Gold Rate: ಹಬ್ಬದ ಸಮಯದಲ್ಲಿ ಚಿನ್ನದ ದರದಲ್ಲಿ ಭಾರೀ ಏರಿಕೆ; ಇಲ್ಲಿದೆ ಇಂದಿನ ದರ

ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2  ದಿನ ಏರಿಕೆ ಕಂಡಿತ್ತು.  ಈ ಮೂಲಕ ಬೆಳ್ಳಿ ದರ 1,690 ರೂಪಾಯಿ ಏರಿಕೆ ಕಂಡಂತಾಗಿತ್ತು. ಶನಿವಾರ ಕೆಜಿ ಬೆಳ್ಳಿಗೆ 600 ರೂಪಾಯಿ ಏರಿಕೆ ಕಾಣುವ ಮೂಲಕ 61, 600 ರೂಪಾಯಿ ಆಗಿದೆ.

news18-kannada
Updated:October 18, 2020, 9:34 AM IST
Gold Rate: ಹಬ್ಬದ ಸಮಯದಲ್ಲಿ ಚಿನ್ನದ ದರದಲ್ಲಿ ಭಾರೀ ಏರಿಕೆ; ಇಲ್ಲಿದೆ ಇಂದಿನ ದರ
Gold
  • Share this:
Gold Price Today: ಬೆಂಗಳೂರು (ಅಕ್ಟೋಬರ್ 18): ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಕಳೆದ ವಾರ ಚಿನ್ನದ ದರ ಏರಿಕೆ ಕಂಡಿದೆ. ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ  ವಾರ ಒಟ್ಟು 370 ರೂಪಾಯಿ ಏರಿಕೆ ಕಂಡಿತ್ತು.

ವಾರದ ಕೊನೆಯಲ್ಲಿ ಚಿನ್ನದ ದರ ಏರಿಕೆ ಕಾಣಲು ಆರಂಭಿಸಿದೆ. ಈ ವಾರ ಮೂರು ಬಾರಿ ಚಿನ್ನದ ದರ ಏರಿಕೆ ಕಂಡಿದೆ. ಶನಿವಾರ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಆಭರಣ ಚಿನ್ನ 10 ಗ್ರಾಂಗೆ 47,850 ರೂಪಾಯಿ ಇದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 52,200 ರೂಪಾಯಿ ಇದೆ.

ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2  ದಿನ ಏರಿಕೆ ಕಂಡಿತ್ತು.  ಈ ಮೂಲಕ ಬೆಳ್ಳಿ ದರ 1,690 ರೂಪಾಯಿ ಏರಿಕೆ ಕಂಡಂತಾಗಿತ್ತು. ಶನಿವಾರ ಕೆಜಿ ಬೆಳ್ಳಿಗೆ 600 ರೂಪಾಯಿ ಏರಿಕೆ ಕಾಣುವ ಮೂಲಕ 61, 600 ರೂಪಾಯಿ ಆಗಿದೆ.

Gold Price: 22ct 24ct gold price gold rate In Bangalore Latest gold Price today's gold rate On October 12
ಚಿನ್ನ


ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Published by: Rajesh Duggumane
First published: October 18, 2020, 9:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading