News18 India World Cup 2019

ಗೋಧ್ರಾ ಹತ್ಯಾಕಾಂಡ; ವಿಶೇಷ ಎಸ್​ಐಟಿ ನ್ಯಾಯಾಲಯದಿಂದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

news18
Updated:August 27, 2018, 6:38 PM IST
ಗೋಧ್ರಾ ಹತ್ಯಾಕಾಂಡ; ವಿಶೇಷ ಎಸ್​ಐಟಿ ನ್ಯಾಯಾಲಯದಿಂದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
news18
Updated: August 27, 2018, 6:38 PM IST
ಅಹಮದಾಬಾದ್​ (ಆ. 27): 2002ರಲ್ಲಿ ನಡೆದಿದ್ದ ಗೋಧ್ರಾ ರೈಲು ಹತ್ಯಾಕಾಂಡದ ಕುರಿತು ಇಂದು ವಿಶೇಷ ಎಸ್ಐಟಿ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಗೋಧ್ರಾ ಹತ್ಯಾಕಾಂಡದಲ್ಲಿ ಸಾಬರಮತಿ ರೈಲಿನ 2 ಕೋಚ್​ನಲ್ಲಿದ್ದ 59 ಕರಸೇವಕರು ಜೀವಂತವಾಗಿ ಸುಟ್ಟುಹೋಗಿದ್ದರು. ಗುಜರಾತಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕೋಮುಗಲಭೆಗೆ ಈ ದುರಂತ ಕಾರಣವಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 1 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಧೀಶ ಎಚ್. ಸಿ. ವೋರಾ ನೀಡಿರುವ ತೀರ್ಪಿನಲ್ಲಿ ಫಾರೂಕ್ ಬಾನಾ ಹಾಗೂ ಇಮ್ರಾನ್ ಶೇರು ಎಂಬ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಳಿದ ಮೂವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಲಾಗಿದೆ.

ಪ್ರಕರಣದಲ್ಲಿ ಆರೋಪಿಗಳಾಗಿರುವವರಲ್ಲಿ ಇನ್ನೂ ಎಂಟು ಮಂದಿ ತಲೆಮರೆಸಿಕೊಂಡಿದ್ದಾರೆ. ಇವರ ಮೇಲೆ 2011ರ ಮಾರ್ಚ್ ತಿಂಗಳಲ್ಲಿ ಎಸ್ಐಟಿ ನ್ಯಾಯಾಲಯ ಪ್ರಕರಣ ಕುರಿತು ಆರೋಪಪಟ್ಟಿ ದಾಖಲಿಸಿದಾಗ 31 ಜನರ ಮೇಲೆ ದೋಷಾರೋಪಣೆ ಮಾಡಿತ್ತು. ಇದರಲ್ಲಿ 11 ಜನರಿಗೆ ಮರಣದಂಡನೆ ಹಾಗೂ 20 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ನಂತರ 2017ರಲ್ಲಿ ಗುಜರಾತ್​ ಹೈಕೋರ್ಟ್​ 11 ಆರೋಪಿಗಳಿಗೆ ಮರಣದಂಡನೆ ವಿಧಿಸಿತ್ತು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...