HOME » NEWS » National-international » GODMAN ARRESTED IN RAJASTHAN FOR RAPING 4 WOMEN BETWEEN 2005 AND 2017 MAK

Godman Arrested: 4 ಮಹಿಳೆಯರನ್ನು ಅತ್ಯಾಚಾರ ಮಾಡಿದ್ದ ರಾಜಸ್ಥಾನದ ಸ್ವಯಂ ಘೋಷಿತ ದೇವ ಮಾನವ ಅಂದರ್​!

2005 ಮತ್ತು 2017 ರ ಸಮಯದಲ್ಲಿ ತನ್ನ ಆಶ್ರಮದಲ್ಲಿ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮುಖ್ಯ ದೂರುದಾರರು ಮತ್ತು ಆಕೆಯ ಇಬ್ಬರು ಅತ್ತಿಗೆಯರು ಮೇ 4 ರಂದು ಜೈಪುರ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

news18-kannada
Updated:May 26, 2021, 9:55 PM IST
Godman Arrested: 4 ಮಹಿಳೆಯರನ್ನು ಅತ್ಯಾಚಾರ ಮಾಡಿದ್ದ ರಾಜಸ್ಥಾನದ ಸ್ವಯಂ ಘೋಷಿತ ದೇವ ಮಾನವ ಅಂದರ್​!
ಬಂಧನಕ್ಕೊಳಗಾಗಿರುವ ಅತ್ಯಾಚಾರಾರೋಪಿ.
  • Share this:
ಜೈಪುರ (ಮೇ 26); ತನ್ನನ್ನು ತಾನು ದೇವ ಮಾನವ ಎಂದು ಹೇಳಿ ಜನರನ್ನು ನಂಬಿಸಿ ದೇವರ ಹೆಸರಿನಲ್ಲಿ 2005 ರಿಂದ 200ರ ಅವಧಿಯಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಮತ್ತೊಬ್ಬ ಮಹಿಳೆಯನ್ನು ಅತ್ಯಾಚಾರಕ್ಕೆ ಒಳಪಡಿಸಿದ್ದ ಆರೋಪದಲ್ಲಿ ಸ್ವಯಂಘೋಷಿತ ದೇವಮಾನವ ಯೋಗೇಂದ್ರ ಮೆಹ್ತಾ ಎಂಬಾತನನ್ನು ಜೈಪುರ ಪೊಲಿಸರು ಬಂಧಿಸಿದ್ದಾರೆ. ಆರೋಪಿ ಯೋಗೇಂದ್ರ ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಸುಮಾರು ಮೂರು ವಾರಗಳ ನಂತರ ಪೊಲೀಸರು ಆರೋಪಿಯನ್ನು ಮಂಳವಾರ ಬಂಧಿಸಿದ್ದಾರೆ. ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಈ ಸ್ವಯಂಘೋಷಿತ ದೇವಮಾನವ ಮೆಹ್ತಾ (56) ವಿಸ್ತಾರವಾದ ಆಶ್ರಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

2005 ಮತ್ತು 2017 ರ ಸಮಯದಲ್ಲಿ ತನ್ನ ಆಶ್ರಮದಲ್ಲಿ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮುಖ್ಯ ದೂರುದಾರರು ಮತ್ತು ಆಕೆಯ ಇಬ್ಬರು ಅತ್ತಿಗೆಯರು ಮೇ 4 ರಂದು ಜೈಪುರ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾದ ಒಂದು ದಿನದ ನಂತರ ಮತ್ತೊಬ್ಬ ಮಹಿಳೆ ಕೂಡ ಮುಂದೆ ಬಂದು ಅತ್ಯಾಚಾರದ ದೂರು ನೀಡಿದ್ದಾರೆ. ಈ ಎಲ್ಲಾ ದೂರಿನ ಮೇಲೆ ಪೊಲೀಸರು ಸ್ವಯಂ ಘೋಷಿತ ದೇವ ಮಾನವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ದೂರುದಾರರಲ್ಲಿ ಓರ್ವ ಮಹಿಳೆ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು,"ನನ್ನ ಪತಿ 1998 ರಿಂದ ಆಶ್ರಮಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಯೋಗೇಂದ್ರ ಮೆಹ್ತಾ ಒಂದು ದಿನ ನನ್ನ ಗಂಡನಿಗೆ ಇಡೀ ಕುಟುಂಬದೊಂದಿಗೆ ಆಶ್ರಮಕ್ಕೆ ಬರಲು ಹೇಳಿದ್ದರು. ಹೀಗಾಗಿ 2005 ರಲ್ಲಿ ನಾನು ಆಶ್ರಮಕ್ಕೆ ಮೊದಲ ಬಾರಿ ಹೋಗಿದ್ದೆ. ನಂತರ ನಾನು ನಿಯಮಿತವಾಗಿ ಆಶ್ರಮಕ್ಕೆ ಭೇಟಿ ನೀಡಲು ಪ್ರಾರಂಭಿಸಿದೆ. ಆರಂಭದಲ್ಲಿ, ಎಲ್ಲವೂ ಸರಿಯಾಗಿತ್ತು. ನಾನು ಪ್ರತಿ ಆರು ತಿಂಗಳಿಗೊಮ್ಮೆ ಮೂರು-ನಾಲ್ಕು ದಿನಗಳ ಕಾಲ ಆಶ್ರಮದಲ್ಲಿಯೇ ಇರುತ್ತಿದ್ದೆವು.

ಇದನ್ನೂ ಓದಿ: Cooking Oil Price: 11 ವರ್ಷದಲ್ಲೇ ಗರಿಷ್ಠ ಮಟ್ಟ ತಲುಪಿದ ಅಡುಗೆ ಎಣ್ಣೆ ಬೆಲೆ; ಕೇಂದ್ರ ಆರೋಗ್ಯ ಇಲಾಖೆ ಕಳವಳ!

2005 ರಲ್ಲಿ ಆಶ್ರಮದಲ್ಲಿ ತಂಗಿದ್ದ ಸಮಯದಲ್ಲಿ, ನನ್ನನ್ನು ಆರೋಪಿಗಳ ಸಹಾಯಕರು ಅವರ ಕೋಣೆಗೆ ಕರಕೊಂಡು ಹೋದರರು. ನನಗೆ ಸ್ವಲ್ಪ ಕುಡಿಯಲು ಪಾನೀಯ ನೀಡಿ, ಅತ್ಯಾಚಾರ ಮಾಡಲಾಯಿತು. 2017 ರವರೆಗೆ ಆಶ್ರಮದಲ್ಲಿ ಮೆಹ್ತಾ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ" ಎಂದು ಮುಖ್ಯ ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಆಕೆಯ ಅತ್ತಿಗೆಯರು ಕೂಡ ಇದೇ ರೀತಿ ಶೋಷಣೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: PM Cares: ಪಿಎಂ ಕೇರ್ಸ್​ ಹಣದಲ್ಲಿ ನೀಡಲಾದ 150 ವೆಂಟಿಲೇಟರ್​​ಗಳ ಪೈಕಿ 113 ನಿಶ್ಪ್ರಯೋಜಕ; ಬಾಂಬೆ ಹೈಕೋರ್ಟ್ ಕಿಡಿ!

"ನಾನು ಆಕ್ಷೇಪಿಸಿದ ಪ್ರತಿ ಬಾರಿಯೂ, ಇದು ಒಂದು ಆಶೀರ್ವಾದ ಎಂದು ಮೆಹ್ತಾ ಹೇಳಿದ್ದರು. ಅವರು ಮಾಡುತ್ತಿದ್ದ ಲೈಂಗಿಕ ದುರುಪಯೋಗದ ಬಗ್ಗೆ ನಾನು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು" ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬ ಮಹಿಳೆ ಕೂಡ ಇದೇ ಅವಧಿಯಲ್ಲಿ ತಾನು ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.
Youtube Video

ಸ್ವಯಂಘೋಷಿತ ದೇವಮಾನವ ಎಂದು ಹೇಳಿಕೊಂಡಿದ್ದ ಯೋಗೇಂದ್ರ ಮೆಹ್ತಾ ಬಂಧನ ಅಷ್ಟು ಸುಲಭದ್ದಾಗಿರಲಿಲ್ಲ. ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು ಇವರ ಒತ್ತಡದ ಕಾರಣ ಬಂಧನ ತುಂಬಾ ಕಷ್ಟದ್ದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published by: MAshok Kumar
First published: May 26, 2021, 9:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories