Gold Price: ದಾಖಲೆ ಬೆಲೆ ಏರಿಕೆ ಕಂಡ ಬಂಗಾರ; 39 ಸಾವಿರ ಗಡಿಯತ್ತ ಚಿನ್ನ, ಬೆಳ್ಳಿ ಕೂಡ ದುಬಾರಿ

Todays Gold Price : ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಕೆಯಾಗಿದ್ದು,  ಡಾಲರ್​ ದರ 71ರೂ ಏರಿಕೆ ಕಂಡಿದೆ. ಇದರಿಂದಾಗಿ ದೇಶಿಯ ಬಂಗಾರದ ಬೆಲೆ ಹೆಚ್ಚಳಗೊಂಡಿದೆ. ಈ ಹಿನ್ನೆಲೆ ಬಂಗಾರದ ಬೆಲೆ 10 ಗ್ರಾಂಗೆ 38,716 ರೂ ಆಗಿದೆ

Seema.R | news18-kannada
Updated:August 13, 2019, 1:29 PM IST
Gold Price: ದಾಖಲೆ ಬೆಲೆ ಏರಿಕೆ ಕಂಡ ಬಂಗಾರ; 39 ಸಾವಿರ ಗಡಿಯತ್ತ ಚಿನ್ನ, ಬೆಳ್ಳಿ ಕೂಡ ದುಬಾರಿ
ಬಂಗಾರದ ಬೆಲೆ
  • Share this:
ನವದೆಹಲಿ (ಆ.13): ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ ಕಂಡಿದ್ದು, 39 ಸಾವಿರ ಗಡಿಯತ್ತ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಕೆಯಾಗಿದ್ದು,  ಡಾಲರ್​ ದರ 71ರೂ ಏರಿಕೆ ಕಂಡಿದೆ. ಇದರಿಂದಾಗಿ ದೇಶಿಯ ಬಂಗಾರದ ಬೆಲೆ ಹೆಚ್ಚಳಗೊಂಡಿದೆ. ಈ ಹಿನ್ನೆಲೆ ಬಂಗಾರದ ಬೆಲೆ 10 ಗ್ರಾಂಗೆ 38,716 ರೂ ಆಗಿದೆ ಎಂದು ಪಿಟಿಐ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಂಗಾರದ ಹೂಡಿಕೆ ಹೆಚ್ಚಾಗಿರುವುದು ಬಂಗಾರದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಈ ವರ್ಷದಲ್ಲಿ ಶೇ 17 ರಷ್ಟು ಬಂಗಾರದ ಬೆಲೆ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಇದನ್ನು ಓದಿ: ಮೋದಿ-ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನಿಕಾಂತ್​​ ವಿರುದ್ಧ ಕಾಂಗ್ರೆಸ್​ ಕಿಡಿ

ಮುಂಬೈನಲ್ಲಿ 24 ಕ್ಯಾರೆಕ್ಟರ್​ ಬಂಗಾರದ ಬೆಲೆ 38,716ರೂ ಇದ್ದು, 22 ಕ್ಯಾರೆಕ್ಟರ್​ ಬಂಗಾರದ ಬೆಲೆ 36,200 ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಕ್ಟರ್​ ಬಂಗಾರ 37,165 ಇದ್ದು, ಆಭರಣ ಚಿನ್ನದ ಬೆಲೆ 34,750 ಇದೆ. ಬೆಳ್ಳಿ ದರ ಕೂಡ ಏರಿಕೆ ಕಂಡಿದ್ದು ಕೆಜಿಗೆ 47.300 ರೂ ಇದೆ.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ