Gold Rate: ಬಂಗಾರ ಖರೀದಿಸುವವರಿಗೆ ಗುಡ್​ ನ್ಯೂಸ್​; ದಾಖಲೆಯ ಬೆಲೆಯಿಂದ ಇಳಿಕೆ ಕಂಡ ಚಿನ್ನದ ದರ

Gold Price Today: ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 51,580 ರೂ. ಆಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಬೆಂಗಳೂರಿನಲ್ಲಿ 10 ಗ್ರಾಂಗೆ 47,310 ರೂ. ಇದೆ.

Sushma Chakre | news18-kannada
Updated:September 26, 2020, 11:56 AM IST
Gold Rate: ಬಂಗಾರ ಖರೀದಿಸುವವರಿಗೆ ಗುಡ್​ ನ್ಯೂಸ್​; ದಾಖಲೆಯ ಬೆಲೆಯಿಂದ ಇಳಿಕೆ ಕಂಡ ಚಿನ್ನದ ದರ
ಚಿನ್ನ
  • Share this:
Gold Rate Today: ಬೆಂಗಳೂರು (ಸೆ. 26): ಆಪತ್ಕಾಲದಲ್ಲಿ ನೆರವಾಗುವ ಬಂಗಾರದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಚಿನ್ನ ಖರೀದಿಸಿಟ್ಟರೆ ನಮ್ಮ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿ ಇಲ್ಲಿದೆ...

ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 51,580 ರೂ. ಆಗಿದೆ. 1 ಗ್ರಾಂ ಚಿನ್ನಕ್ಕೆ 5,158 ರೂ. ಆಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಬೆಂಗಳೂರಿನಲ್ಲಿ 10 ಗ್ರಾಂಗೆ 47,310 ರೂ. ಇದೆ. 1 ಗ್ರಾಂ ಚಿನ್ನದ ಬೆಲೆ 4,731 ರೂ. ಆಗಿದೆ. 1 ವಾರದ ಹಿಂದೆ ಬೆಂಗಳೂರಿನಲ್ಲಿ 1 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 53 ಸಾವಿರ ರೂ. ಇತ್ತು. ಕಳೆದ ವಾರ 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 48 ಸಾವಿರ ರೂ. ಇತ್ತು. ಈ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಿನ್ನದ ಬೆಲೆಯಲ್ಲಿ ಇಳಿಮುಖವಾಗಿದೆ.

ಇದನ್ನೂ ಓದಿ: Coronavirus India: ಭಾರತದಲ್ಲಿ ನಿನ್ನೆ 85,362 ಕೊರೋನಾ ಕೇಸ್; 59 ಲಕ್ಷ ದಾಟಿದ‌ ಸೋಂಕಿತರ ಸಂಖ್ಯೆ

ಕಳೆದ 5 ದಿನಗಳಲ್ಲಿ 4 ಬಾರಿ ಚಿನ್ನದ ಬೆಲೆ ಕುಸಿತ ಕಂಡಿದೆ. ಬೆಳ್ಳಿಯ ಬೆಲೆಯಲ್ಲೂ ಇಳಿಮುಖವಾಗಿದ್ದು, ಇದೀಗ ಒಂದು ಕೆ.ಜಿ. ಬೆಳ್ಳಿಗೆ 59,047 ರೂ.ಗಳಾಗಿದೆ. ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರ ಇದೀಗ ಕಡಿಮೆಯಾಗುತ್ತಿದೆ. ಈ ವಾರದ ಆರಂಭಕ್ಕೆ ಹೋಲಿಸಿದರೆ ಈಗ 10 ಗ್ರಾಂ ಚಿನ್ನದ ಬೆಲೆ 1,810 ರೂ. ಕಡಿಮೆಯಾಗಿದೆ. ಬೆಳ್ಳಿ ಒಂದು ಕೆಜಿಗೆ 9,655 ರೂ. ಕಡಿಮೆಯಾಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
Published by: Sushma Chakre
First published: September 26, 2020, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading