Gold Price Today: ಸತತ ಇಳಿಕೆ ಹಾದಿಯಲ್ಲಿ ಚಿನ್ನದ ಬೆಲೆ; ಎಷ್ಟಿದೆ ಇಂದಿನ ಆಭರಣ ದರ?

ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

news18-kannada
Updated:October 31, 2020, 10:07 AM IST
Gold Price Today: ಸತತ ಇಳಿಕೆ ಹಾದಿಯಲ್ಲಿ ಚಿನ್ನದ ಬೆಲೆ; ಎಷ್ಟಿದೆ ಇಂದಿನ ಆಭರಣ ದರ?
Gold prices
  • Share this:
Gold Price Today: ಬೆಂಗಳೂರು (ಅಕ್ಟೋಬರ್ 31): ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.  ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿತ್ತು. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ  ವಾರ ಒಟ್ಟು 940 ರೂಪಾಯಿ ಇಳಿಕೆ ಕಂಡಂತಾಗಿತ್ತು.

ಶುಕ್ರವಾರ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಆಭರಣ ದರ 10 ಗ್ರಾಂಗೆ 50 ರೂಪಾಯಿ ಇಳಿಕೆ ಕಂಡು 47,340 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 50 ರೂಪಾಯಿ ಇಳಿಕೆ ಕಾಣುವ ಮೂಲಕ 51,640 ರೂಪಾಯಿ ಆಗಿದೆ. ಮಂಗಳವಾರ ಚಿನ್ನದ ದರ ಸುಮಾರು ಒಂದು ಸಾವಿರ ರೂಪಾಯಿ ಏರಿಕೆ ಕಂಡಿತ್ತು. ನಂತರ ಮೂರು ದಿನ ನೇರವಾಗಿ ಚಿನ್ನದ ದರ ಇಳಿಕೆ ಕಂಡಿದೆ.

ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2  ದಿನ ಏರಿಕೆ ಕಂಡಿದೆ.  ಈ ಮೂಲಕ ಬೆಳ್ಳಿ ದರ 350  ರೂಪಾಯಿ ಏರಿಕೆ ಕಂಡಂತಾಗಿತ್ತು. ಶುಕ್ರವಾರ ಕೆಜಿ ಚಿನ್ನ 2210 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 60,200 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

Gold rate today gold price in Bangalore Gold rate on September 20,
d ಸಾಂದರ್ಭಿಕ ಚಿತ್ರ


ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Published by: Rajesh Duggumane
First published: October 31, 2020, 10:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading