Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ!

Gold, Silver Rate: ಚಿನ್ನದ ಬೆಲೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಆದರೆ, ಭಾರತದಲ್ಲಿ ಚಿನ್ನದ ಬೆಲೆ ಈ ಪ್ರಮಾಣದಲ್ಲಿ ಏರಿಕೆಯಾಗಲು ರಿಸರ್ವ್‌ ಬ್ಯಾಂಕ್‌ನ ನೀತಿ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದೇ ಕಾರಣ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಚಿನ್ನ

ಚಿನ್ನ

  • Share this:
ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಸೋಮವಾರದ ದರಗಳಿಗೆ ಹೋಲಿಸಿದರೆ ಮಂಗಳವಾರವೂ ಚಿನ್ನದ ಬೆಲೆ ಕನಿಷ್ಟ ಏರಿಕೆ ಕಂಡಿದೆ. ಈ ಮೂಲಕ ಚಿನ್ನ ದರ ಸತತ ನಾಲ್ಜನೇ ದಿನವೂ ಏರಿಕೆಯಾದಂತಾಗಿದೆ. ಗುಡ್ ರಿಟರ್ನ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇಂದು ಪ್ರತಿ ಗ್ರಾಂಗೆ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕೇವಲ 1 ರೂ. ಏರಿಕೆ ಕಂಡಿದೆ. ಅಂದರೆ ಸೋಮವಾರ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4990 ರೂ ಇದ್ದರೆ, ಮಂಗಳವಾರ ಈ ಬೆಲೆ 4991 ರೂ.ಗೆ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನ 5090 ರೂ. ನಿಂದ 5091 ರೂ ಗೆ ಏರಿಕೆ ಕಂಡಿದೆ. ಇದು ಈ ವರೆಗಿನ ಕನಿಷ್ಟ ಚಿನ್ನದ ದರ ಏರಿಕೆ ಎನ್ನಲಾಗುತ್ತಿದೆ.

ಹಳದಿ ಲೋಹ ಚಿನ್ನ ಭಾರತದ ವಿವಿಧ ನಗರದಲ್ಲಿ ವಿಭಿನ್ನ ಮುಖ ಬೆಲೆಯಲ್ಲಿ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 50,010 ರೂ. ಗೆ ಮಾರಾಟವಾಗುತ್ತಿದ್ದರೆ, ಇದೇ ಪ್ರಮಾಣದ ಚಿನ್ನದ ಬೆಲೆ ಬೆಂಗಳೂರಿನಲ್ಲಿ 48510 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 49,080 ರೂ, ಮುಂಬೈನಲ್ಲಿ 49,910 ರೂ ಹಾಗೂ ಕೋಲ್ಕತ್ತಾದಲ್ಲಿ 50,430 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.

ಮತ್ತೊಂದೆಡೆ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ ಚೆನ್ನೈನಲ್ಲಿ 53,540 ರೂ ಆಗಿದ್ದರೆ, ಮುಂಬೈನಲ್ಲಿ 50,910 ರೂ, ದೆಹಲಿಯಲ್ಲಿ 54,550 ರೂ, ಕೋಲ್ಕತ್ತಾದಲ್ಲಿ 53,130 ಹಾಗೂ ಬೆಂಗಳೂರಿನಲ್ಲಿ 52,910 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : Aindrita Ray: ಡ್ರಗ್ಸ್‌ ಕೇಸ್‌ನಲ್ಲಿ ಸ್ಟಾರ್‌ ಜೋಡಿ; ಟುಮಾರೋಲ್ಯಾಂಡ್ ಪಾರ್ಟಿಯೇ ಮುಳುವಾಯ್ತಾ ಐಂದ್ರಿತಾ ರೇಗೆ?

ಚಿನ್ನದ ಬೆಲೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಆದರೆ, ಭಾರತದಲ್ಲಿ ಚಿನ್ನದ ಬೆಲೆ ಈ ಪ್ರಮಾಣದಲ್ಲಿ ಏರಿಕೆಯಾಗಲು ರಿಸರ್ವ್‌ ಬ್ಯಾಂಕ್‌ನ ನೀತಿ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದೇ ಕಾರಣ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಇದಲ್ಲದೆ, ಸ್ಪಾಟ್ ಚಿನ್ನದ ದರಗಳೂ ಶೇ0.3 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ 9 1,962.78 ಕ್ಕೆ ಲಭ್ಯವಾಗುತ್ತಿದೆ. ಇದನ್ನು ಹಿಂದಿನ ಬೆಲೆಗೆ ಹೋಲಿಕೆ ಮಾಡಿದರೆ ಶೇ.0.8 ರಷ್ಟು ಹೆಚ್ಚಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
Published by:MAshok Kumar
First published: