Gold Price: ಮೂರೇ ದಿನದಲ್ಲಿ 1 ಸಾವಿರ ರೂಪಾಯಿ ಏರಿಕೆ ಕಂಡ ಚಿನ್ನ, ಒಂದೇ ದಿನದಲ್ಲಿ 2 ಸಾವಿರ ರೂ ಜಿಗಿತ ಕಂಡ ಬೆಳ್ಳಿ

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜು.10): ಕೋರೋನಾ ವೈರಸ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿ ಇದ್ದಾರೆ.  ಈ ಮಧ್ಯೆ ಚಿನ್ನಕ್ಕೆ ಮೊದಲಿನಷ್ಟು ಬೇಡಿಕೆ ಇಲ್ಲದಿದ್ದರೂ ಚಿನ್ನ ಖರೀದಿ ಜೋರಾಗಿದೆ. ಲಾಕ್​ಡೌನ್​ಗೂ ಮೊದಲು 40ರ ಗಡಿಯಲ್ಲಿದ್ದ ಚಿನ್ನ ಈಗ 50ರ ಗಡಿ ತಲುಪಿದೆ. ಕೇವಲ ಮೂರು ದಿನದಲ್ಲಿ ಚಿನ್ನದ ದರ 1000 ಸಾವಿರ ರೂಪಾಯಿ ಏರಿಕೆ ಕಂಡಿದೆ. ಗುರುವಾರ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 380 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 46,380 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 440 ರೂಪಾಯಿ ಏರಿಕೆ ಕಂಡಿದ್ದು, 50,600 ರೂಪಾಯಿ ಆಗಿದೆ. 

  ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಳಿತ ಕಾಣುತ್ದೆತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಸತತ ಏರಿಕೆ ಕಾಣುತ್ತಿದೆ. ಒಂದೇ ದಿನ ಬೆಳ್ಳಿ ಬೆಲೆ 1880 ರೂಪಾಯಿ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 51,900 ರೂಪಾಯಿ ಆಗಿದೆ.

  ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

  ವರ್ಷಾಂತ್ಯಕ್ಕೆ 55  ಸಾವಿರದ ಗಡಿ ತಲುಪಲಿದೆ ಚಿನ್ನ?:

  ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ moneycontrol ವೆಬ್ಸೈಟ್ ವರದಿಮಾಡಿದೆ. ಸದ್ಯ, ಲಾಕ್ಡೌನ್ ಪೂರ್ಣಗೊಂಡಿದೆ. ಆದರೆ, ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಲಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
  Published by:Rajesh Duggumane
  First published: