Gold Price: ಒಂದೇ ದಿನ 6,500 ರೂಪಾಯಿ ಏರಿಕೆ ಕಂಡ ಬೆಳ್ಳಿ; ಚಿನ್ನ ಖರೀದಿದಾರರಿಗೂ ಶಾಕ್​

Gold Silver Rate: ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

news18-kannada
Updated:August 6, 2020, 9:44 AM IST
Gold Price: ಒಂದೇ ದಿನ 6,500 ರೂಪಾಯಿ ಏರಿಕೆ ಕಂಡ ಬೆಳ್ಳಿ; ಚಿನ್ನ ಖರೀದಿದಾರರಿಗೂ ಶಾಕ್​
ಚಿನ್ನ
  • Share this:
ಬೆಂಗಳೂರು (ಆ.6): ಇತ್ತೀಚೆಗೆ ಕೊರೋನಾ ಜೊತೆ ಜೊತೆಗೆ ಚರ್ಚೆಯಲ್ಲಿರುವ ಮತ್ತೊಂದು ವಿಚಾರ ಎಂದರೆ ಅದು ಚಿನ್ನದ ದರ. ಯಾವಾಗ ಕೊರೋನಾ ವೈರಸ್​ ದೇಶಕ್ಕೆ ಲಗ್ಗೆ ಇಟ್ಟಿತ್ತೋ ಅಂದಿನಿಂದ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಲೇ ಇದೆ. ಶುದ್ಧ ಚಿನ್ನ 56 ಸಾವಿರದ ಗಡಿ ದಾಟಿದರೆ, ಬೆಳ್ಳಿ ದರ 52 ಸಾವಿರದ ಗಡಿ ಸಮೀಪಿಸಿದೆ. ಬುಧವಾರ ಆಭರಣ ಚಿನ್ನ 10 ಗ್ರಾಂಗೆ 900 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 51,800 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 970 ರೂಪಾಯಿ ಏರಿಕೆ ಕಂಡಿದ್ದು, 56,5600 ರೂಪಾಯಿ ಆಗಿದೆ. 

ಬೆಳ್ಳಿ ಖರೀದಿದಾರರಿಗೂ ಸಿಹಿ ಸುದ್ದಿ ಸಿಗುತ್ತಿಲ್ಲ. ಬೆಳ್ಳಿ ಬೆಲೆಯಲ್ಲಾದರೂ ಇಳಿಕೆ ಕಾಣಬಹುದು ಎಂದು ಕಾದು ಕೂತಿದ್ದವರಿಗೂ ನಿರಾಸೆ ಆಗಿದೆ. ನಿನ್ನೆ ಒಂದೇ ದಿನ ಕೆಜಿ ಬೆಳ್ಳಿಗೆ 6,450 ರೂಪಾಯಿ ಏರಿಕೆ ಕಾಣುವ ಮೂಲಕ ಬೆಳ್ಳಿ ದರ 71,500 ರೂಪಾಯಿ ಏರಿಕೆ ಕಂಡಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ: Chikmagalur Rain: ಮಲೆನಾಡಿನ ಮಳೆಗೆ ಚಿಕ್ಕಮಗಳೂರಿನಲ್ಲಿ ಮೊದಲ ಬಲಿ; ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತ

ಶೀಘ್ರವೇ 55  ಸಾವಿರದ ಗಡಿ ತಲುಪಲಿದೆ ಚಿನ್ನ?:

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
Published by: Rajesh Duggumane
First published: August 6, 2020, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading