Gold Rate Today: ದೀಪಾವಳಿಗೂ ಮೊದಲು ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ; ಇಲ್ಲಿದೆ ಇಂದಿನ ದರ

Gold Price: ಕಳೆದ ವಾರ ಬೆಳ್ಳಿ ದರ 3 ದಿನ ಇಳಿಕೆ ಹಾಗೂ 4  ದಿನ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 2400 ಇಳಿಕೆ ಕಂಡಂತಾಗಿತ್ತು. ಮಂಗಳವಾರ ಕೆಜಿ ಬೆಳ್ಳಿಗೆ 400 ರೂಪಾಯಿ ಏರಿಕೆ ಆಗಿದೆ.  ಈ ಮೂಲಕ 62,300 ರೂಪಾಯಿ ಆಗಿದೆ.

Gold

Gold

  • Share this:
    Gold Price Today: ಬೆಂಗಳೂರು (ನವೆಂಬರ್ 5): ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.  ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ಮೂರು ದಿನ ಏರಿಕೆ ಕಂಡು ಮೂರು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ  ವಾರ ಒಟ್ಟು 670  ರೂಪಾಯಿ ಏರಿಕೆ ಕಂಡಂತಾಗಿತ್ತು.  

    ಬುಧವಾರ ಆಭರಣ ಚಿನ್ನದ ದರ 350 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನ 47,600 ರೂಪಾಯಿ ಆಗಿದೆ. ಶುದ್ಧ ಚಿನ್ನದ ದರ 10 ಗ್ರಾಂಗೆ 370 ರೂಪಾಯಿ ಏರಿಕೆ ಆಗಿದೆ. ಈ ಮೂಲಕ 51, 900 ರೂಪಾಯಿ ಆಗಿದೆ.

    ಕಳೆದ ವಾರ ಬೆಳ್ಳಿ ದರ 3 ದಿನ ಇಳಿಕೆ ಹಾಗೂ 4  ದಿನ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 2400 ಇಳಿಕೆ ಕಂಡಂತಾಗಿತ್ತು. ಮಂಗಳವಾರ ಕೆಜಿ ಬೆಳ್ಳಿಗೆ 400 ರೂಪಾಯಿ ಏರಿಕೆ ಆಗಿದೆ.  ಈ ಮೂಲಕ 62,300 ರೂಪಾಯಿ ಆಗಿದೆ.

    ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

    ಮತ್ತೆ ಏರಿಕೆ ಕಾಣಲಿದೆ ಚಿನ್ನ?:
    ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
    Published by:Rajesh Duggumane
    First published: