ಈಗ ದೇಶದ ಎಲ್ಲ ಕಡೆ ಶಬರಿಮಲೆಗೆ(Sabarimala) ಹೋಗುವ ಭಕ್ತಾದಿಗಳು (Pilgrims) ಹೆಚ್ಚೆಂದು ಹೇಳಬಹುದು. ಶಬರಿಮಲೆ ಅಯ್ಯಪ್ಪನಿಗೆ ಗಣನೀಯವಾಗಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಈ ಮುಂಚೆ ಶಬರಿಮಲೆಗೆ ವಿಮಾನ(Flight)ದಲ್ಲಿ ಪ್ರಯಾಣ ಮಾಡುವ ಭಕ್ತಾದಿಗಳಿಗೆ ಕ್ಯಾಬಿನ್ ಬ್ಯಾಗೇಜ್(Cabin Baggage) ನಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ ಇದ್ದಿಲ್ಲ. ಆದರೆ ಈಗ ಅದಕ್ಕೆ ಅನುಮತಿ ದೊರೆತಿದೆ.
ಕ್ಯಾಬೀನ್ ಬ್ಯಾಗೇಜ್ ನಲ್ಲಿ ತೆಂಗಿನಕಾಯಿ ಸಾಗಿಸಲು ಗ್ರೀನ್ ಸಿಗ್ನಲ್ ನೀಡಿದ BCAS
ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ಭಾರತದಾದ್ಯಂತ ವಿಮಾನಗಳಲ್ಲಿ ಕ್ಯಾಬಿನ್ ಬ್ಯಾಗೇಜ್ನಲ್ಲಿ ತೆಂಗಿನಕಾಯಿಯನ್ನು ಸಾಗಿಸಲು ಅನುಮತಿ ನೀಡಲು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೇಫ್ಟಿ (ಬಿಸಿಎಎಸ್) ಸಂಸ್ಥೆಯು ನಿರ್ಧರಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಭದ್ರತಾ ಸಿಬ್ಬಂದಿ ಇರುಮುಡಿಯನ್ನು ಚೆಕ್-ಇನ್ ಬ್ಯಾಗೇಜ್ನಲ್ಲಿ ಹಾಕಬೇಕೆಂದು ಹಲವಾರು ಯಾತ್ರಾರ್ಥಿಗಳಿಗೆ ಹೇಳಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
BCAS ನ ಜಂಟಿ ನಿರ್ದೇಶಕರು ಹೇಳಿರುವುದೇನು?
“ನಮ್ಮ ಪ್ರಾದೇಶಿಕ ಕಚೇರಿಗಳಿಂದ ನಾವು ಈ ಸಂಬಂಧ ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ. ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಶಬರಿಮಲೆಗೆ ತೆರಳುವ ಈ ಋತುವಿನಲ್ಲಿ ಕ್ಯಾಬಿನ್ ಸಾಮಾನು ಸರಂಜಾಮುಗಳಲ್ಲಿ ತೆಂಗಿನಕಾಯಿಯನ್ನು ಒಯ್ಯಲು ಅನುಮತಿ ನೀಡಲು ನಾವು ನಿರ್ಧರಿಸಿದ್ದೇವೆ" ಎಂದು BCAS ನ ಜಂಟಿ ನಿರ್ದೇಶಕ ಜೈದೀಪ್ ಪ್ರಸಾದ್, ಸುದ್ದಿ ಮಾಧ್ಯಮವಾದ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Success Story: ಭಾರತದಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ಗೆ ಒಳಗಾದ ಮೊದಲ ಮಗು ಇಂದು ಡಾಕ್ಟರ್! ಸ್ಪೂರ್ತಿದಾಯಕ ಯಶೋಗಾಥೆ ಇದು
"ಸಹಜವಾಗಿ, ಯಾತ್ರಿಕರ ತಪಾಸಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಎಲ್ಲಾ ವಿಮಾನ ನಿಲ್ದಾಣಗಳನ್ನು ಕೇಳಲಾಗುತ್ತದೆ. ಜಾಗತಿಕವಾಗಿ ಅನುಸರಿಸಲಾದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ತೆಂಗಿನಕಾಯಿಯನ್ನು ಒಯ್ಯಲು ಈ ಮೊದಲು ಅನುಮತಿ ನೀಡಿರಲಿಲ್ಲ. ಆದರೆ ಅದರ ಅವಶ್ಯಕತೆ ಈಗ ಇರುವ ಸಲುವಾಗಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಭಕ್ತಾದಿಗಳಿಗೆ ಅನುಮತಿ ನೀಡಿದೆ" ಎಂದು ಅವರು ಹೇಳಿದರು.
ಇದರ ಜೊತೆಗೆ ಭದ್ರತಾ ತಪಾಸಣೆ ನಡೆಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಶಬರಿಮಲೆ ಯಾತ್ರಿಕರಿಗೆ ತೆಂಗಿನಕಾಯಿಯನ್ನು ಚೆಕ್-ಇನ್ ಬ್ಯಾಗೇಜ್ಗೆ ಹಾಕುವಂತೆ ಹೇಳುತ್ತಿದೆ.
CISF ಅಧಿಕಾರಿಗಳು ಹೇಳಿರುವುದೇನು?
ಇದರ ಕುರಿತು "ನಾವು ಕ್ಯಾಬೀನ್ ಬ್ಯಾಗೇಜ್ ನಲ್ಲಿ ತೆಂಗಿನಕಾಯಿ ಇರಿಸುವ ಕೆಲಸವನ್ನು ಮತ್ತಷ್ಟು ಸುಗಮಗೊಳಿಸುತ್ತಿದ್ದೇವೆ ಮತ್ತು ಆ ಕೆಲಸವನ್ನು ಸರಳವಾಗಿ ಮತ್ತು ವೇಗವಾಗಿ ಮಾಡಲು ಯಾತ್ರಾರ್ಥಿಗಳಿಗೆ ಮತ್ತು BCAS ಸಂಸ್ಥೆಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದೇವೆ" ಎಂದು ಉನ್ನತ CISF ಅಧಿಕಾರಿಯೊಬ್ಬರು ಹೇಳಿದರು.
ಬೆಂಗಳೂರಿನ ದೀಪಗಳ ವಿನ್ಯಾಸಕರು ಕೆಲವು ದಿನಗಳ ಹಿಂದೆ CISF ಗೆ ಟ್ವೀಟ್ ಮಾಡಿ, "ಪ್ರಸಾದ ತೆಗೆದುಕೊಂಡು ಹೋಗುವುದನ್ನು ಅಣಕಿಸುವ ಮೂಲಕ ಯಾತ್ರಿಕರಿಗೆ ಅಪರಾಧ ಮಾಡಿದ್ದಾರೆ" ಎಂದು ಆರೋಪಿಸಿದ್ದರು
'ಇರುಮುಡಿಯು ಕೈಸಾಮಾನು ಸರಂಜಾಮು'
ಇರುಮುಡಿಯನ್ನು ಈ ಹಿಂದೆ "ಅಸೂಕ್ಷ್ಮ ಮತ್ತು ಕ್ರೂರ" ಎಂದು ಕರೆದಿದ್ದರು. ಇರುಮುಡಿಯನ್ನು ಈ ಹಿಂದೆ ಕೈ ಸಾಮಾನು ಸರಂಜಾಮು ಎಂದು ಅನುಮತಿಸಲಾಗಿದ್ದರೂ, ಕ್ಯಾಬಿನ್ನೊಳಗೆ ಅವುಗಳನ್ನು ಅನುಮತಿಸದ ಹೊಸ ನಿಯಮವನ್ನು ಕಳೆದ ವರ್ಷ ಪರಿಚಯಿಸಲಾಯಿತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Uttar Pradesh: ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ 6 ಜನರು ಸಜೀವ ದಹನ!
"ಇದು ಸಾಂಕ್ರಾಮಿಕ ರೋಗ ಕೊರೋನಾದ ನಂತರದ ಮೊದಲ ಯಾತ್ರಾ ಋತುವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಶಬರಿಮಲೆಗೆ ಹೋಗದ ಅನೇಕ ಭಕ್ತಾದಿಗಳು ಈ ವರ್ಷ ಅಲ್ಲಿಗೆ ಹೋಗಲು ಉತ್ಸುಕರಾಗಿರುವುದರಿಂದ ಕೇರಳದಲ್ಲಿ ಭಾರಿ ರಶ್ ಉಂಟಾಗಿದೆ" ಎಂದು ಅವರು ಹೇಳಿದರು.
ಶಬರಿಮಲೆ ಯಾತ್ರಿಕರು ತೀರ್ಥಯಾತ್ರೆಯ ಸಮಯದಲ್ಲಿ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಏಕೈಕ ಪ್ರಯಾಣದ ಕಿಟ್ ಅಂದ್ರೆ ಅದು ಇರುಮುಡಿ ಅಂತಾನೇ ಹೇಳಬಹುದು. ಇರುಮುಡಿ ಇಲ್ಲದೆ ದೇವಸ್ಥಾನದ ಸನ್ನಿಧಾನದಲ್ಲಿರುವ 18 ಪವಿತ್ರ ಮೆಟ್ಟಿಲುಗಳ ಮೇಲೆ ಹೆಜ್ಜೆ ಹಾಕುವಂತಿಲ್ಲ. ಅದಕ್ಕೆ ಅನುಮತಿ ಇಲ್ಲ.
2018 ರ ಆರಂಭದಲ್ಲಿ, ಇತರ ಫ್ಲೈಯರ್ಗಳ ಬೂಟುಗಳನ್ನು ಸ್ಕ್ಯಾನಿಂಗ್ಗಾಗಿ ಇರಿಸಲಾಗಿರುವ ಟ್ರೇಗಳಲ್ಲಿ ಇರುಮುಡಿಗಳನ್ನು ಇರಿಸಲು ಯಾತ್ರಿಕರು ಆಕ್ಷೇಪಿಸಿದ ಕಾರಣ, ಯಾತ್ರಿಕರ ಇರುಮುಡಿಯ ಸ್ಕ್ಯಾನಿಂಗ್ ಸಲುವಾಗಿ KIA ಯಲ್ಲಿ CISF ನಿಂದ ಪ್ರತ್ಯೇಕ ಟ್ರೇಗಳನ್ನು ಮೀಸಲಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ