'ದೇಶವಿರೋಧಿಗಳಿಗೆ ಗುಂಡಿಕ್ಕಿ'; ಸಚಿವ ಅನುರಾಗ್ ಠಾಕೂರ್ ರ‍್ಯಾಲಿಯಲ್ಲಿ ವಿವಾದಾತ್ಮಕ ಘೋಷಣೆ

ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡಿರುವ ಸಚಿವ ಅನುರಾಗ್ ಠಾಕೂರ್ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅನುರಾಗ್ ಠಾಕೂರ್ ಭಾಷಣ

ಅನುರಾಗ್ ಠಾಕೂರ್ ಭಾಷಣ

  • Share this:
ನವದೆಹಲಿ (ಜ. 28): ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಘೋಷಣೆ ಕೂಗಲು ಪ್ರೇರೇಪಿಸುವ ಮೂಲಕ ಕೇಂದ್ರದ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಕ್ಕೀಡಾಗಿದ್ದಾರೆ.

ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡಿರುವ ಸಚಿವ ಅನುರಾಗ್ ಠಾಕೂರ್ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭಾಷಣದ ವೇಳೆ ಕೈಗಳನ್ನು ಎತ್ತಿ 'ದೇಶದ್ರೋಹಿಗಳನ್ನು...' ಎಂದು ಘೋಷಣೆ ಕೂಗಿದ ಅನುರಾಗ್ ಠಾಕೂರ್ ಅವರ ಜೊತೆಗೆ 'ಗೋಲಿ ಮಾರೋ (ಗುಂಡಿಕ್ಕಿ ಕೊಲ್ಲಿ)' ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲ ಆಕ್ರೋಶದಿಂದ ಘೋಷಣೆ ಕೂಗುತ್ತಿದ್ದ ವಿಡಿಯೋ ಈಗ ವೈರಲ್ ಆಗಿದೆ.'ಗುಂಡಿಕ್ಕಿ ಕೊಲ್ಲಿ' ಎಂದು ಕೂಗಿದ್ದು ನಾನಲ್ಲ, ಜನರು ಎಂದು ಸಚಿವ ಅನುರಾಗ್ ಠಾಕೂರ್ ಸಮಜಾಯಿಷಿ ನೀಡಿದ್ದಾರೆ. ಆದರೆ, ಠಾಕೂರ್ ಅವರ ಘೋಷಣೆಯ ಉದ್ದೇಶ ಅದೇ ಆಗಿತ್ತು ಎಂದು ಜಾಲತಾಣಿಗರು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಈ ರೀತಿಯ ಭಾಷಣ ಮಾಡಿರುವುದರಿಂದ ಈ ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: Coronavirus: ಚೀನಾದಲ್ಲಿ ಮತ್ತೆ 1,300 ಜನರಲ್ಲಿ ಕರೋನ ವೈರಸ್ ಸೋಂಕು ಪತ್ತೆ; ಸಾವಿನ ಸಂಖ್ಯೆ 106ಕ್ಕೆ ಏರಿಕೆ

ಕೇಂದ್ರ ಸರ್ಕಾರ ಬಜೆಟ್ ಮಂಡಿಸಲು ಕೇವಲ 4 ದಿನಗಳು ಬಾಕಿ ಇವೆ. ಇದರ ಬೆನ್ನಲ್ಲೇ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿ ಜನರನ್ನು ಪ್ರಚೋದನೆಗೆ ಒಳಪಡಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಗ್ಗೆ ಟ್ವಿಟ್ಟರ್​ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

 

 

 

 

 

 

 
First published: