Earth day 2020: ಜೇನುನೊಣ-ಪರಾಗಸ್ಪರ್ಶ: ಕ್ರಿಯಾತ್ಮಕವಾಗಿ ವಿಶ್ವ ಭೂದಿನ ಆಚರಿಸಿದ ಗೂಗಲ್ ಡೂಡಲ್

Google Doodle: ಭೂಮಿ ಮತ್ತು ಮನುಷ್ಯನಿಗೆ ಜೇನುನೊಣಗಳ ಮಹತ್ವ ಎಷ್ಟಿದೆ ಎಂಬುದನ್ನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಗೂಗಲ್​ ತಂಡ ಹೇಳಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಸದುದ್ದೇಶದಿಂದ ವಿಶ್ವಾದ್ಯಂತ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ.

ಗೂಗಲ್ ಡೂಡಲ್

ಗೂಗಲ್ ಡೂಡಲ್

  • Share this:
    ನವದೆಹಲಿ(ಏ.22): ಇಂದು ವಿಶ್ವ ಭೂದಿನ. ಏಪ್ರಿಲ್ 22ರಂದು ವಿಶ್ವಾದ್ಯಂತ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಗೂಗಲ್ ಕೂಡ ಇಂದು ಡೂಡಲ್​ ಮೂಲಕ ವಿಶ್ವ ಭೂ ದಿನವನ್ನು ಆಚರಿಸಿದೆ. ವಿಶ್ವ ಭೂದಿನ 50ನೇ ವಾರ್ಷಿಕೋತ್ಸವವನ್ನು ವಿಶೇಷ ಡೂಡಲ್ ಮೂಲಕ ಆಚರಣೆ ಮಾಡಿದೆ.

    ನಮ್ಮ ಭೂಮಿ ತುಂಬಾ ಚಿಕ್ಕದು, ಈ ಭೂಮಿಯ ವಿಸ್ಮಯದಲ್ಲಿ ಅತೀ ಚಿಕ್ಕ ಮತ್ತು ನಿರ್ಣಾಯಕ ಜೀವಿಯಾದ ಜೇನು ಹುಳುವಿಗೆ ವಿಶ್ವ ಭೂದಿನವನ್ನು ಅರ್ಪಿಸಿದೆ. ಗೂಗಲ್ ಗ್ರಾಫಿಕ್ಸ್​ ಮತ್ತು ಆನಿಮೇಶನ್​ ಬಳಸಿ ಡೂಡಲ್ ಮೂಲಕ ವಿಶ್ವ ಭೂದಿನವನ್ನು ವಿಶೇಷವಾಗಿ ಆಚರಣೆ ಮಾಡಿದೆ.

    ವಿಶ್ವ ಭೂದಿನವನ್ನು ಮೊದಲು 1970ರಲ್ಲಿ ಆಚರಿಸಲಾಯಿತು. ಈಗ 293ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಭೂಮಿ ದಿನವನ್ನು ಆಚರಣೆ ಮಾಡಲಾಗುತ್ತಿದೆ.

    ಜಮ್ಮು-ಕಾಶ್ಮೀರದಲ್ಲಿ ಎನ್​ಕೌಂಟರ್; ಇಬ್ಬರು ಉಗ್ರರ ಹತ್ಯೆ ಮಾಡಿದ ಭಾರತೀಯ ಸೇನೆ

     



    ಗೂಗಲ್ ಸೃಷ್ಟಿಸಿರುವ ಡೂಡಲ್​ ಜೇನುನೊಣದ ಮೇಲೆ ಬಳಕೆದಾರರು ಕ್ಲಿಕ್ ಮಾಡಿದ ತಕ್ಷಣ ಒಂದು ಚಿಕ್ಕ ವಿಡಿಯೋ ಪ್ಲೇ ಆಗುತ್ತದೆ. ಇದರಲ್ಲಿ ಜೇನುನೊಣಗಳು ಹೂವಿನಿಂದ ಹೂವಿಗೆ ಹಾರುವ ಮೂಲಕ ಪರಾಗಸ್ಪರ್ಶ ಮಾಡುವ ವಿಧಾನವನ್ನು ತೋರಿಸಲಾಗಿದೆ.

    ಜೊತೆಗೆ ಜೇನುನೊಣಗಳು ವಿಶ್ವದ ಮೂರನೇ ಎರಡರಷ್ಟು ಬೆಳೆಗಳನ್ನು ಕೊಡುಗೆಯಾಗಿ ನೀಡಿರುವುದರಿಂದ ಅವುಗಳ ಮಹತ್ವವನ್ನು ತೋರಿಸಿದೆ. ಜೇನುನೊಣಗಳು ಹೂವುಗಳನ್ನು ಪರಾಗಸ್ಪರ್ಶ ಮಾಡಿ ವಿಶ್ವದ ಶೇ.85ರಷ್ಟು ಹೂವುಗಳ ಬೆಳವಣಿಗೆಗೆ ಕಾರಣವಾಗಿವೆ. ಅವುಗಳು ಹೂವಿನಿಂದ ಹೂವಿಗೆ ಹಾರಿ ಪರಾಗಸ್ಪರ್ಶ ಕ್ರಿಯೆ ನಡೆಸುವುದು ಮತ್ತು ನಮ್ಮ ಭೂಮಿಯ ಕೆಲವವೊಂದು ವಿಸ್ಮಯ ಸಂಗತಿಗಳನ್ನು ತಿಳಿಸಲಾಗಿದೆ.

    ಭೂಮಿ ಮತ್ತು ಮನುಷ್ಯನಿಗೆ ಜೇನುನೊಣಗಳ ಮಹತ್ವ ಎಷ್ಟಿದೆ ಎಂಬುದನ್ನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಗೂಗಲ್​ ತಂಡ ಹೇಳಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಸದುದ್ದೇಶದಿಂದ ವಿಶ್ವಾದ್ಯಂತ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ.
    First published: