Gold Price: ಹೊಸ ದಾಖಲೆ; 40 ಸಾವಿರ ಗಡಿದಾಟಿದ ಚಿನ್ನದ ಬೆಲೆ

ಚಿನ್ನದ ಬೆಲೆ ತುಟ್ಟಿಯಾಗುತ್ತಿದ್ದರೂ ಅದರ ಬೇಡಿಕೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಹೆಚ್ಚೆಂದರೆ ಶೇ. 10ರಷ್ಟು ವ್ಯಾಪಾರ ಮಾತ್ರ ಕಡಿಮೆಯಾಗಿರಬಹುದು ಎಂದು ಚಿನ್ನಾಭರಣ ಉದ್ಯಮಿಗಳು ಹೇಳುತ್ತಾರೆ.

news18
Updated:August 26, 2019, 2:36 PM IST
Gold Price: ಹೊಸ ದಾಖಲೆ; 40 ಸಾವಿರ ಗಡಿದಾಟಿದ ಚಿನ್ನದ ಬೆಲೆ
ಚಿನ್ನದ ಪ್ರಾತಿನಿಧಿಕ ಚಿತ್ರ
  • News18
  • Last Updated: August 26, 2019, 2:36 PM IST
  • Share this:
ಮುಂಬೈ(ಆ. 26): ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಇವತ್ತಿನ ವಹಿವಾಟಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 40 ಸಾವಿರ ರೂ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಬೆಲೆ 41 ಸಾವಿರ ಮುಟ್ಟುವ ಸಾಧ್ಯತೆ ಇದೆ ಎಂದು ಉದ್ಯಮದ ತಜ್ಞರು ಎಚ್ಚರಿಸಿದ್ದಾರೆ.

ಅಂತಾರಾಷ್ಟ್ರೀಯ ವಿದ್ಯಮಾನಗಳು, ಜಾಗತಿಕ ಆರ್ಥಿಕ ಕುಸಿತ ಹಾಗೂ ಬೇಡಿಕೆ ಹೆಚ್ಚಳದಿಂದಾಗಿ ಚಿನ್ನದ ಬೆಲೆಗಳು ಗಗನಕ್ಕೇರುತ್ತಲೇ ಇವೆ. ಜಾಗತಿಕವಾಗಿ ರಾಜಕೀಯ ಬಿಕ್ಕಟ್ಟು, ವ್ಯಾಪಾರ ಬಿಕ್ಕಟ್ಟುಗಳು ತಹಬದಿಗೆ ಬರದೇ ಇದ್ದರೆ ಇನ್ನಷ್ಟು ಏರಿಕೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯನ್ ಜೆಮ್ಸ್ ಅಂಡ್ ಜ್ಯುವೆಲರಿ ಫೆಡರೇಶನ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಚ್ಛರಾಜ್ ಬಮಾಲ್ವ ತಿಳಿಸಿದರೆಂದು ಐಎಎನ್​ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿನ್ನೆಯ ವಹಿವಾಟಿನಲ್ಲಿ 22 ಕ್ಯಾರೆಟ್ ಅಥವಾ ಆಭರಣ ಚಿನ್ನದ ಬೆಲೆ ಪ್ರತೀ 10 ಗ್ರಾಮ್​ಗೆ 36,000 ರೂ ಇತ್ತು. 24 ಕ್ಯಾರೆಟ್ ಚಿನ್ನದ ಬೆಲೆ 37,780 ರೂ ಇತ್ತು. ಇವತ್ತು ಒಂದೇ ದಿನದಲ್ಲಿ ಬೆಲೆ 2 ಸಾವಿರ ರೂಗಿಂತಲೂ ಹೆಚ್ಚಳವಾಗಿದೆ.

ಇದನ್ನೂ ಓದಿ: ಅಮರಾವತಿ ಬದಲು ಬೇರೆ ನಾಲ್ಕು ನಗರಗಳನ್ನು ಆಂಧ್ರಪ್ರದೇಶ ರಾಜಧಾನಿ ಮಾಡಲು ಸಿಎಂ ಜಗನ್​ ಚಿಂತನೆ

ಚಿನ್ನದ ಬೆಲೆ ತುಟ್ಟಿಯಾಗುತ್ತಿದ್ದರೂ ಅದರ ಬೇಡಿಕೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಹೆಚ್ಚೆಂದರೆ ಶೇ. 10ರಷ್ಟು ವ್ಯಾಪಾರ ಮಾತ್ರ ಕಡಿಮೆಯಾಗಿರಬಹುದು ಎಂದು ಚಿನ್ನಾಭರಣ ಉದ್ಯಮಿಗಳು ಹೇಳುತ್ತಾರೆ.

ಹಬ್ಬ ಹರಿದಿನಗಳಲ್ಲಿ ಜನರು ಚಿನ್ನಕ್ಕೆ ಆದ್ಯತೆ ಕೊಡುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾದರೂ ಜನರು ಚಿನ್ನ ಖರೀದಿಗೆ ಹಿಂದೇಟು ಹಾಕುವುದಿಲ್ಲ. ಹೊಸ ಚಿನ್ನ ಖರೀದಿಸಲಾಗದವರು ಮೇಕಿಂಗ್ ಚಾರ್ಜರ್ಸ್ ತೆತ್ತು ತಮ್ಮ ಹಳೆಯ ಆಭರಣಗಳನ್ನೇ ನವೀಕರಿಸಿಕೊಳ್ಳಲು ಸಹಜವಾಗಿಯೇ ಮುಂದಾಗುತ್ತಾರೆ ಎಂದು ಚಿನ್ನದ ವ್ಯಾಪಾರಿಗಳು ತಿಳಿಸುತ್ತಾರೆ.

ಕೆಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 49.70 ಡಾಲರ್ (ಸುಮಾರು 35-36 ಸಾವಿರ ರೂ) ಇದೆ. ಭಾರತದಲ್ಲಿ ಚಿನ್ನದ ಮೇಲೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿ ತುಸು ಬೆಲೆ ಹೆಚ್ಚೇ ಇರುತ್ತದೆ. ಒಂದು ಅಂದಾಜು ಪ್ರಕಾರ ಭಾರತದಲ್ಲಿ ಒಂದು ವರ್ಷದಲ್ಲಿ 700-800 ಟನ್​ನಷ್ಟು ಚಿನ್ನ ವಹಿವಾಟು ಆಗುತ್ತದೆ.(ಐಎಎನ್​ಎಸ್ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ