Vegetarians: ಸಸ್ಯಾಹಾರಿ ಪ್ರಯಾಣಿಕರಿಗೆ ಸಿಹಿಸುದ್ದಿ! ಇನ್ಮುಂದೆ ರೈಲುಗಳಲ್ಲಿ ದೊರೆಯಲಿದೆ ಶುದ್ಧ ವೆಜ್ ಫುಡ್..!

ಸಸ್ಯಾಹಾರದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಅಡುಗೆಮನೆಯಲ್ಲಿ ಯಾವುದೇ ಮಾಂಸಾಹಾರಿ ಆಹಾರವನ್ನು ತಯಾರಿಸದಂತೆ ಸೂಚನೆ ನೀಡಲಾಗಿದೆ. ಅಂದರೆ ಅಡುಗೆ ಮನೆಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಯಾವುದೇ ಮಿಶ್ರಣಗಳು ಇರುವುದಿಲ್ಲ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
IRCTC ಜೊತೆಗಿನ ಸಹಯೋಗದೊಂದಿಗೆ ಭಾರತದ ಸಾತ್ವಿಕ್ ಕೌನ್ಸಿಲ್(Satvik Council), ಇತ್ತೀಚೆಗೆ ಸಾತ್ವಿಕ್ ಪ್ರಮಾಣೀಕರಣ ಯೋಜನೆ(Plan)ಯನ್ನು ಪರಿಚಯಿಸಿದೆ. ಪ್ರಪಂಚದಲ್ಲೇ ಮೊಟ್ಟ ಮೊದಲನೆಯದಾದ ಮತ್ತು ವಿನೂತನವಾದ "ಪ್ಯಾಸೆಂಜರ್- ಲೊಕೊಮೊಟಿವ್ ಕಂಟಿನ್ಯುಯಸ್ ಆಡಿಟ್ ಮಾಡ್ಯೂಲ್" (Passenger- Locomotive Continuous Audit Module) ಅನ್ನು ಈ ಕೌನ್ಸಿಲ್ ಪರಿಚಯಿಸಿದೆ.

ಪ್ರಯಾಣಿಕರಿಗೆ ಹೊಸ ಪ್ಲ್ಯಾನ್ ಪರಿಚಯಿಸಿದ ಭಾರತೀಯ ರೈಲ್ವೆ

ಈ ನೀತಿಯಿಂದಾಗಿ, ಭಾರತೀಯ ರೈಲ್ವೆಯಲ್ಲಿ ಹಿಂದೆಂದಿಗಿಂತಲೂ ತಾಜಾ ಮತ್ತು ಶುದ್ಧ ಸಸ್ಯಾಹಾರಿ ಆಹಾರವನ್ನು ಆನಂದಿಸುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ಮೊದಲ ಬಾರಿಗೆ, ಭಾರತೀಯರಿಗೆ ಶುದ್ಧ ಸಸ್ಯಾಹಾರಿ ಅನುಭವವನ್ನು ಒದಗಿಸಲು ಬದ್ಧವಾಗಿರುವ ಸಂಸ್ಥೆಯಾದ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ, ರೈಲುಗಳಿಗೆ ಈ ಸಸ್ಯಾಹಾರಿ ಪ್ರಮಾಣೀಕರಣವನ್ನು ನೀಡಲು, ಭಾರತೀಯ ರೈಲ್ವೆಯ ಅಡುಗೆ ವಿಭಾಗ- ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಸಹಕಾರ (IRCTC) ಯೊಂದಿಗೆ ಕೈಜೋಡಿಸಿದೆ. IRCTC ಯೊಂದಿಗೆ ಸೇರಿಕೊಂಡು ಭಾರತದ ಸಾತ್ವಿಕ್ ಕೌನ್ಸಿಲ್ ಇತ್ತೀಚೆಗೆ ಸಾತ್ವಿಕ್ ಪ್ರಮಾಣೀಕರಣ ಯೋಜನೆಯ ಲಾಭವನ್ನು ಪ್ರಯಾಣಿಕರಿಗೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದ್ದು “ಪ್ಯಾಸೆಂಜರ್- ಲೊಕೊಮೊಟಿವ್ ನಿರಂತರ ಆಡಿಟ್ ಮಾಡ್ಯೂಲ್” ಅನ್ನು ನವದೆಹಲಿಯ IRCTC ಎಕ್ಸಿಕ್ಯೂಟಿವ್ ಲಾಂಜ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ-16ರಲ್ಲಿ ಪರಿಚಯಿಸಿದೆ.

ಇದನ್ನೂ ಓದಿ: Andhra Pradesh : ಕಂಡು ಕೇಳರಿಯದ ಮಳೆಗೆ ಆಂಧ್ರ ತತ್ತರ: 25 ಜನರ ಸಾವು, 17 ಮಂದಿ ನಾಪತ್ತೆ!

18 ರೈಲುಗಳಲ್ಲಿ ಶುದ್ಧ ಸಸ್ಯಾಹಾರ ಊಟ  ಲಭ್ಯ

ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಪ್ರಾರಂಭಿಸಿ, 18 ಇತರ ರೈಲುಗಳಲ್ಲಿ, ಈ ಪ್ರಮಾಣೀಕರಣವು ಅನ್ವಯವಾಗಲಿದೆ. ಅದರಲ್ಲೂ ಮುಖ್ಯವಾಗಿ, ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವ ಭಾರತೀಯ ರೈಲುಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಈ ಪ್ರಮಾಣೀಕರಣವು, ರೈಲುಗಳಲ್ಲಿ ನೀಡಲಾಗುವ ಆಹಾರವು ಶುದ್ಧ ಸಸ್ಯಾಹಾರಿಯಾಗಿದೆ ಎಂದು ಖಾತರಿ ಪಡಿಸುವ ಮೂಲಕ ಸಸ್ಯಾಹಾರಿ ಪ್ರಯಾಣಿಕರಿಗೆ ನಿಜವಾದ ಸಸ್ಯಾಹಾರಿ ಊಟದ ಅನುಭವವನ್ನು ಕೊಡುವ ದಿಕ್ಕಿನಲ್ಲಿ ಶ್ರಮ ವಹಿಸುತ್ತದೆ. ಅಡುಗೆಗೆ ಬಳಸುವ ಪಾತ್ರೆಗಳು ಮತ್ತು ಅಡುಗೆ ಮನೆಗೆ ಪ್ರವೇಶಿಸುವ ಯಾವುದೇ ಪದಾರ್ಥಗಳನ್ನು ಸಸ್ಯಾಹಾರಿ ಎಂದು ಪ್ರಮಾಣೀಕರಿಸಿದ ವಸ್ತುಗಳಿಂದಲೇ ತೊಳೆಯಲಾಗುತ್ತದೆ.

ಶುದ್ಧ ವೆಜ್​ ಫುಡ್ ತಯಾರಿ

ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದಾಗಿ ಶಾಕಾಹಾರಿ ಆಹಾರವು ನಿಜವಾಗಿಯೂ ಸಸ್ಯಾಹಾರಿ ಆಗಿ ಉಳಿದಿಲ್ಲ ಎಂಬ ಕಾರಣಕ್ಕೆ ಈ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ಪ್ರಕಾರ ಸಸ್ಯಾಹಾರದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಅಡುಗೆಮನೆಯಲ್ಲಿ ಯಾವುದೇ ಮಾಂಸಾಹಾರಿ ಆಹಾರವನ್ನು ತಯಾರಿಸದಂತೆ ಸೂಚನೆ ನೀಡಲಾಗಿದೆ. ಅಂದರೆ ಅಡುಗೆ ಮನೆಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಯಾವುದೇ ಮಿಶ್ರಣಗಳು ಇರುವುದಿಲ್ಲ.

ಇದಲ್ಲದೆ, ತಮ್ಮ ಈ ಸಸ್ಯಾಹಾರಿ ಕ್ರಮವನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡಲು ಮತ್ತು ಸಸ್ಯಾಹಾರಿ ಪ್ರಯಾಣಿಕರು ನೆಮ್ಮದಿಯಾಗಿ ಊಟ ಮಾಡುವಂಥ ವಾತಾವರಣ ಸೃಷ್ಠಿಸಲು IRCTC ಮತ್ತು ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಜಂಟಿಯಾಗಿ ಎಲ್ಲಾ ಸಸ್ಯಾಹಾರಿ ಸ್ಥಳಗಳು ಮತ್ತು ಅಡುಗೆಮನೆಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆಯ ಕೈಪಿಡಿಯನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Life in Moon- ಚಂದ್ರನಲ್ಲಿ ಇಡೀ ಮಾನವಕುಲ 1 ಲಕ್ಷ ವರ್ಷ ಬದುಕುವಷ್ಟು ಆಕ್ಸಿಜನ್ ಇದೆ, ಆದರೆ…

ಇತರೆ ಪ್ರಯಾಣದ ಪ್ಯಾಕೇಜ್​​ಗಳು

"ಸಸ್ಯಾಹಾರಿ-ಸ್ನೇಹಿ ಪ್ರಯಾಣ"ವನ್ನು ಇನ್ನಷ್ಟು ಸುಗಮವಾಗಿಸುವ ನಿಟ್ಟಿನಲ್ಲಿ ಸಾತ್ವಿಕ್ ಪ್ರಮಾಣೀಕರಣವು ಕೆಲಸ ಮಾಡುತ್ತದೆ. ಅಂದಹಾಗೆ, ಈ ಸಸ್ಯಾಹಾರಿ ಆಹಾರ ಕ್ರಮ ಕೇವಲ ಭಾರತೀಯ ರೈಲ್ವೇಯ ರೈಲುಗಳಿಗೆ ಸೀಮಿತವಾಗಿಲ್ಲ. IRCTC ಯಲ್ಲಿರುವ ಕಿಚನ್‌ಗಳು, ಬಜೆಟ್ ಹೋಟೆಲ್‌ಗಳು, ಎಕ್ಸಿಕ್ಯೂಟಿವ್ ಲಾಂಜ್‌ಗಳು, ಫುಡ್ ಪ್ಲಾಜಾಗಳು, ಪ್ರವಾಸ ಮತ್ತು ಪ್ರಯಾಣ ಪ್ಯಾಕೇಜ್‌ಗಳು ಇತ್ಯಾದಿಗಳಿಗೆ ಈ ಸಸ್ಯಾಹಾರಿ ಕ್ರಮದ ಅನುಕೂಲಗಳನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿಕೊಂಡಿದೆ.
Published by:Latha CG
First published: