HOME » NEWS » National-international » GOLD COIN WAS SOLD FOR A RECORD SETTING RS 138 CRORE AT AN AUCTION IN NEW YORK KVD

ಒಂದೇ ಒಂದು ಹಳೆಯ ನಾಣ್ಯದಿಂದ ಬರೋಬ್ಬರಿ ₹138 ಕೋಟಿ ಗಳಿಸಿದ ಭೂಪ.. ಹೇಗೆ?

ಸ್ಟರ್ಟ್​​ ವಿಟ್ಝಮನ್​ಗೆ ಚಿಕ್ಕಂದಿನಿಂದಲೂ ಹಳೆಯ ನಾಣ್ಯಗಳನ್ನು, ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಈಗ ಅದೇ ಅವರನ್ನು ಕೋಟ್ಯಾಧೀಶ್ವರನ್ನಾಗಿ ಮಾಡಿದೆ.

Kavya V | news18-kannada
Updated:June 11, 2021, 5:25 PM IST
ಒಂದೇ ಒಂದು ಹಳೆಯ ನಾಣ್ಯದಿಂದ ಬರೋಬ್ಬರಿ ₹138 ಕೋಟಿ ಗಳಿಸಿದ ಭೂಪ.. ಹೇಗೆ?
ಪ್ರಾನಿಧಿನಿಕ ಚಿತ್ರ
  • Share this:
ಒಂದು ಕೋಟಿ ರೂಪಾಯಿ ಗಳಿಸಲು ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟೆಲ್ಲಾ ಶ್ರಮ ಹಾಕಬೇಕು. ಆದರೆ ನೂರಾರು ಕೋಟಿ ಸುಲಭದಲ್ಲಿ ಕೈ ಸೇರುತ್ತೆ ಅಂದರೆ ಆತ ನಿಜಕ್ಕೂ ಅದೃಷ್ಠವಂತನೇ ಸರಿ. ಇಂತಹದ್ದೇ ಅದೃಷ್ಟ ಕುಲಾಯಿಸಲು ಕಾರಣವಾಗಿದ್ದ ಒಂದೇ ಒಂದು ಹಳೆಯ ನಾಣ್ಯ. ನಂಬಲು ಅಸಾಧ್ಯವಾದರೂ ಇದು ಸತ್ಯ. ಹಳೆಯ ನಾಣ್ಯವನ್ನು ಹರಾಜಿನಲ್ಲಿ ಮಾರುವ ಮೂಲಕ ಬರೋಬ್ಬರಿ 138 ಕೋಟಿ ಗಳಿಸಲಾಗಿದೆ. ನ್ಯೂಯಾರ್ಕ್​​​ನಲ್ಲಿ ನಡೆದ ಹರಾಜಿನಲ್ಲಿ ಹಳೆಯ ಚಿನ್ನದ ನಾಣ್ಯ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 138 ಕೋಟಿಗೆ ಮಾರಾಟವಾಗಿದೆ. ಕೇವಲ ಒಂದು ನಾಣ್ಯದಿಂದ ಇಷ್ಟೊಂದು ಹಣ ಗಳಿಸಿದಾತ ಸ್ಟರ್ಟ್​​ ವಿಟ್ಝಮನ್​​.

1933ರಲ್ಲಿ ಅಮೆರಿಕಾದಲ್ಲಿ ಚಾಲ್ತಿಯಲ್ಲಿದ್ದ ಚಿನ್ನದ ನಾಣ್ಯ ದಾಖಲೆಯ ಮೊತ್ತಕ್ಕೆ ಹಾರಾಜಾಗಿದೆ. ಚಿನ್ನದ ನಾಣ್ಯದ ಒಂದು ಕಡೆ ಎರಡು ಗರುಡದ ಚಿನ್ಹೆ, ಮತ್ತೊಂದೆಡೆ ಸ್ಟ್ಯಾಚ್ಯು ಆಫ್​​ ಲಿಬರ್ಟಿ ಇದೆ. ಈ ಅಪರೂಪದ ನಾಣ್ಯದ ಅಸಲಿ ಬೆಲೆ 1,400 ರೂಪಾಯಿ. ಇದನ್ನು ಹರಾಜಿನಲ್ಲಿ ಇಡಲಾಗಿದ್ದರಿಂದ ಇದರ ಬೆಲೆ 138 ಕೋಟಿವರೆಗೆ ಹೆಚ್ಚಾಗಿದೆ. ಹರಾಜಿಗೂ ಮುನ್ನ ಅಪರೂಪದ ನಾಣ್ಯವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ನಾಣ್ಯ 10 ಕೋಟಿಯಿಂದ 100 ಕೋಟಿವರೆಗೆಗೂ ಹರಾಜು ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ಊಹೆಯನ್ನೇ ಮೀರಿ 138 ಕೋಟಿಗೆ ಬಿಕರಿಯಾಗಿದೆ.

ಇದರಿಂದ ಮಿಲಿಯನೇರ್​​ ಆಗಿರು ಸ್ಟರ್ಟ್​​ ವಿಟ್ಝಮನ್ ಒಬ್ಬ ಶೂ ಮೇಕರ್​. 2002ರಲ್ಲಿ ಈ ನಾಣ್ಯವನ್ನು ಇದೇ ರೀತಿ ಹರಾಜಿನಲ್ಲಿ 50 ಕೋಟಿ ಕೊಟ್ಟು ಕೊಂಡುಕೊಂಡಿದ್ದರು. 19 ವರ್ಷಗಳ ಕಾಲ ಸ್ಟರ್ಟ್​​ ವಿಟ್ಝಮನ್ ಬಳಿಯಿದ್ದ ಈ ನಾಣ್ಯದ ಬೆಲೆ ಈಗ 138 ಕೋಟಿ ಮುಟ್ಟಿದೆ. 50 ಕೋಟಿ ಕೊಟ್ಟು ನಾಣ್ಯ ಖರೀದಿಸಿದ್ದ ಸ್ಟರ್ಟ್​​ ವಿಟ್ಝಮನ್ ಗೆ 19 ವರ್ಷಗಳಲ್ಲಿ 88 ಕೋಟಿ ಲಾಭ ತಂದು ಕೊಟ್ಟಿದೆ. ಅಪರೂಪದ ನಾಣ್ಯಗಳನ್ನು ಮಿಲಿಯನ್​​ ಗಟ್ಟಲೆ ಹಣ ಕೊಟ್ಟು ಕೊಂಡುಕೊಳ್ಳುವ ವರ್ಗವೇ ಅಮೆರಿಕಾದಲ್ಲಿದೆ. ಶ್ರೀಮಂತರು ಇಂತಹ ಅಪರೂಪದ ವಸ್ತುಗಳನ್ನು ದುಬಾರಿ ಬೆಲೆಗೆ ಖರೀದಿಸುವುದು ಪ್ರತಿಷ್ಠೆಯ ವಿಷಯವಾಗಿದೆ.

ಇದೇ ಹರಾಜಿನಲ್ಲಿ ಸ್ಟರ್ಟ್​​ ವಿಟ್ಝಮನ್ ಹಳೆಯ ಸ್ಟ್ಯಾಪ್​​ (ಅಂಚೆಚೀಟಿ)ನ 60 ಕೋಟಿಗೆ ಮಾರಾಟ ಮಾಡಿದ್ದಾರೆ. ಸ್ಟರ್ಟ್​​ ವಿಟ್ಝಮನ್​ಗೆ ಚಿಕ್ಕಂದಿನಿಂದಲೂ ಹಳೆಯ ನಾಣ್ಯಗಳನ್ನು, ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಈಗ ಅದೇ ಅವರನ್ನು ಕೋಟ್ಯಾಧೀಶ್ವರನ್ನಾಗಿ ಮಾಡಿದೆ. ಹಳೆ ವಸ್ತುಗಳ ಹರಾಜಿನಿಂದ ಬಂದ ಹಣದಲ್ಲಿ ಬಹುತೇಕ ಭಾಗವನ್ನು ಸ್ಟರ್ಟ್​​ ವಿಟ್ಝಮನ್ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸುತ್ತಾರೆ. ಆರೋಗ್ಯ, ಶಿಕ್ಷಣ, ಮ್ಯೂಸಿಯಮ್​ಗಳಿಗೆ ಭಾರೀ ಮೊತ್ತವನ್ನು ದೇಣಿಗೆಯಾಗಿ ನೀಡುತ್ತಾರೆ.

ಇದನ್ನೂ ಓದಿ : ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 11, 2021, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories