ರುದ್ರಾಕ್ಷಿ ಇಲ್ಲ... ಮೈ ತುಂಬಾ ಚಿನ್ನ ಧರಿಸಿ ಸುದ್ದಿಯಾಗುತ್ತಿರುವ ಬಾಬಾ...!


Updated:August 2, 2018, 11:48 AM IST
ರುದ್ರಾಕ್ಷಿ ಇಲ್ಲ... ಮೈ ತುಂಬಾ ಚಿನ್ನ ಧರಿಸಿ ಸುದ್ದಿಯಾಗುತ್ತಿರುವ ಬಾಬಾ...!

Updated: August 2, 2018, 11:48 AM IST
ರಕ್ಷಿತಾ, ನ್ಯೂಸ್​ 18 ಕನ್ನಡ

ಉತ್ತರಾಖಂಡ್​(ಆ.02): ಬಾಬಾಗಳು, ಸನ್ಯಾಸಿಗಳು ಅಂದ್ರೆ ಸಾಮಾನ್ಯವಾಗಿ ಕಾವಿ ಬಟ್ಟೆ, ರುದ್ರಾಕ್ಷಿ ಮಾಲೆ ಅಷ್ಟೇ ಧರಿಸ್ತಾರೆ ಅನ್ನೋದು ಜನರ ನಂಬಿಕೆ. ಆದರೆ ಈ ಬಾಬಾ ಮಾತ್ರ ಮೈತುಂಬಾ ಬಂಗಾರ ಹಾಕ್ಕೊಂಡೇ ಪ್ರತಿವರ್ಷ ಸದ್ದು ಮಾಡ್ತಾರೆ. ಅಷ್ಟಕ್ಕೂ ಈ ಬಾಬಾ ವಿಶೇಷತೆ ಏನು..? ಯಾಕಿಂಥಾ ಶೋಕಿ? ಇಲ್ಲಿದೆ ವಿವರ

ಉತ್ತರಾಖಂಡ್​ನ ಕನ್ವರ್​ ಯಾತ್ರೆ ಸಂದರ್ಭ ದೇಶದಾದ್ಯಂತ ಸದ್ದು ಮಾಡುವ ಗೋಲ್ಡನ್​ ಬಾಬಾ, ಈ ಬಾರಿಯೂ ಎಲ್ಲರೂ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಯಾತ್ರೆಯ ಸಂದರ್ಭ ಅತೀಹೆಚ್ಚಿನ ತೂಕದ ಆಭರಣ ಧರಿಸಿ, ಪೊಲೀಸ್​ ಸರ್ಪಗಾವಲಿನಲ್ಲಿ ಯಾತ್ರೆ ಕೈಗೊಳ್ಳೋ ಗೋಲ್ಡನ್​ ಬಾಬಾ ಅಲಿಯಾಸ್​ ಸುಧೀರ್​ ಮಕ್ಕರ್,​ ಈ ಬಾರಿ ಬರೋಬ್ಬರಿ 6 ಕೋಟಿ ಮೌಲ್ಯದ 20 ಕೆಜಿ ಆಭರಣ ಧರಿಸಿ ಯಾತ್ರೆ ಹೊರಟಿದ್ದಾರೆ.

ಪ್ರತೀ ವರ್ಷ ಈ ಯಾತ್ರೆಯ ಆಕರ್ಷಣೆ ಇದೇ ಗೋಲ್ಡನ್​ ಬಾಬಾ. ಕಳೆದ ವರ್ಷ 21 ಚಿನ್ನದ ಸರ, 21 ಲಾಕೆಟ್​ ಸೇರಿ 14.5 ಕೆಜಿ ಚಿನ್ನವನ್ನ ಧರಿಸಿ ಯಾತ್ರೆ ಹೊರಟಿದ್ರು. ಈ ಬಾರಿ ಚಿನ್ನದ ತೂಕ 20 ಕೆಜಿಗೆ ಏರಿಕೆಯಾಗಿದೆ. ಇದ್ರಲ್ಲಿ 2 ಕೆಜಿ ತೂಕದ ಶಿವನ ಚಿತ್ರವಿರೋ ಚಿನ್ನದ ಸರವೂ ಸೇರಿದೆ. ಇಷ್ಟೇ ಅಲ್ಲದೆ 27 ಲಕ್ಷ ಮೌಲ್ಯದ ರೋಲೆಕ್ಸ್​ ವಾಚ್​​ ಕಟ್ಟೋ ಬಾಬಾ ಬಳಿ, 2 ಆಡಿ, 2 ಇನ್ನೋವಾ, 3 ಫಾರ್ಚೂನರ್​, 1 ಬಿಎಂಡಬ್ಲ್ಯೂ ಕಾರು ಕೂಡ ಇದೆ.

ಆಧ್ಯಾತ್ಮದತ್ತ ವಾಲುವ ಮುನ್ನ ಈ ಬಾಬಾ, ದೆಹಲಿಯಲ್ಲಿ ಬಟ್ಟೆ ಹಾಗೂ ರಿಯಲ್​ ಎಸ್ಟೇಟ್​ ವ್ಯವಹಾರ ನಡೆಸ್ತಿದ್ರು. ಉದ್ಯಮದಲ್ಲಿ ಯಶಸ್ಸು ಸಾಧಿಸ್ತಿರೋವಾಗ್ಲೆ ಆಧ್ಯಾತ್ಮದತ್ತ ಗಮನ ಹರಿಸಿದ್ರು.. ಹಾಗಾಗಿ ಬಂಗಾರ, ಆಡಂಬರದ ವ್ಯಾಮೋಹ ಅವ್ರನ್ನ ಬಿಟ್ಟಿರ್ಲಿಲ್ಲ.. ಈ ಬಾರಿ 25ನೇ ಯಾತ್ರೆ ಕೈಗೊಳ್ತಿರೋ ಈ ಬಾಬಾ, ಇದು ತಮ್ಮ ಕೊನೆಯ ಯಾತ್ರೆ ಅಂತ ಹೇಳ್ಕೊಂಡಿದ್ದಾರೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...