Cervical Cancer Vaccine: ಹೆಣ್ಮಕ್ಕಳಿಗೆ ಗುಡ್ ನ್ಯೂಸ್, ದೇಶದ ಮೊದಲ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಿಡುಗಡೆ

ದೇಶೀಯವಾಗಿ ಪ್ರಪ್ರಥಮವಾಗಿ ಸರ್ವಿಕಲ್ ಕ್ಯಾನ್ಸರ್ ವಿರುದ್ಧ ಅಭಿವೃದ್ಧಿಪಡಿಸಲಾದ ಕ್ವಾಡ್ರಿವಾಲಂಟ್ ಹ್ಯುಮನ್ ಪ್ಯಾಪಿಲ್ಲೊಮಾವೈರಸ್ (qHPV) ಲಸಿಕೆಯನ್ನು ಇಂದು ಅಂದರೆ ಸೆಪ್ಟೆಂಬರ್ 1, 2022 ರಂದು ರಾಜಧಾನಿಯಲ್ಲಿ ಅನಾವರಣಗೊಳಿಸಲಾಗುತ್ತಿದೆ.

ಕ್ವಾಡ್ರಿವಾಲಂಟ್ ಹ್ಯುಮನ್ ಪ್ಯಾಪಿಲ್ಲೊಮಾವೈರಸ್ (qHPV) ಲಸಿಕೆ

ಕ್ವಾಡ್ರಿವಾಲಂಟ್ ಹ್ಯುಮನ್ ಪ್ಯಾಪಿಲ್ಲೊಮಾವೈರಸ್ (qHPV) ಲಸಿಕೆ

  • Share this:
ಇಂದು ನಿಜಕ್ಕೂ ಭಾರತದ ವೈದ್ಯಕೀಯ ಇತಿಹಾಸದಲ್ಲೊಂದು ಅವಿಸ್ಮರಣೀಯ ದಿನವಾಗಲಿದೆ. ದೇಶೀಯವಾಗಿ ಪ್ರಪ್ರಥಮವಾಗಿ ಸರ್ವಿಕಲ್ ಕ್ಯಾನ್ಸರ್ (Cervical cancer) ವಿರುದ್ಧ ಅಭಿವೃದ್ಧಿಪಡಿಸಲಾದ ಕ್ವಾಡ್ರಿವಾಲಂಟ್ ಹ್ಯುಮನ್ ಪ್ಯಾಪಿಲ್ಲೊಮಾವೈರಸ್  (qHPV) (Quadrivalent Human Papillomavirus vaccine) ಲಸಿಕೆಯನ್ನು ಇಂದು ಅಂದರೆ ಸೆಪ್ಟೆಂಬರ್ 1, 2022 ರಂದು ರಾಜಧಾನಿಯಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಳೆದ ತಿಂಗಳು ಭಾರತದ ಔಷಧ ನಿಯಂತ್ರಣಾ ಪ್ರಾಧಿಕಾರವು (ಡಿಸಿಜಿಐ) ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ಲಸಿಕೆಯ (Vaccine) ಉತ್ಪಾದನೆ ಹಾಗೂ ಮಾರುಕಟ್ಟೆ ಅಧಿಕಾರಕ್ಕಾಗಿ ಅನುವು ಮಾಡಿಕೊಡಲು ಅನುಮತಿಯನ್ನು ನೀಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ಕೋವಿಡ್ ವರ್ಕಿಂಗ್ ಗ್ರೂಪ್‍ನ ಅಧ್ಯಕ್ಷರಾದ ಡಾ. ಎನ್.ಕೆ ಅರೋರಾ ಹಾಗೂ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಮ್ಯೂನೈಸೇಷನ್ ಸಂಸ್ಥೆ ಈ ಲಸಿಕೆಯ ಅನಾವರಣವು (Unveiling Vaccine) ಅತ್ಯಂತ ಸಂತಸದಾಯಕ ವಿಚಾರ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಡಾ. ಅರೋರಾ ಏನು ಹೇಳಿದ್ದಾರೆ? 
"ಇದು ತುಂಬ ಸಂತಸದ ವಿಚಾರವಾಗಿದ್ದು ನಮ್ಮ ಹೆಣ್ಣು ಮಕ್ಕಳು ಇನ್ನು ಮುಂದೆ ಈ ಲಸಿಕೆಯ ಲಾಭವನ್ನು ಪಡೆಯಲಿರುವುದು ನನಗೆ ಅಪಾರ ಖುಶಿ ತಂದಿದೆ. ನಿಜ ಹೇಳಬೇಕೆಂದರೆ ಇದು ಭಾರತದ ಪ್ರಮುಖ ಲಸಿಕೆಗಳಲ್ಲೊಂದಾಗಿದ್ದು ಇದನ್ನು 9-14ರ ವಯೋಮಾನದ ಹೆಣ್ಣು ಮಕ್ಕಳಿಗಾಗಿರುವ ರಾಷ್ಟ್ರೀಯ ಪ್ರತಿರಕ್ಷಣಾ ಕಾರ್ಯಕ್ರಮದಲ್ಲಿ ಸೇರಿಸಲಾಗುವುದೆಂದು ಆಶಿಸುತ್ತಿದ್ದೇನೆ" ಎಂದು ಡಾ. ಅರೋರಾ ಹೇಳಿದ್ದಾರೆ.

ಈ ಲಸಿಕೆ ವೈರಸ್ ನ ವಿರುದ್ಧ ಹೇಗೆ ಹೋರಾಡುತ್ತದೆ?
"ಈ ಲಸಿಕೆಯು ತುಂಬ ಪ್ರಭಾವಶಾಲಿ ಹಾಗೂ ಪರಿಣಾಮಕಾರಿಯಾಗಿದ್ದು ಸರ್ವಿಕಲ್ ಕ್ಯಾನ್ಸರ್ ತೆಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಏಕೆಂದರೆ, 85-90 ಪ್ರತಿಶತಗಷ್ಟು ಪ್ರಕರಣಗಳಲ್ಲಿ ಈ ಸರ್ವಿಕಲ್ ಕ್ಯಾನ್ಸರ್ ಎಂಬುದು ಒಂದು ನಿರ್ದಿಷ್ಟ ವೈರಾಣುವಿನಿಂದ ಸಂಭವಿಸುತ್ತದೆ ಹಾಗೂ ಈ ಲಸಿಕೆ ಆ ನಿರ್ದಿಷ್ಟ ವೈರಾಣುಗಳ ವಿರುದ್ಧವೇ ಹೋರಾಡುತ್ತದೆ. ಹಾಗಾಗಿ ಇಂದಿನ ನಮ್ಮ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ನೀಡಿದರೆ ಭವಿಷ್ಯದಲ್ಲಿ ಅವರು ಸಂಭಾವ್ಯವಾಗಿ ತರಿಸಿಕೊಳ್ಳಬಹುದಾಗಿದ್ದ ಸರ್ವಿಕಲ್ ಕ್ಯಾನ್ಸರ್ ಕಾಯಿಲೆ ಬರದಂತೆ ಅದರಿಂದ ಸುರಕ್ಷಿತವಾಗಿರುತ್ತಾರೆ" ಎಂದು ಡಾ. ಅರೋರಾ ವಿವರಿಸುತ್ತಾರೆ.

ಇದನ್ನೂ ಓದಿ: Rheumatoid: ಯುವಕರನ್ನೇ ಬಾಧಿಸುತ್ತೆ ರುಮಟಾಯ್ಡ್‌ ಸಂಧಿವಾತ: ಏನಿದು? ಕಾರಣವೇನು?

ಮುಂದುವರೆಯುವ ಅವರು, "ಇಂದು ಜಗತ್ತಿನಾದ್ಯಂತ ಮಾರುಕಟ್ಟೆಯಲ್ಲಿ ಲಸಿಕೆಗಳ ಕೊರತೆಯಿದೆ. ಇದೀಗ ಭಾರತೀಯ ಲಸಿಕೆ ಕಾಲಿಡುತ್ತಿದ್ದು ನಾವು ನಮ್ಮ ದೇಶೀಯವಾಗಿ ನಿರ್ಮಿತ ಲಸಿಕೆಗಳಿಂದಲೇ ಈ ಕೊರತೆಗಳನ್ನು ನೀಗಿಸಬಹುದಾಗಿದೆ" ಎಂದು ಹೇಳಿದ್ದಾರೆ.

ದೆಹಲಿಯ ಐಐಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲಸಿಕೆ ಅನಾವರಣ
ಇನ್ನು, ದೆಹಲಿಯ ಐಐಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಜಿತೇಂದ್ರ ಸಿಂಗ್ ಅವರು ಈ ಲಸಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಎಸ್‍ಐಐ ಸಿಇಒ ಆಗಿರುವ ಆದರ್ ಪೂನಾವಾಲಾ ಅವರು ಉಪಸ್ಥಿತರಿರಲಿದ್ದಾರೆ. ಅಧಿಕಾರಿಗಳು ಹೇಳಿರುವಂತೆ ಈ qHPV ಲಸಿಕೆಯಾದ CERVAVAC ಅದ್ಭುತವಾದ ಫಲಿತಾಂಶ ನೀಡಿದ್ದು ಎಲ್ಲ ಗುರಿಪಡಿಸಲಾಗಿದ್ದ HPV ವೈರಾಣುಗಳ ಮೇಲೆ ನಿಗದಿಪಡಿಸಿದ್ದ ಬೇಸ್ ಲೈನ್ ಗಿಂತ ಸಾವಿರ ಪಟ್ಟು ಹೆಚ್ಚು ಪ್ರತಿಕಾಯ ಪ್ರತಿಕ್ರಿಯೆಯನ್ನು ತೋರಿಸಿದೆ.

ಸರ್ವಿಕಲ್ ಕ್ಯಾನ್ಸರ್ ಅಂದ್ರೇನು?
ಈ ಕಾಯಿಲೆಯು ಭಾರತದಲ್ಲಿ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಎರಡನೇ ಅತಿ ಪ್ರಮುಖ ಕಾಯಿಲೆಗಳಲ್ಲೊಂದಾಗಿದೆ. ಈ ಕ್ಯಾನ್ಸರ್ ಕಾಯಿಲೆ 15-44 ಪ್ರಾಯದೊಳಗಿನ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಹಿಂದೆ ಕೋವಿಡ್-19 ಕುರಿತಂತೆ ರಚಿಸಲಾಗಿದ್ದ ವಿಷಯ ಪರಿಣಿತರ ಆಯೋಗವು ಈ ಲಸಿಕೆಯ ಕುರಿತಂತೆ ಶಿಫಾರಸ್ಸು ನೀಡಿದ ನಂತರವೇ ಭಾರತದ ಔಷಧೀಯ ಪ್ರಾಧಿಕಾರವು ಇದಕ್ಕಾಗಿ ಅನುಮೋದನೆ ನೀಡಿದೆ. ಅಷ್ಟಕ್ಕೂ, ಇದಕ್ಕೆ ಸಂಬಂಧಿಸಿದಂತೆ ಸೀರಮ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಪ್ರಕಾಶ ಕುಮಾರ್ ಸಿಂಗ್ ಅವರು ಡಿಸಿಜಿಐಗೆ ಲಸಿಕೆಗೆ ಅನುಮೋದನೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:  Artificial Embryos: ಮಾನವ DNA ಬಳಸಿ ಕೃತಕ ಭ್ರೂಣ ಅಭಿವೃದ್ಧಿಗೆ ಮುಂದಾದ ಬಯೋಟೆಕ್, ಅಂಗಾಂಗ ಕಸಿಗೆ ಬಳಕೆ!

ಇನ್ನು, ಲಸಿಕೆಯ ಟ್ರಯಲ್ ಗೆ ಸಂಬಂಧಿಸಿದಂತೆ ಇದರ ಎರಡನೇ ಹಾಗೂ ಮೂರನೇ ಟ್ರಯಲ್ ಗಳನ್ನು ಸಹ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದಡಿ ಬರುವ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಾಯ ಹಾಗೂ ಸಹಯೋಗವನ್ನು ಪಡೆಯಲಾಗಿದೆ.
Published by:Ashwini Prabhu
First published: