ಮಾಡಿದ್ದು ಸಂಸ್ಥೆಯು ಉದ್ಯೋಗಿಗಳ ಪ್ರಯಾಣ ಹಾಗೂ ಮನರಂಜನೆಗೆ (Entertainment) ಮೀಸಲಿರಿಸಿದ್ದ ಬಜೆಟ್ ಅನ್ನು ಕಡಿತಗೊಳಿಸಿದೆ.


ಬಜೆಟ್ ಕಡಿತಗೊಳಿಸಿದ ಗೂಗಲ್
ಉತ್ಪಾದಕತೆಯನ್ನು ನಿರ್ವಹಿಸುವುದು, ಕೆಲಸದಲ್ಲಿನ ಕಠಿಣತೆ ಹಾಗೂ ವಜಾಗೊಳಿಸುವ ಕುರಿತು ಉದ್ಯೋಗಿಗಳು ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರಲ್ಲಿ ಸ್ಪಷ್ಟೀಕರಣಗಳನ್ನು ಕೋರಿದ್ದರು.


ಇದಕ್ಕೆ ಖಡಕ್ ಉತ್ತರವನ್ನು ನೀಡಿದ ಪಿಚೈ ಅವರು ಹಣ ಹಾಗೂ ಸವಲತ್ತೇ ಜೀವನವಲ್ಲ ಅಂತೆಯೇ ಆರ್ಥಿಕ ಹಿಂಜರಿತದ ಸಮಯದಲ್ಲಿ ಉದ್ಯೋಗಿಗಳು ಸುತ್ತಾಡಿ ಮನರಂಜನೆಯನ್ನು ಪಡೆದುಕೊಳ್ಳುವ ಬದಲಿಗೆ ತಮ್ಮ ಕೆಲಸದಲ್ಲೇ ಮನರಂಜನೆಯನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದ್ದಾರೆ.


ಉದ್ಯೋಗಿಗಳ ಒಕ್ಕೊರಲಿನ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಸುಂದರ್ ಪಿಚೈ
ಸರ್ವ ಸದಸ್ಯರ ಸಭೆಯಲ್ಲಿ ವೆಚ್ಚ ಕಡಿತದ ಕುರಿತು ಸುಂದರ್ ಪಿಚೈ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಹೆಚ್ಚು ರೇಟ್ ಮಾಡಲಾದ ಪ್ರಶ್ನೆಗಳನ್ನು ಇಂತಹ ಸಭೆಗಳಲ್ಲಿ ಮುಂದಿಡಲಾಗುತ್ತದೆ ಹಾಗೂ ಉಳಿದ ಭಾಗವಹಿಸುವವರು ಅದನ್ನು ರೇಟ್ ಮಾಡುತ್ತಾರೆ.


ಇದನ್ನೂ ಓದಿ: Scorpio N: ಆ ಕುಸ್ತಿಪಟು ಹೊಸ ಕಾರು ಖರೀದಿಸಿದಕ್ಕೆ ಖುಷಿ ಪಟ್ಟಿದ್ಯಾಕೆ ಆನಂದ್ ಮಹೀಂದ್ರಾ? ಕಾರಣ ಇದು! 


ಕೋವಿಡ್ ಸಾಂಕ್ರಾಮಿಕದ ನಂತರವೂ ಸಂಸ್ಥೆಯು ಲಾಭದಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ನಗದು ಮೀಸಲನ್ನು ಹೊಂದಿದ್ದರೂ ಉದ್ಯೋಗಿಗಳ ಪ್ರಯಾಣ ಹಾಗೂ ಇತರ ಖರ್ಚುವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ಸಂಸ್ಥೆಯು ಉದ್ಯೋಗಿಗಳನ್ನು ಏಕೆ ದುರ್ಬಲಗೊಳಿಸುತ್ತಿದೆ ಎಂದು ಕೇಳಿದ್ದರು.


ಇದಕ್ಕೆ ಉತ್ತರಿಸಿದ ಸುಂದರ್ ಪಿಚೈ, ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಜೊತೆಯಾಗಿ ಇರುವಂತೆ ಕೇಳಿದ್ದರು. ನಿಮಗೆಲ್ಲರಿಗೂ ಗೊತ್ತಿರುವಂತೆ ಸಂಸ್ಥೆಯು ಕಠಿಣವಾದ ಸ್ಥೂಲ ಆರ್ಥಿಕ ಪರಿಸ್ಥಿತಿಯನ್ನೆದುರಿಸುತ್ತಿದೆ, ಇದಕ್ಕಾಗಿ ನಾವು ಹೆಚ್ಚು ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಒಂದೇ ಕಂಪೆನಿಯಲ್ಲಿ ನಾವು ಕಾರ್ಯನಿರ್ವಹಿಸುತ್ತಿರುವುದರಿಂದ ಈ ರೀತಿಯ ಸವಾಲುಗಳನ್ನು ಎದುರಿಸಲು ಜೊತೆಯಾಗಿ ಇರುವುದು ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.


ಪರಿಶ್ರಮಿ ಸಂಸ್ಥೆಯಾಗಿರುವ ಗೂಗಲ್
ಗೂಗಲ್ ಇಂದು ಇಷ್ಟೆತ್ತರಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ಒಗ್ಗಟ್ಟಿನ ಶ್ರಮ ಹಾಗೂ ಬೆಂಬಲವಾಗಿದೆ. ಹಣವನ್ನು ವಿನೋದದೊಂದಿಗೆ ಸಮೀಕರಿಸಬಾರದು, ನೀವು ಅವಿರತ ಪರಿಶ್ರಮದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ, ಆದ ಕಾರಣ ಉದ್ಯೋಗಿಗಳು ಮೋಜಿನಲ್ಲಿ ಕಾಲಕಳೆಯಬಾರದು ಹಾಗೂ ಮೋಜನ್ನು ಹಣಕ್ಕೆ ಸಮನಾಗಿ ನೋಡಬಾರದು ಎಂದು ತಿಳಿಸಿದ್ದಾರೆ.


ಗೂಗಲ್ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿರುವ ಕುರಿತು ಮಾತನಾಡಿದ ಪಿಚೈ, ಗೂಗಲ್ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ ಹಾಗೂ ಈ ಸಂಖ್ಯೆಯು ಉತ್ಪಾದಕತೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ತಿಳಿಸಿದ್ದಾರೆ.


ನೀವು 20 ಜನರ ತಂಡವೇ ಆಗಿರಬಹುದು ಇಲ್ಲವೇ 100 ಜನರ ತಂಡವಾಗಿರಬಹುದು. ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದನ್ನು ಆಧರಿಸಿಕೊಂಡು ತಂಡ ಮುನ್ನಡೆಯುತ್ತದೆ ಎಂದು ತಿಳಿಸಿದ್ದಾರೆ.


ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಟೆಕ್ ದೈತ್ಯರು
100 ಜನರು ಮಾಡುವ ಕೆಲಸವನ್ನು ಬರೇ 20 ಜನರು ನಿರ್ವಹಿಸಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಇಲ್ಲಿ ಸಂಖ್ಯೆಗಿಂತ ನಿಷ್ಠೆ ಹಾಗೂ ಜವಬ್ದಾರಿಯಿಂದು ದುಡಿಯುವವರು ಮುಖ್ಯವಾಗುತ್ತಾರೆ ಎಂಬುದಾಗಿ ಪಿಚೈ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.


ಇದನ್ನೂ ಓದಿ:  Traditional Pottery: ಸಾವಯವ ಕುಂಬಾರಿಕೆಯಿಂದ ಯಶಸ್ಸು ಕಂಡ ಯುವಕ; ತಿಂಗಳಿಗೆ 2 ಲಕ್ಷ ಆದಾಯ


ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಟೆಕ್ ಕಂಪೆನಿಗಳು ವೇತನ ಕಡಿದಂತಹ ನಿಯಂತ್ರಣಗಳ ಮೊರೆ ಹೋಗಿವೆ. ವಿಶ್ವದಾದ್ಯಂತ ಬಡ್ಡಿ ದರಗಳು ಏರಿಕೆಯಾಗುತ್ತಿದ್ದು ಸ್ಟಾರ್ಟಪ್ ಸಂಸ್ಕೃತಿಗೆ ಮೂಲಾಧಾರವಾಗಿದ್ದ ಸುಲಭ ಸಂಪತ್ತು ಇದೀಗ ಲಭ್ಯವಿಲ್ಲ ಹಾಗಾಗಿಯೇ ಫೇಸ್‌ಬುಕ್, ಗೂಗಲ್ ಸೇರಿದಂತೆ ಶ್ರೇಷ್ಠ ಟೆಕ್ ಕಂಪೆನಿಗಳು ಕೆಲವೊಂದು ಉದ್ಯೋಗಿ ಸವಲತ್ತುಗಳಿಗೆ ಕಡಿವಾಣ ಹಾಕುತ್ತಿದ್ದು ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿವೆ.

Published by:Ashwini Prabhu
First published: