Gold Price: ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿಯಲ್ಲಿ ಕೊಂಚ ಇಳಿಕೆ

Gold Silver Rate: ಬೆಂಗಳೂರಿನಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 45,360 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ 47,510 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಾರಕ ಕೊರೋನಾ ವೈರಸ್ ಹಿನ್ನಲೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಲಾಕ್​ಡೌನ್​ ಅವಧಿಯಲ್ಲಿ ಚಿನ್ನದ ಬೆಲೆ ಸಂಪೂರ್ಣ ನೆಲಕಚ್ಚಿತ್ತು. ಸದ್ಯ ಕಾರ್ಯಚಟುವಟಿಕೆಗಳು ಆರಂಭವಾಗಿದ್ದು ಚಿನ್ನಕ್ಕೆ ಭಾರೀ ಬೇಡಿಕೆ ಬಂದಿದೆ. ಕೊರೋನಾ ಆರ್ಭಟದ ನಡುವೆಯೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಭಾರತದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ.

  ಇಂದು 10 ಗ್ರಾಂ ಚಿನ್ನದ ಬೆಲೆ 48,190 ರೂನಿಂದ 48,333 ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡಿದ್ದು, 1 ಕೆ.ಜಿ ಬೆಳ್ಳಿ 48,800 ರೂಪಾಯಿಯಿಂದ 48,716 ರೂಪಾಯಿಗೆ ಇಳಿಕೆಯಾಗಿದೆ. ಈ ಮೂಲಕ ದೇಶಾದ್ಯಂತ ಚಿನ್ನದ ಬೆಲೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

  Petrol Price: ದೇಶದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್​​ಗಿಂತಲೂ ಡೀಸೆಲ್​​​​ ಬೆಲೆ ಜಾಸ್ತಿ ; ಒಂದು ಲೀಟರ್​​ಗೆ ಎಷ್ಟು ಗೊತ್ತೇ?

  ದೆಹಲಿಯಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 46,810 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510ರೂ. ಆಗಿದೆ. ಇನ್ನೂ ಮುಂಬೈನಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 46,660 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದೆ.

  ಇತ್ತ ಬೆಂಗಳೂರಿನಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 45,360 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ 47,510 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದೆ.

  Coronavirus Updates: ದೇಶದಲ್ಲಿ ಕೋವಿಡ್​​-19 ಕಾವು: ನಾಲ್ಕೂವರೆ ಲಕ್ಷ ದಾಟಿದ ಸೋಂಕಿತರ ಸಂಖ್ಯೆ

  ಚಿನ್ನದ ದರ ಈ ವರ್ಷ ಶೇ. 24ರಷ್ಟು ಏರಿಕೆಯಾಗಿದೆ. ಆರ್ಥಿಕ ಕಠಿಣ ಪರಿಸ್ಥಿತಿಗಳಲ್ಲಿ ಹಾಗೂ ಹಣದುಬ್ಬರದ ವಿರುದ್ಧದ ತಡೆಯಾಗಿ ಚಿನ್ನವನ್ನು ಕಾಣಲಾಗುತ್ತದೆ. ಕಚ್ಚಾ ತೈಲ ದರ ಇಳಿಕೆ ಸಹ ಜಾಗತಿಕವಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿದೆ.
  First published: