ರಕ್ಷಾ ಬಂಧನ ಹಿನ್ನಲೆಯಲ್ಲಿ 250 ರೂ ಏರಿಕೆ ಕಂಡ ಚಿನ್ನದ ಬೆಲೆ

news18
Updated:August 25, 2018, 5:16 PM IST
ರಕ್ಷಾ ಬಂಧನ ಹಿನ್ನಲೆಯಲ್ಲಿ 250 ರೂ ಏರಿಕೆ ಕಂಡ ಚಿನ್ನದ ಬೆಲೆ
news18
Updated: August 25, 2018, 5:16 PM IST
ನ್ಯೂಸ್​ 18 

ನವದೆಹಲಿ (ಆ.25): ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಓಣಂ ಆಚರಣೆ ಇಲ್ಲದ ಕಾರಣ ಕುಸಿತಗೊಂಡಿದ್ದ ಚಿನ್ನದ ದರ ಶನಿವಾರ ಚೇತರಿಗೆ ಕಂಡಿದೆ, ಚೀನಿವಾರ ಪೇಟೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಹಾಗೂ ವಿದೇಶಿ ಮಾರುಕಟ್ಟೆ ವ್ಯವಹಾರದಲ್ಲಿ ಚಿನ್ನದ ಗಟ್ಟಿ ಕೊಳ್ಳಲು ಮುಂದಾಗಿರುವುದು ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಬೆಳ್ಳಿ ದರದಲ್ಲಿಯೂ 400 ರೂ ಏರಿಕೆ ಕಂಡಿದ್ದು, ಕೆ.ಜಿ ಚಿನ್ನ38,250 ಗಡಿ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿರುವುದರಿಂದ ಡಾಲರ್​ ದರದ ಪರಿಣಾಮ ಬೀರಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ 1.75 ರಷ್ಟು ಏರಿಕೆ ಕಂಡರೆ ಬೆಳ್ಳಿ 2.14ರಷ್ಟು ಏರಿಕೆ ಕಂಡಿದೆ. ರಕ್ಷಾ ಬಂದನ್​ ಹಿನ್ನಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಚಿನ್ನ ಕೊಳ್ಳಲು ಮುಂದಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಪರಿಶುದ್ಧ ಚಿನ್ನ 250ರೂ ಏರಿಕೆ ಕಂಡಿದ್ದು 10ಗ್ರಾಮ್​ ಚಿನ್ನದ ಬೆಲೆ 30, 900ರೂ ಆಗಿದೆ. ಬೆಳ್ಳಿ 400 ರೂ ಏರಿಕೆ ಕಂಡಿದ್ದು, 10 ಗ್ರಾಂ ಬೆಳ್ಳಿ ಕೆ.ಜಿಗೆ 38.250ರೂ ಆಗಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...