Gold Price: ಆಭರಣ ಪ್ರಿಯರಿಗೆ ಬಿಗ್ ಶಾಕ್; 10 ಗ್ರಾಂ ಬಂಗಾರದ ಬೆಲೆ ಎಷ್ಟು ಗೊತ್ತಾ?

Gold Silver Rate: ಯು.ಎಸ್‌. - ಚೀನ ಮಧ್ಯೆ ಮತ್ತೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಹಾಗೂ ದುರ್ಬಲವಾಗಿರುವ ಡಾಲರ್‌ ಕಾರಣಕ್ಕೆ ಚಿನ್ನದ ದರ ಗಗನಕ್ಕೇರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:June 25, 2020, 10:59 AM IST
Gold Price: ಆಭರಣ ಪ್ರಿಯರಿಗೆ ಬಿಗ್ ಶಾಕ್; 10 ಗ್ರಾಂ ಬಂಗಾರದ ಬೆಲೆ ಎಷ್ಟು ಗೊತ್ತಾ?
ಚಿನ್ನದ ಮಳಿಗೆ
  • Share this:
ಲಾಕ್‌ಡೌನ್‌ ವೇಳೆ ಇಳಿಕೆ ದಾರಿ ಹಿಡಿದಿದ್ದ ಚಿನ್ನದ ದರ ಲಾಕ್​ಡೌನ್ ಬಳಿಕದ ದಿನಗಳಲ್ಲಿ ಏರುಗತಿಯತ್ತ ಸಾಗುತ್ತಿದೆ. ಇದೀಗ ಮತ್ತೆ ಗುರುವಾರ ಚಿನ್ನದ ದರ ಗರಿಷ್ಠ ಮಟ್ಟಕ್ಕೇರುವ ಮೂಲಕ ದಾಖಲೆ ಬರೆದಿದ್ದು, ಬೆಳಗ್ಗೆ ಪ್ರತಿ ಹತ್ತು ಗ್ರಾಮ್​ಗೆ ಬರೋಬ್ಬರಿ 50,000 ರೂ. ಗಳಿಗೆ ವಹಿವಾಟು ನಡೆದಿದೆ.

ದೆಹಲಿಯಲ್ಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 423 ರೂ. ಏರಿಕೆಯಾಗಿದ್ದು, 49,352 ರೂ.ಗೆ ತಲುಪಿದೆ. ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಚಿನ್ನದ ಬೆಲೆಯ ಏರಿಕೆಗೆ ಕಾರಣ ಎನ್ನಲಾಗಿದೆ.

ಕೋವಿಡ್​​-19 ತಡೆಗೆ ಮತ್ತೆ ಲಾಕ್​​ಡೌನ್ - ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

ನಿನ್ನೆ 10 ಗ್ರಾಂ ಚಿನ್ನದ ಬೆಲೆ 48,190 ರೂನಿಂದ 48,333 ರೂಪಾಯಿಗೆ ಏರಿಕೆಯಾಗಿತ್ತು. ಇನ್ನೂ ಇದೇ ವೇಳೆ ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡಿದ್ದು, 1 ಕೆ.ಜಿ ಬೆಳ್ಳಿ 48,450 ರೂಪಾಯಿಯಿಂದ 48,460 ರೂಪಾಯಿಗೆ ಇಳಿಕೆಯಾಗಿದೆ. ಈ ಮೂಲಕ ದೇಶಾದ್ಯಂತ ಚಿನ್ನದ ಬೆಲೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಮುಂಬೈನಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 45,690 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,460 ರೂ. ಆಗಿದೆ. ಇತ್ತ ಬೆಂಗಳೂರಿನಲ್ಲಿ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ 45,360 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,460 ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ 47,750 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,460 ರೂ. ಆಗಿದೆ.

Petrol Price: 19 ದಿನಗಳಿಂದ ನಿರಂತರವಾಗಿ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ

ಯು.ಎಸ್‌. - ಚೀನ ಮಧ್ಯೆ ಮತ್ತೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಹಾಗೂ ದುರ್ಬಲವಾಗಿರುವ ಡಾಲರ್‌ ಕಾರಣಕ್ಕೆ ಚಿನ್ನದ ದರ ಗಗನಕ್ಕೇರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
First published: June 25, 2020, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading