ಛತ್ತೀಸ್‌ಗಢ: ಅಪಹರಿಸಿದ್ದ ಸಿಆರ್​ಪಿಎಫ್​ ಕಮಾಂಡೋವನ್ನು ಬಿಡುಗಡೆ ಮಾಡಿದ ಮಾವೋವಾದಿಗಳು!

ಸಿಆರ್​ಪಿಎಫ್ ಯೋಧ.

ಸಿಆರ್​ಪಿಎಫ್ ಯೋಧ.

ಶನಿವಾರದಿಂದಲೂ ಸೇನೆ ಕಮಾಂಡೋಗಾಗಿ ಶೋಧಕಾರ್ಯ ನಡೆಸಿತ್ತು. ಯೋಧನನ್ನು ಅಪಹರಿಸಿರುವುದಾಗಿ ಮಾವೋವಾದಿಗಳು ತಿಳಿಸಿ, ಮಧ್ಯಸ್ಥಿಕೆ ಸರ್ಕಾರ ಯಾರನ್ನಾದರೂ ಸೂಚಿಸಬೇಕು ನಂತರ ಯೋಧನನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು.

  • Share this:

    ಬಿಜಾಪುರ (ಏಪ್ರಿಲ್ 08): ಕಳೆದ ವಾರ ಛತ್ತೀಸಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಮಾರಕ ಎನ್​ಕೌಂಟರ್​ ನಡೆದಿತ್ತು. ಈ ಎನ್‌ಕೌಂಟರ್‌ನಲ್ಲಿ 22 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯ ನಂತರ ಸಿಆರ್‌ಪಿಎಫ್ ಕಮಾಂಡೋ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದರು. 100 ಗಂಟೆಗಳಿಗೂ ಹೆಚ್ಚು ಕಾಲ ಸೆರೆಯಲ್ಲಿದ್ದ ಯೋಧನನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.



    ಶನಿವಾರದಿಂದಲೂ ಸೇನೆ ಕಮಾಂಡೋಗಾಗಿ ಶೋಧಕಾರ್ಯ ನಡೆಸಿತ್ತು. ಯೋಧನನ್ನು ಅಪಹರಿಸಿರುವುದಾಗಿ ಮಾವೋವಾದಿಗಳು ತಿಳಿಸಿ, ಮಧ್ಯಸ್ಥಿಕೆ ಸರ್ಕಾರ ಯಾರನ್ನಾದರೂ ಸೂಚಿಸಬೇಕು ನಂತರ ಯೋಧನನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು.


    ಸುಮಾರು 2,000 ಭದ್ರತಾ ಸಿಬ್ಬಂದಿಗಳು ಛತ್ತೀಸ್‌ಗಢ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಬಂಡಾಯ ನಾಯಕನ ಹುಡುಕಾಟದಲ್ಲಿದ್ದರು. ಈ ವೇಳೆ ಎನ್‌ಕೌಂಟರ್‌ ನಡೆದಿತ್ತು. ಘಟನೆಯಲ್ಲಿ ಸಾವನ್ನಪ್ಪಿದ್ದ ಭದ್ರತಾ ಪಡೆಗಳ ಯೋಧರಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ಸಮವಸ್ತ್ರ ಮತ್ತು ಬೂಟುಗಳನ್ನು ಮಾವೋವಾದಿಗಳು ಲೂಟಿ ಮಾಡಿದರು.


    ಇದನ್ನೂ ಓದಿ: ಮಾವೋವಾದಿಗಳ ಸೆರೆಯಾಳಾಗಿದ್ದಾರೆ ಸಿಆರ್​ಪಿಎಫ್ ಕಮಾಂಡೋ; ಸ್ಥಳೀಯ ಪತ್ರಕರ್ತರು ಹೇಳಿದ್ದೇನು?


    ಮಾವೋವಾದಿಗಳು ತಮ್ಮ ಹೇಳಿಕೆಯಲ್ಲಿ, ’ನಮ್ಮ ಹೋರಾಟವು ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲ, ಮೋದಿ-ಶ ಸರ್ಕಾರದ ಆದೇಶದ ಮೇರೆಗೆ ಪಡೆಗಳು ಪ್ರಾರಂಭಿಸಿದ ದಾಳಿಗೆ ತಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.


    "ಸರ್ಕಾರವು ಮೊದಲು ಮಧ್ಯವರ್ತಿಗಳ ಹೆಸರನ್ನು ಘೋಷಿಸಬೇಕು, ಅದರ ನಂತರ ನಮ್ಮ ಬಳಿ ಒತ್ತೆಯಾಳಾಗಿರುವ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಅವರು ನಮ್ಮ ಭದ್ರತೆಯಲ್ಲಿ ಸುರಕ್ಷಿತರಾಗಿರುತ್ತಾರೆ" ಎಂದು ಸಿಪಿಐ (ಮಾವೋವಾದಿಗಳು) ದಂಡಕಾರಣ್ಯ ವಿಶೇಷ ವಲಯ ಸಮಿತಿ ಮಂಗಳವಾರ ಹೇಳಿಕೆ ನೀಡಿತ್ತು.

    Published by:MAshok Kumar
    First published: